ಬಕ್ರೀದ್ ಸಂಭ್ರಮದಲ್ಲಿ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಬಾರಿ ಬೆಲೆ
Recommended Video
ಇಂದು ಬಕ್ರೀದ್ ಹಬ್ಬ. ಬಕ್ರೀದ್ ಎಂದ ತಕ್ಷಣ ಕುರಿ ಮತ್ತು ಮೇಕೆಗಳಿಗೆ ದೊಡ್ಡ ಬೇಡಿಕೆ ಬರುತ್ತದೆ. ಅದರಲ್ಲಿಯೂ ಅವುಗಳಿಗೆ ಸಿನಿಮಾ ನಟರ ಹೆಸರು ಇದ್ದರೆ, ಆ ಬೆಲೆಗಳು ಡಬಲ್ ಆಗುತ್ತದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖ್ ಪರದಲ್ಲಿ ಮೇಕೆಗಳ ವ್ಯಾಪಾರ ಬಹಳ ಜೋರಾಗಿದೆ. ಈ ವರ್ಷ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಭಾರಿ ದೊಡ್ಡ ಬೇಡಿಕೆ ಬಂದಿದೆ. ಈ ಮೇಕೆಯ ಬೆಲೆ 8 ಲಕ್ಷ ರೂಪಾಯಿ ಎಂದು ಬೆಲೆ ನಿಗದಿ ಮಾಡಲಾಗಿದೆ.
ಬಕ್ರೀದ್ ವಿಶೇಷ: ಈ ಬಾರಿ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಬೇಡಿಕೆ
ಬರೀ ಸಲ್ಮಾನ್ ಹೆಸರು ಇದ್ದ ಕಾರಣಕ್ಕೆ ಈ ಮೇಕೆಗೆ ಇಷ್ಟೊಂದು ಬೆಲೆ ಬಂದಿಲ್ಲ ಎಂದಿರುವ ಮಾಲೀಕರು ''ನಮ್ಮ ಮೇಕೆಯೂ ನೋಡಲು ಸುಂದರವಾಗಿದೆ. ದಷ್ಟಪುಷ್ಟವಾಗಿದೆ. ಈ ಮೇಕೆ ಮೇಲಿರುವ ಕಪ್ಪು ಬಣ್ಣದ ಮಚ್ಚೆಗಳು ಕಾರಣವಾಗಿದೆ" ಎಂದು ಮೇಕೆ ಹೇಳಿದ್ದಾರೆ.

ಸಾಮಾನ್ಯವಾಗಿ ಬಕ್ರೀದ್ ಹಬ್ಬದಲ್ಲಿ ಸಲ್ಮಾನ್ ಖಾನ್, ಶಾರೂಖ್ ಖಾನ್ ಸೇರಿದಂತೆ ಬಾಲಿವುಡ್ ಸ್ಟಾರ್ ಹೆಸರಿನ ಮೇಕೆಗೆ ದೊಡ್ಡ ಡಿಮ್ಯಾಂಡ್ ಇರುತ್ತದೆ

"ಸಲ್ಮಾನ್ ಮೇಕೆ ಮೇಲಿರುವ ಮಚ್ಚೆಗಳನ್ನು ಕೂಡಿಸಿ ಓದಿದರೆ ಅರೇಬಿಕ್ ಭಾಷೆಯಲ್ಲಿ 'ಅಲ್ಲಾಹ್' ಎಂದಾಗುತ್ತದೆ. ಇಂಥ ಮೇಕೆಯನ್ನು ಇರಿಸಿಕೊಂಡವರಿಗೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ, ಇದನ್ನು ನಮ್ಮ ಮನೆಯ ಸದಸ್ಯನಾಗಿ, ನಮ್ಮ ಸೋದರನಂತೆ ಸಾಕಿದ್ದೇವೆ. ನಮ್ಮಂತೆ ಹಾಸಿಗೆ, ದಿಂಬು ಮೇಲೆ ಮಲಗುತ್ತದೆ, ನಮ್ಮಂತೆ ಎಲ್ಲವನ್ನು ತಿನ್ನುತ್ತಾನೆ, ಬೇರೆ ಮೇಕೆಗಳಂತೆ ಹುಲ್ಲು, ಎಲೆಗಳನ್ನು ತಿನ್ನಲು ಕೊಟ್ಟಿಲ್ಲ. ಚಿಪ್ಸ್, ಟಾಫಿ, ಒಣ ಹಣ್ಣುಗಳನ್ನು ನೀಡಿ ಬೆಳೆಸಿದ್ದೇವೆ, ಪ್ರತಿ ದಿನ ಸುಮಾರು 700 ರಿಂದ 800 ರು ಖರ್ಚು ಮಾಡಿದ್ದೇವೆ" ಎಂದು ಮೇಕೆ ಮಾಲೀಕರು ಹೇಳಿದರು.


Click it and Unblock the Notifications











