For Quick Alerts
  ALLOW NOTIFICATIONS  
  For Daily Alerts

  ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಹೃತಿಕ್ ರೋಷನ್ ಮತ್ತು ಪ್ರಭಾಸ್?

  |

  ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಪ್ರಭಾಸ್ ಗೆ ಬೇಡಿಕೆ ಹೆಚ್ಚಿದೆ. ಪ್ರಭಾಸ್ ಹಿಂದಿ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಮಾತು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಇದುವರೆಗೂ ಯಾವುದೆ ಹಿಂದಿ ಸಿನಿಮಾಗಳಲ್ಲಿ ಪ್ರಭಾಸ್ ಕಾಣಿಸಿಕೊಂಡಿಲ್ಲ.

  Saroj Khan 8 ತಿಂಗಳ ಮಗಳ ಅಂತ್ಯಸಂಸ್ಕಾರ ಮುಗಿಸಿ ನೇರ ಶೂಟಿಂಗ್‌ಗೆ ಹೋಗಿದ್ದರು | Filmibeat Kannada

  ಸದ್ಯ ಪ್ರಭಾಸ್ ಇನ್ನೂ ಹೆಸರಿಡದ 20ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಭಾಸ್ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ರೆಬಲ್ ಸ್ಟಾರ್ ಹಿಂದಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಮಲ್ಟಿ ಸ್ಟಾರರ್ ಸಿನಿಮಾವಾಗಿದ್ದು, ಹೃತಿಕ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಮುಂದೆ ಓದಿ...

  ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್

  ಒಂದೇ ಸಿನಿಮಾದಲ್ಲಿ ಸೂಪರ್ ಸ್ಟಾರ್

  ಒಂದೇ ಸಿನಿಮಾದಲ್ಲಿ ಸೂಪರ್ ಸ್ಟಾರ್

  ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಪ್ರಭಾಸ್ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಈ ಸಿನಿಮಾಗೆ ಪ್ರಭಾಸ್ ಈಗಾಗಲೆ ಒಪ್ಪಿಗೆ ನೀಡಿದ್ದಾರಂತೆ. ಆದರೆ ಹೃತಿಕ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

  ಇಬ್ಬರನ್ನು ಒಟ್ಟಿಗೆ ಕರೆತರುತ್ತಾರಾ ಓಂ ರೌತ್?

  ಇಬ್ಬರನ್ನು ಒಟ್ಟಿಗೆ ಕರೆತರುತ್ತಾರಾ ಓಂ ರೌತ್?

  ಹೃತಿಕ್ ಮತ್ತು ಪ್ರಭಾಸ್ ಸಿನಿಮಾಗೆ ತಾನಾಜಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಓಂ ರೌತ್ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಅಜಯ್ ದೇವಗನ್, ಸೈಫ್ ಅಲಿ ಖಾನ್ ಸೇರಿದ್ದಂತೆ ದೊಡ್ಡ ತಾರಾಬಳಗವಿದ್ದ ತಾನಾಜಿ ಸಿನಿಮಾಗೆ ನಿರ್ದೇಶನ ಮಾಡಿದ್ದ ಓಂ ರೌತ್ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

  'ಬಾಹುಬಲಿ' ಫೈಟ್ ದೃಶ್ಯಕ್ಕೆ ಮಾಸ್ಕ್ ಧರಿಸಿದ ಗ್ರಾಫಿಕ್ಸ್ ಕಲಾವಿದರು: ರಾಜಮೌಳಿ ಹೇಳಿದ್ದೇನು?'ಬಾಹುಬಲಿ' ಫೈಟ್ ದೃಶ್ಯಕ್ಕೆ ಮಾಸ್ಕ್ ಧರಿಸಿದ ಗ್ರಾಫಿಕ್ಸ್ ಕಲಾವಿದರು: ರಾಜಮೌಳಿ ಹೇಳಿದ್ದೇನು?

  2 ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿ

  2 ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿ

  ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಹಿಂದಿಯಲ್ಲಿಯೂ ರಿಲೀಸ್ ಆಗಿತ್ತು. ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಾಣದಿದ್ದರು. ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡಿತ್ತು. ಪ್ರಭಾಸ್ ಸದ್ಯ 20ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಟೈಟಲ್ ಇನ್ನು ಅನೌನ್ಸ್ ಆಗಿಲ್ಲ. ಈ ಸಿನಿಮಾ ರಿಲೀಸ್ ಗೂ ಮೊದಲೆ ಪ್ರಭಾಸ್ 21ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ.

  ಪ್ರಭಾಸ್ ಅಭಿನಯದ 20ನೇ ಸಿನಿಮಾಗೆ ಟೈಟಲ್ ಫಿಕ್ಸ್?ಪ್ರಭಾಸ್ ಅಭಿನಯದ 20ನೇ ಸಿನಿಮಾಗೆ ಟೈಟಲ್ ಫಿಕ್ಸ್?

  ಇನ್ನೂ ಸಿನಿಮಾ ಅನೌನ್ಸ್ ಮಾಡದ ಹೃತಿಕ್

  ಇನ್ನೂ ಸಿನಿಮಾ ಅನೌನ್ಸ್ ಮಾಡದ ಹೃತಿಕ್

  ಹೃತಿಕ್ ರೋಷನ್ ಕಳೆದ ವರ್ಷ ಸೂಪರ್ 30 ಮತ್ತು ವಾರ್ ಎರಡು ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಎರಡು ಸೂಪರ್ ಸಕ್ಸಸ್ ನ ಬಳಿಕ ಹೃತಿಕ್ ಯಾವುದೆ ಸಿನಿಮಾ ಅನೌನ್ಸ್ ಮಾಡಿಲ್ಲ. ಆದರೆ ಹೃತಿಕ್ ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮಹಾಭಾರತ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಪ್ರಾರಂಭಕ್ಕೂ ಮೊದಲೆ ಹೃತಿಕ್ ಮತ್ತು ಪ್ರಭಾಸ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಯಾರು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

  English summary
  Tollywood Actor Prabhas to join hands with Hrithik Roshan for Director Om Raut's next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X