For Quick Alerts
  ALLOW NOTIFICATIONS  
  For Daily Alerts

  ಸ್ವಂತ ಮನೆಯಿಲ್ಲ, ಕೊನೆಗಾಲಕ್ಕೆ ದುಡ್ಡಿಲ್ಲ, ಸಹಾಯ ಮಾಡಿ: ಹಿರಿಯ ನಟಿ ಕಣ್ಣೀರು

  |

  ಬಾಲಿವುಡ್ ಹಿರಿಯ ನಟಿ, 'ಭಜರಂಗಿ ಭಾಯಿಜಾನ್' ಖ್ಯಾತಿಯ ಸುನೀತಾ ಶಿರೋಲೆ ಕಷ್ಟದಲ್ಲಿದ್ದಾರೆ. ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. 85 ವರ್ಷದ ನಟಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಗತ್ಯ ಚಿಕಿತ್ಸೆ ಹಾಗೂ ಔಷಧಕ್ಕೆ ಸಹ ಹಣವಿಲ್ಲದ ಪರಿಸ್ಥಿತಿ ಎಂದು ಅಂಗಲಾಚಿದ್ದಾರೆ.

  ವರದಿಗಳ ಪ್ರಕಾರ ಸುನೀತಾ ಶಿರೋಲೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ಆರೋಗ್ಯ ಪರಿಸ್ಥಿತಿ ಸರಿಯಿಲ್ಲದೇ ಹೋದರು ಜೀವನೋಪಾಯಕ್ಕಾಗಿ ಕೊರೊನಾ ಸಮಯದಲ್ಲೂ ಕೆಲಸ ಮಾಡಿದ್ದಾರಂತೆ. ಆದ್ರೀಗ, ಕೆಲಸ ಮಾಡಲು ತಮ್ಮ ದೇಹ ಸಹಕರಿಸುತ್ತಿಲ್ಲ, ಅನಾರೋಗ್ಯ ಕಾಡುತ್ತಿದೆ, ದಯವಿಟ್ಟು ನನಗೆ ಆರ್ಥಿಕ ಸಹಾಯ ಮಾಡಿ ಎಂದು ನಟಿ ಬೇಡಿಕೊಂಡಿದ್ದಾರೆ.

  ಮುಂಬೈ ಬಿಟ್ಟು ಹೋದ ಮಗ: ನಟಿ ಮಲೈಕಾ ಆರೋರ ಭಾವುಕ ಪೋಸ್ಟ್ಮುಂಬೈ ಬಿಟ್ಟು ಹೋದ ಮಗ: ನಟಿ ಮಲೈಕಾ ಆರೋರ ಭಾವುಕ ಪೋಸ್ಟ್

  ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ನಟಿ ಸುನೀತಾ ಶಿರೋಲೆ, ''ನಾನು ಕೊರೊನಾ ಬರೋವರೆಗೂ ಕೆಲಸ ಮಾಡ್ತಿದ್ದೆ. ಕೋವಿಡ್ ಕಾಲದಲ್ಲಿ ನನ್ನಲ್ಲಿ ಉಳಿಸಿಕೊಂಡಿದ್ದ ಎಲ್ಲ ಹಣವನ್ನು ಬಳಕೆ ಮಾಡಿಕೊಂಡೆ. ದುರದೃಷ್ಟವಶಾತ್, ಆ ಸಮಯದಲ್ಲಿ ನಾನು ಮೂತ್ರಪಿಂಡದ ಸೋಂಕು ಮತ್ತು ತೀವ್ರವಾದ ಮೊಣಕಾಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು. ನಾನು ಆಸ್ಪತ್ರೆಯಲ್ಲಿ ಎರಡು ಬಾರಿ ಬಿದ್ದು ಕಾಲು ಪೆಟ್ಟುಗೊಂಡಿತು. ಈಗ ಕಾಲು ನೋವು ಹೆಚ್ಚಿದೆ. ಎದ್ದು ಓಡಾಡಲು ಕಷ್ಟ ಆಗ್ತಿದೆ. ಇದರ ಜೊತೆಗೆ ಬೇರೆ ಕಾಯಿಲೆಗಳನ್ನು ನನ್ನನ್ನು ಕಾಡುತ್ತಿದೆ'' ಎಂದು ಬೇಸರ ಹೊರಹಾಕಿದ್ದಾರೆ.

  ಖಾಸಗಿ ಫ್ಲ್ಯಾಟ್ನಲ್ಲಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದೆ. ಆದರೆ ಹಣದ ಸಮಸ್ಯೆಯಿಂದ ಕಳೆದ ಮೂರು ತಿಂಗಳವರೆಗೆ ಬಾಡಿಗೆ ಸಹ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಲುಕಾ ಚುಪ್ಪಿ' ಖ್ಯಾತಿಯ ಶಿರೋಲ್ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ಸೋದರ ಸಂಬಂಧಿಯ ಮದುವೆ ಸಂಭ್ರಮದಲ್ಲಿ ಐಶ್ವರ್ಯಾ ರೈ: ಡಾನ್ಸ್ ವಿಡಿಯೋ ವೈರಲ್ಸೋದರ ಸಂಬಂಧಿಯ ಮದುವೆ ಸಂಭ್ರಮದಲ್ಲಿ ಐಶ್ವರ್ಯಾ ರೈ: ಡಾನ್ಸ್ ವಿಡಿಯೋ ವೈರಲ್

