ಆಡಿಕೊಳ್ಳೋರ ಬಾಯಿ ಮುಚ್ಚಿಸಿದ ಬಜರಂಗಿ ಭಾಯಿಜಾನ್ ಬಾಲ ನಟಿ ; 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು..?

ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಬಜರಂಗಿ ಭಾಯಿಜಾನ್ ಚಿತ್ರದ ಮುನ್ನಿ ಅಲಿಯಾಸ್ ಹರ್ಷಾಲಿ ಮಲ್ಹೋತ್ರಾ ಸದ್ಯದ ತಾಜಾ ಉದಾಹರಣೆ.

ಹೌದು.. ಮುನ್ನಿ. ಬಜರಂಗಿ ಭಾಯಿಜಾನ್ ಚಿತ್ರದ ಚೈಲ್ಡ್ ಆರ್ಟಿಸ್ಟ್ . ತನ್ನ ಅಭಿನಯದಿಂದ ಸಲ್ಮಾನ್ ಖಾನ್ ಅವರನ್ನೇ ಚಿತ್ರದಲ್ಲಿ ಓವರ್ ಟೇಕ್ ಮಾಡಿದ್ದ ಹರ್ಷಾಲಿ ಆ ನಂತರ ಬೆಳಿತಾ ಬೆಳಿತಾ ಸಾಮಾಜಿಕ ಜಾಲತಾಣದ ವ್ಯಾಪ್ತಿಗೆ ಬಂದರು. ಟ್ರೋಲ್ ಮಾಡೋರ ಕೈಗೆ ಸಿಕ್ಕರು. ಅಲ್ಲಿಂದಾಚೆ ಹರ್ಷಾಲಿ ಕುಂತಲ್ಲಿ..ನಿಂತಲ್ಲಿ.. ಆಡಿಕೊಂಡವರೇ ಹೆಚ್ಚು. ಅದಕ್ಕೆ ಕಾರಣ ಹತ್ತಾರು.

bajrangi-bhaijaan-fame-harshaali-malhotra-responds-to-critics-by-sharing-her-10th-class-results

ಕೆಲವರಿಗೆ ಹರ್ಷಾಲಿ ಮಲ್ಹೋತ್ರಾ ಯಾನೆ ಮುನ್ನಿಗೆ ರಾತ್ರೋ ರಾತ್ರಿ ಸಿಕ್ಕ ಜನಪ್ರಿಯತೆಯನ್ನ ಸಹಿಸಿಕೊಳ್ಳಲು ಆಗದೇ ಇದ್ದರೆ, ಇನ್ನೂ ಹಲವರು ಎಲ್ಲವೂ ಲಕ್ ಬೈ ಚಾನ್ಸ್ ಅಂದರು.

ಇನ್ನೂ.. ಇದೇ ಸಮಯಕ್ಕೆ ಪ್ರವರ್ಧಮಾನಕ್ಕೆ ಬಂದ ಇನ್​ಸ್ಟಾಗ್ರಾಮ್​ ಹರ್ಷಾಲಿ ನೆಮ್ಮದಿಯನ್ನ ಹಾಳುಗೆಡವಿತ್ತು.ಯಾಕೆಂದರೆ.. ಶಾಲೆಗಿಂತ ಹರ್ಷಾಲಿ ತಮ್ಮ ಹಾಜರಿ ಹಾಕುತ್ತಿದ್ದಿದ್ದು ಇಲ್ಲಿಯೇ. ಈ ಕಾರಣಕ್ಕೆ.. ಅನೇಕ ಬಾರಿ ಟ್ರೋಲ್‌ಗೆ ಒಳಗಾದ ಹರ್ಷಾಲಿ ಶಾಲೆಗೆ ಹೋಗುತ್ತೀಯೋ ಇಲ್ಲವೋ ಎಂಬ ಪ್ರಶ್ನೆಯನ್ನು ಎದುರಿಸಿದ್ದರು.

bajrangi-bhaijaan-fame-harshaali-malhotra-responds-to-critics-by-sharing-her-10th-class-results

