ಪಾತ್ರಕ್ಕಾಗಿ ಪೂರ ಬದಲಾದರು ನಟ ಆಯುಷ್ಮಾನ್ ಕುರಾನ್

ಬಾಲಿವುಡ್ ನಟ ಆಯುಷ್ಮಾನ್ ಕುರಾನ್ ಒಂದರ ನಂತರ ಒಂದು ಸವಾಲಿನ ಪಾತ್ರಗಳನ್ನು ಸ್ವೀಕರಿಸುತ್ತಿದ್ದಾರೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ತೆರೆ ಮೇಲೆ ತರುತ್ತಿದ್ದಾರೆ.

'ಬಲ' ಆಯುಷ್ಮಾನ್ ಕುರಾನ್ ಹೊಸ ಸಿನಿಮಾ. ಒಬ್ಬ ಬೋಳು ತಲೆಯ ಯುವಕನ ಕಷ್ಟಗಳನ್ನು ಈ ಸಿನಿಮಾ ಹೇಳುತ್ತದೆ. ಕನ್ನಡದಲ್ಲಿ ಬಂದ 'ಒಂದು ಮೊಟ್ಟೆಯ ಕಥೆ' ಚಿತ್ರ ಇದೇ ವಿಷಯದ ಬಗ್ಗೆ ಇದ್ದ ಕಥೆ ಹೊಂದಿತ್ತು. ಆದರೆ, ಈ ಸಿನಿಮಾ ಅದರ ಮುಂದಿನ ಭಾಗದಂತೆ ಇದೆ. ಬೋಳು ತಲೆಯ ಯುವಕ ಮದುವೆ ಆದ ನಂತರ ತಾಪತ್ರೆಯನ್ನೂ ಚಿತ್ರದಲ್ಲಿ ತೋರಿಸಲಾಗಿದೆ.

ಸಿನಿಮಾದ ಟ್ರೇಲರ್ ಇಂದು (ಅಕ್ಟೋಬರ್ 10) ಬಿಡುಗಡೆಯಾಗಿದೆ. ಆಯುಷ್ಮಾನ್ ಕುರಾನ್ ಪಾತ್ರದ ನಿರ್ವಹಣೆ ತುಂಬ ಚೆನ್ನಾಗಿದೆ. ತೂಕ ಇಳಿಸಿಕೊಂಡ ಆಯುಷ್ಮಾನ್ ಕುರಾನ್ ಪಾತ್ರಕ್ಕಾಗಿ ಪೂರ ಬದಲಾಗಿದ್ದಾರೆ. ಅವರ ಹಳೆಯ ಸಿನಿಮಾಗಳಿಂತ ವಿಭಿನ್ನವಾಗಿ ಕಾಣುತ್ತಿದ್ದಾರೆ.

Bala Hindi Movie Trailer Released

'ಅಂಧಾದುನ್', 'ಆರ್ಟಿಕಲ್ 15', 'ದಮ್ ಲಗಾ ಕೆ ಹೈಶಾ', 'ಬದೈ ಹೋ' ಹೀಗೆ ಒಂದೊಂದು ಸಿನಿಮಾದಲ್ಲಿ ಒಂದೊಂದು ಶೈಲಿ ಪಾತ್ರ ಮಾಡುವ ಮೂಲಕ ಬಾಲಿವುಡ್ ನಲ್ಲಿ ಆಯುಷ್ಮಾನ್ ಕುರಾನ್ ಹೆಸರು ಮಾಡುತ್ತಿದ್ದಾರೆ.

ನವೆಂಬರ್ 7 ರಂದು 'ಬಲ' ಸಿನಿಮಾ ಬಿಡುಗಡೆ ಆಗುತ್ತಿದೆ. ಅಮರ್ ಕೌಶಿಕ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಭೂಮಿ ಪಡ್ನೇಕರ್ ಸಿನಿಮಾದ ನಾಯಕಿಯಾಗಿದ್ದಾರೆ.

More from Filmibeat

English summary
Actro Ayushmann Khurrana's 'Bala' hindi movie trailer released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X