  ನಟಿ ನೂಪುರ್ ಅಲಂಕರ್ ನೆರವು

  ನಟಿ ನೂಪುರ್ ಅಲಂಕರ್ ನೆರವು

  ಆ ಸಮಯದಲ್ಲಿ ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA) ಸುನೀತಾ ಶಿರೋಲ್ ಅವರ ಸಹಾಯಕ್ಕೆ ಬಂದಿದೆ. ನಟಿ ನೂಪುರ್ ಅಲಂಕರ್ ತನ್ನ ಫ್ಲ್ಯಾಟ್‌ಗೆ ಬಂದು ನನ್ನ ಆರೋಗ್ಯ ವಿಚಾರಿಸಿದರು. ಸದ್ಯಕ್ಕೆ ನೂಪುರ್ ಅವರ ಮನೆಯಲ್ಲಿ ತಾನು ಉಳಿದುಕೊಂಡಿದ್ದೇನೆ ಹಾಗೂ ನನಗಾಗಿ ನರ್ಸ್ ಒಬ್ಬರನ್ನು ನೇಮಿಸಿದ್ದಾರೆ ಎಂದು ಸುನೀತಾ ಶಿರೋಲೆ ಹೇಳಿದರು.

  ಕೆಲಸ ಮಾಡುವ ಬಯಕೆ, ಆದರೆ ಶಕ್ತಿಯಿಲ್ಲ

  ಕೆಲಸ ಮಾಡುವ ಬಯಕೆ, ಆದರೆ ಶಕ್ತಿಯಿಲ್ಲ

  ''ನನಗೆ ಹಣದ ಅವಶ್ಯಕತೆಯಿರುವುದರಿಂದ ನಾನು ಕೆಲಸ ಮಾಡಲು ಬಯಸುತ್ತೇನೆ, ಆದರೆ ನನ್ನ ಕಾಲಿನ ಸ್ಥಿತಿ ಹದಗೆಟ್ಟಿದೆ. ನಾನು ಮತ್ತೆ ಎದ್ದು ನಡೆಯಲು ಸಾಧ್ಯವೇ ಎಂದು ನನಗೆ ಗೊತ್ತಿಲ್ಲ. ಹಾಗಾಗಿ ನನ್ನ ಕಾಲುಗಳಿಗೆ ಶಕ್ತಿ ಬರುವವರೆಗೂ, ನಾನು ಮತ್ತೆ ಎದ್ದು ನಡೆಯುವವರೆಗೂ ನನಗೆ ಆರ್ಥಿಕ ಸಹಾಯ ಬೇಕಾಗಿದೆ'' ಎಂದು ಸುನೀತಾ ಶಿರೋಲೆ ಮನವಿ ಮಾಡಿಕೊಂಡಿದ್ದಾರೆ.

  ಸ್ವಂತ ಮನೆಯಿಲ್ಲ, ಕೊನೆಗಾಲಕ್ಕೆ ದುಡ್ಡಿಲ್ಲ

  ಸ್ವಂತ ಮನೆಯಿಲ್ಲ, ಕೊನೆಗಾಲಕ್ಕೆ ದುಡ್ಡಿಲ್ಲ

  ತನ್ನ ಪತಿ ಮತ್ತು ತಾನು ಸಂಪಾದನೆ ಮಾಡಿದ ಹಣವನ್ನೆಲ್ಲಾ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದೆವು ಎಂದು ನಟಿ ಬಹಿರಂಗಪಡಿಸಿದ್ದಾರೆ. ದುರಾದೃಷ್ಟವಶಾತ್, ಗೋದಾಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಎಲ್ಲವೂ ಸುಟ್ಟು ಭಸ್ಮ ಆಗಿತ್ತು. ಬಂಡವಾಳ, ಗೋದಾಮು ಎಲ್ಲವೂ ಕಳೆದುಕೊಂಡು ನಷ್ಟ ಅನುಭವಿಸಬೇಕಾಯಿತು ಎಂದು ಸುನೀತಾ ಶಿರೋಲೆ ಹೇಳಿಕೊಂಡಿದ್ದಾರೆ. ಆಕೆಯ ಪತಿ 2003ರಲ್ಲಿ ನಿಧನರಾದರು. ತನ್ನ ಕಷ್ಟದ ಸಮಯಕ್ಕಾಗಿ ಹಣವನ್ನು ಉಳಿಸದಿರುವುದು ಮತ್ತು ಮುಂಬೈನಲ್ಲಿ ಸ್ವಂತ ಮನೆ ಹೊಂದಿಲ್ಲದಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

  ಸುನೀತಾ ಶಿರೋಲೆ ಸಿನಿಮಾಗಳು

  ಸುನೀತಾ ಶಿರೋಲೆ ಸಿನಿಮಾಗಳು

  ಸುಮಾರು ವರ್ಷದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸುನೀತಾ ಶಿರೋಲೆ, ಭಜರಂಗಿ ಭಾಯಿಜಾನ್, ಲುಕಾ ಚುಪ್ಪಿ, ಶಪಿತ್, ಮುಂಬೈ ಮೇರಿ ಜಾನ್, ಮೇಡ್ ಇನ್ ಚೀನಾ, ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾ ಇಲ್ಲದ ಕಾರಣ ಮಿಸಸ್ ಕೌಶಿಕ್ ಕಿ ಪಾಂಚ್ ಬಹುಯಿನ್, ಕಿಸ್ ದೇಸ್ ಮೇ ಹೈ ಮೇರಾ ದಿಲ್ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿಯೂ ನಟಿಸಿದ್ದಾರೆ.

  English summary
  'Bajrangi Bhaijaan' actress Sunita Shirole ask financial help. she says ‘it’s very difficult to survive’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X