For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ 2021ರಲ್ಲಿ ಬಿಡುಗಡೆಗೊಂಡಿದ್ದ ತೆಲುಗು ಚಿತ್ರ!

  |

  2022ರಲ್ಲಿ ಹಿಂದಿ ಬೆಲ್ಟ್‌ನಲ್ಲಿ ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚಾಗಿ ದಕ್ಷಿಣ ಭಾರತದ ಚಿತ್ರಗಳೇ ಹೆಚ್ಚಾಗಿ ಸದ್ದು ಮಾಡಿದ್ದು ತಿಳಿದೇ ಇದೆ. ಕೇವಲ ದೊಡ್ಡ ಬಜೆಟ್ ಹೊಂದಿದ್ದ, ಹಿಂದಿ ಪ್ರೇಕ್ಷಕರಿಗೆ ಪರಿಚಿತವಿದ್ದ ಕಲಾವಿದರ ಚಿತ್ರಗಳು ಮಾತ್ರವಲ್ಲದೇ ಸಣ್ಣ ಕಲಾವಿದರ ಚಿತ್ರಗಳೂ ಸಹ ಸಿಕ್ಕಾಪಟ್ಟೆ ಸದ್ದು ಮಾಡಿದವು. ಅದರಲ್ಲಿಯೂ ಕಾರ್ತಿಕೇಯ 2 ಹಿಂದಿ ಬೆಲ್ಟ್‌ನಲ್ಲಿ ಮಾಡಿದ ಬ್ಯುಸಿನೆಸ್ ಕಂಡು ಹಿಂದಿ ಮಂದಿ ಇಂತಹ ಸಣ್ಣ ಬಜೆಟ್ ಚಿತ್ರ ಇಷ್ಟರ ಮಟ್ಟಕ್ಕೆ ಸದ್ದು ಮಾಡ್ತಿದೆ ಎಂದು ಆ‍ಶ್ಚರ್ಯ ಪಟ್ಟದ್ದಂತೂ ನಿಜ.

  ಇನ್ನು ಹಿಂದಿ ಬೆಲ್ಟ್‌ನಲ್ಲಿ ದಕ್ಷಿಣ ಭಾರತದ ಚಿತ್ರಗಳು ಈ ಮಟ್ಟಿಗೆ ಸದ್ದು ಮಾಡಲು ಕಾರಣ ಅಲ್ಲಿನ ಸಿನಿ ರಸಿಕರು ಕಂಟೆಂಟ್ ಇರುವ ದಕ್ಷಿಣ ಭಾರತದ ಚಿತ್ರಗಳನ್ನು ಗುರುತಿಸಿ ವೀಕ್ಷಿಸಿದ್ದು ಹಾಗೂ ಒಬ್ಬರಿಂದ ಒಬ್ಬರಿಗೆ ಪ್ರಚಾರ ಮಾಡಿದ್ದು. ಇದೇ ಮಾದರಿಯಲ್ಲಿ ಕಾಂತಾರ ಕೂಡ ವರ್ಡ್ ಆಫ್ ಮೌತ್ ಮೂಲಕ ದೊಡ್ಡ ಮಟ್ಟಕ್ಕೆ ರೀಚ್ ಆಗಿತ್ತು.

  ಅದರಲ್ಲಿಯೂ ದೈವಿಕ ಅಂಶವಿರುವ ದಕ್ಷಿಣ ಭಾರತದ ಚಿತ್ರಗಳನ್ನು ಬಾಲಿವುಡ್ ಮಂದಿ ಅಪ್ಪಿ ಒಪ್ಪಿಕೊಂಡರು. ಈಗ ದಕ್ಷಿಣ ಭಾರತದ ಇದೇ ರೀತಿಯ ಮತ್ತೊಂದು ಚಿತ್ರ ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅದೂ ಸಹ ಬಾಲಿವುಡ್ ಸಿನಿ ಪ್ರಿಯರಿಗೆ ಇಷ್ಟವಾಗುವ ದೈವಿಕ ಅಂಶವನ್ನು ಕಂಟೆಂಟ್ ಹೊಂದಿರುವ ಚಿತ್ರವೇ. ಹೌದು, 2021ರ ಅಂತಿಮ ತಿಂಗಳಿನಲ್ಲಿ ಬಿಡುಗಡೆಯಾಗಿ ತೆಲುಗು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಬಾಲಕೃಷ್ಣ ನಟನೆಯ ಹಾಗೂ ಬೋಯಪಟಿ ಶ್ರೀನು ನಿರ್ದೇಶನದ 'ಅಖಂಡ' ಚಿತ್ರ ಈಗ ಹಿಂದಿಗೆ ಡಬ್ ಆಗಿದೆ.

  ಈ ಚಿತ್ರದ ಟ್ರೈಲರ್ ಇಂದು ( ಜನವರಿ 04 ) ಬಿಡುಗಡೆಯಾಗಲಿದ್ದು, ಚಿತ್ರ ಜನವರಿ 20ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಬಾಲಕೃಷ್ಣ ಜತೆ ಪ್ರಗ್ಯಾ ಜೈಸ್ವಾಲ್, ಜಗಪತಿ ಬಾಬು ಹಾಗೂ ಶ್ರೀಕಾಂತ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದ ದೊಡ್ಡ ಹೈಲೈಟ್ ಎಸ್ ಎಸ್ ಥಮನ್ ಸಂಗೀತ ನಿರ್ದೇಶನ. ಸುಮಾರು 60 ಕೋಟಿ ವೆಚ್ಚದಲ್ಲಿ ತಯಾರಾಗಿ ತೆಲುಗಿನಲ್ಲಿ 151 ಕೋಟಿ ಗಳಿಕೆ ಮಾಡಿದ್ದ ಅಖಂಡ ಈಗ ಹಿಂದಿಯಲ್ಲಿ ಎಷ್ಟು ಗಳಿಕೆ ಮಾಡಲಿದೆ ಕಾದು ನೋಡಬೇಕಿದೆ..

  English summary
  Balakrishna starrer Akhanda hindi dubbing movie releasing on January 20
  Thursday, January 5, 2023, 6:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X