For Quick Alerts
  ALLOW NOTIFICATIONS  
  For Daily Alerts

  ಚೆಕ್ ಬೌನ್ಸ್: 'ಭಜರಂಗಿ ಭಾಯಿಜಾನ್' ನಟಿಗೆ 2 ವರ್ಷ ಜೈಲು

  By Suneel
  |

  ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಚಿತ್ರದಲ್ಲಿ ನಟಿಸಿದ್ದ ಅಲ್ಕಾ ಕೌಶಲ್ ಚೆಕ್ ಬೌನ್ಸ್ ಕೇಸ್ ಒಂದರಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

  ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ಅಲ್ಕಾ ಕೌಶಲ್ ರವರು ಧಾರಾವಾಹಿ ನಿರ್ಮಾಣಕ್ಕಾಗಿ ಅವತಾರ್ ಸಿಂಗ್ ಎಂಬುವರ ಬಳಿ 50 ಲಕ್ಷ ಸಾಲ ಪಡೆದಿದ್ದರು. ಅವರು ತಮ್ಮ ಹಣ ವಾಪಸ್ ಕೇಳಿದಾಗ ಅಲ್ಕಾ ಕೌಶಲ್ 25 ಲಕ್ಷಗಳ ಎರಡು ಚೆಕ್ ಗಳನ್ನು ನೀಡಿದ್ದರು. ಈ ಚೆಕ್ ಗಳು ಬೌನ್ಸ್ ಆಗಿದ್ದ ಕಾರಣ ಅವತಾರ್ ಸಿಂಗ್ ರವರು ಹಣ ಹಿಂದಿರಿಗಿ ನೀಡದ ಕಾರಣ Malerkortla ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅಲ್ಕಾ ಕೌಶಲ್ ಮತ್ತು ಅವರ ತಾಯಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಲ್ಕಾ ಕೌಶಲ್ ಪಂಜಾಬ್ ನ ಸಂಗ್ರೂರ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿಯೂ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ನಟಿ ಮತ್ತು ಅವರ ತಾಯಿ ಶಿಕ್ಷೆಗೆ ಗುರಿಯಾಗಿದ್ದಾರೆ.

  ಅಂದಹಾಗೆ ಅಲ್ಕಾ ಕೌಶಲ್ ರವರು 'ಭಜರಂಗಿ ಭಾಯಿಜಾನ್' ಚಿತ್ರದಲ್ಲಿ ಕರಿನಾ ಕಪೂರ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಕಂಗನಾ ರನೌತ್ ಅಭಿನಯದ ಸೂಪರ್ ಹಿಟ್ ಮೂವಿ 'ಕ್ವೀನ್' ಚಿತ್ರದಲ್ಲಿ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದರು.

  English summary
  Bajrangi Bhaijaan actor Alka Kaushal and her mom sent to jail for two years

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X