ಹೀಗೆ ಅನೇಕ ದಿನಗಳಿಂದ ಹತ್ತಾರು ಪ್ರಶ್ನೆಯನ್ನ ಎದುರಿಸಿ, ನಿರಂತರವಾಗಿ ಟ್ರೋಲ್ ಆಗ್ತಾನೇ ಬಂದ ಹರ್ಷಾಲಿ ಈಗ ಆಡಿಕೊಂಡವರ ಬಾಯಿಯನ್ನ ಮುಚ್ಚಿಸಿದ್ದಾರೆ. ಸಿಬಿಎಸ್​ಸಿಯ 10ನೇ ತರಗತಿಯಲ್ಲಿ ಶೇಕಡ 83 % ಮಾರ್ಕ್ಸ್​ ಪಡೆದುಕೊಂಡಿದ್ದಾರೆ. ಈ ಮೂಲಕ ಡ್ಯಾನ್ಸ್ಗೂ ಸೈ, ರೀಲ್ಸ್‌ಗೂ ಸೈ, ಫೋಟೋಶೂಟ್‌ಗೂ ಸೈ ಇಷ್ಟೇ ಯಾಕೆ ತಾನು ವಿದ್ಯಾಭ್ಯಾಸಕ್ಕೂ ಸೈ ಅನ್ನುವ ಸಂದೇಶವನ್ನ ರವಾನಿಸಿದ್ದಾರೆ ಹರ್ಷಾಲಿ.

ಇದಕ್ಕೆ ಪೂರಕವಾಗಿ ತಮ್ಮ ಈ ಸಾಧನೆಯ ಕಥೆಯನ್ನ ವಿಡಿಯೋ ಮೂಲಕ ಹಂಚಿಕೊಂಡಿರುವ ಹರ್ಷಾಲಿ ತಮಗೆ ಬಂದ ಒಂದಷ್ಟು ನೆಗೆಟಿವ್​ ಕಮೆಂಟ್​ಗಳನ್ನು ಅವರು ವಿಡಿಯೋ ಮೂಲಕ ತೋರಿಸಿದ್ದಾರೆ. ಅವುಗಳನ್ನೆಲ್ಲ ಒಂದೇ ಕೈಯಲ್ಲಿ ತಳ್ಳಿಹಾಕಿದ್ದಾರೆ. ಬಳಿಕ ತಮ್ಮ ಸ್ಕೋರ್​ ಎಷ್ಟು ಎಂಬುದನ್ನು ಅವರು ತಿಳಿಸಿದ್ದಾರೆ. ರೀಲ್ಸ್​ ಮಾಡುತ್ತಲೇ ರಿಯಲ್​ ಜಗತ್ತಿನಲ್ಲೂ ಸಾಧನೆ ಮಾಡಬಹುದು ಎಂದು ಹರ್ಷಾಲಿ ಮಲ್ಹೋತ್ರಾ ಹೇಳಿದ್ದಾರೆ. ತಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ಸದ್ಯಕ್ಕೆ ಹರ್ಷಾಲಿ ಮಲ್ಹೋತ್ರಾ ಹೆಸರು ಮತ್ತು ಈ ವಿಡಿಯೋ ಎರಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಕಾಲೆಳೆದವರಿಗೆ ಹರ್ಷಾಲಿ ಕೊಟ್ಟಿರುವ ಈ ಉತ್ತರದ ಬಗ್ಗೆ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆಡಿಕೊಂಡವರಿಗೆ ಉತ್ತರ ಕೊಡಲು ಎಂದೇ ಹರ್ಷಾಲಿ ಮಾಡಿರುವ ಈ ಹರ್ಷಾಲಿ ಅವರ ಈ ಡೇರ್ ಡೆವಿಲ್ ಆಕ್ಟ್ ಗೆ ಮೆಚ್ಚುಗೆಯೂ ಸಿಗ್ತಿದೆ. ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಸ್ಕೋರ್​ ಮಾಡಿರುವ ಹರ್ಷಾಲಿಗೆ ಶುಭಾಶಯಗಳ ಮಹಾಪೂರ ಕೂಡ ಹರಿದು ಬರುತ್ತಿದೆ.

More from Filmibeat

English summary
Harshaali Malhotra, known for her role in "Bajrangi Bhaijaan," shuts down critics as she stylishly announces her 10th class results,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X