twitter
    For Quick Alerts
    ALLOW NOTIFICATIONS  
    For Daily Alerts

    'ನನ್ನ ಜೀವನದಲ್ಲಿ ಅತ್ಯಂತ ಕಷ್ಟದ ಸಿನಿಮಾ': ಬಾಜಿರಾವ್ ಮಸ್ತಾನಿಗೆ 5 ವರ್ಷ

    |

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಚಿತ್ರ ಬಾಜಿರಾವ್ ಮಸ್ತಾನಿ ತೆರೆಕಂಡ ಡಿಸೆಂಬರ್ 18ಕ್ಕೆ ಐದು ವರ್ಷ ಕಳೆದಿದೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಸಿನಿಮಾಗೆ ಐದು ವರ್ಷ ಪೂರೈಸಿದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಸಂತಸ ಹಂಚಿಕೊಂಡಿದ್ದಾರೆ.

    ಬಾಜಿರಾವ್ ಮಸ್ತಾನಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ದೀಪಿಕಾ, ಮಸ್ತಾನಿಯ ವ್ಯಕ್ತಿತ್ವವನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರೋಫೈಲ್ ಮಸ್ತಾನಿ ಫೋಟೋ ಮತ್ತು ಹೆಸರನ್ನು ಸಹ ಬದಲಾಯಿಸಿಕೊಂಡಿದ್ದಾರೆ.

    ನನ್ನನ್ನು ಹಿಂಬಾಲಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ; ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?ನನ್ನನ್ನು ಹಿಂಬಾಲಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ; ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಜಿರಾವ್ ಮಸ್ತಾನಿ 2015ರ ಡಿಸೆಂಬರ್ 19 ರಂದು ಬಿಡುಗಡೆಯಾಗಿತ್ತು. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

    Bajirao mastani Movie completes 5 years

    ಈ ಸಿನಿಮಾ ಬಿಡುಗಡೆ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ ''ಇದು ನನ್ನ ಜೀವನದಲ್ಲಿ ಅತ್ಯಂತ ಕಷ್ಟದ ಸಿನಿಮಾ'' ಎಂದು ಹೇಳಿಕೊಂಡಿದ್ದರು.

    ''ಬಾಜಿರಾವ್ ಮಸ್ತಾನಿ ನನ್ನ ವೃತ್ತಿ ಜೀವನದಲ್ಲಿ ಕಷ್ಟದ ಸಿನಿಮಾ. ನಾನು ಪ್ರಯತ್ನದ ಬಗ್ಗೆ ಮಾತನಾಡುವುದಿಲ್ಲ ಏಕಂದ್ರೆ ಅಂತಿಮವಾಗಿ ಅಭಿನಯ ಮುಖ್ಯವಾಗುತ್ತದೆ. ಬಾಜಿರಾವ್ ಮಸ್ತಾನಿ ಚಿತ್ರಕ್ಕೆ ಹೋಲಿಸಿಕೊಂಡರೆ ರಾಮ್ ಲೀಲಾ ಸುಲಭವಾಗಿತ್ತು'' ಎಂದು 2015ರ ಸಂದರ್ಶನವೊಂದರಲ್ಲಿ ಹೇಳಿದ್ದರು.

    ದೀಪಿಕಾ ಪಡುಕೋಣೆ ಚಿತ್ರದ ರೀಮೇಕ್‌ನಲ್ಲಿ ತ್ರಿಷಾ ನಟನೆ!ದೀಪಿಕಾ ಪಡುಕೋಣೆ ಚಿತ್ರದ ರೀಮೇಕ್‌ನಲ್ಲಿ ತ್ರಿಷಾ ನಟನೆ!

    ಅಂದ್ಹಾಗೆ, ಬಾಜಿರಾವ್ ಮಸ್ತಾನಿ ಚಿತ್ರವನ್ನು ಆರಂಭದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರ ಜೊತೆ ಮಾಡಬೇಕೆಂದು ಸಂಜಯ್ ಲೀಲಾ ಬನ್ಸಾಲಿ ನಿರ್ಧರಿಸಿದ್ದರು. ಆದ್ರೆ, ಆಗಿನ ಸಮಯಕ್ಕೆ ಆದ ಕೆಲವು ಬದಲಾವಣೆಗಳಿಂದ ಅದು ಸಾಧ್ಯವಾಗಿಲ್ಲ.

    Bajirao mastani Movie completes 5 years

    ನಂತರ ರಾಣಿ ಮುಖರ್ಜಿ ಮತ್ತು ಕರೀನಾ ಅವರನ್ನು ಸಹ ಸಂಪರ್ಕಿಸಲಾಗಿತ್ತು. ಇದೆಲ್ಲದಕ್ಕೂ ಮುಂಚೆ ಅಜಯ್ ದೇವಗನ್, ಶಾರೂಖ್ಖಾನ್, ಹೃತಿಕ್ ರೋಷನ್, ಕತ್ರಿನಾ ಕೈಫ್ ಅವರ ಹೆಸರುಗಳು ಸಹ ಈ ಚಿತ್ರದಲ್ಲಿ ಕೇಳಿ ಬಂದಿತ್ತು.

    ಆದ್ರೆ, ಅಂತಿಮವಾಗಿ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾಗೆ ಈ ಅದೃಷ್ಟದ ಬಾಗಿಲು ತೆರೆಯಿತು.

    English summary
    Deepika Padukone and Ranveer singh starrer Bajirao mastani movie completes 5 years.
    Saturday, December 19, 2020, 10:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X