For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ನಲ್ಲಿ ಮಹಾಭಾರತ ಫಿಕ್ಸ್: ದ್ರೌಪದಿ ಪಾತ್ರದಲ್ಲಿ ಬೆಂಗಳೂರು ಹುಡುಗಿ

  |

  ಬಾಲಿವುಡ್ನಲ್ಲಿ ಮಹಾಭಾರತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡ್ತಿದೆ. ನಟ ಅಮೀರ್ ಖಾನ್ ಇಂತಹದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಬಹುದೊಡ್ಡ ಬಜೆಟ್ ನಲ್ಲಿ, ಐದು ಸರಣಿಯಾಗಿ ಸಿನಿಮಾ ಮಾಡಲು ಚಿಂತಿಸಿದ್ದರು.

  ರಾಜಮೌಳಿ 'ಮಹಾಭಾರತ'ಕ್ಕೆ ಶಾಕ್ ಕೊಟ್ಟ ಅಮೀರ್ 'ಮಹಾಭಾರತ'.!ರಾಜಮೌಳಿ 'ಮಹಾಭಾರತ'ಕ್ಕೆ ಶಾಕ್ ಕೊಟ್ಟ ಅಮೀರ್ 'ಮಹಾಭಾರತ'.!

  ಆದ್ರೀಗ, ಅಮೀರ್ ಖಾನ್ ಗೂ ಮೊದಲು ಮತ್ತೊಬ್ಬ ನಿರ್ಮಾಪಕ ಮಹಾಭಾರತ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಚಿತ್ರವನ್ನ ದ್ರೌಪದಿ ದೃಷ್ಟಿಕೋನದಲ್ಲಿ ತೋರಿಸಲಾಗುತ್ತಿದ್ದು, ಪಾಂಚಲಿ ಪಾತ್ರಕ್ಕಾಗಿ ಸ್ಟಾರ್ ನಟಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಯಾರದು? ಮುಂದೆ ಓದಿ....

  ಬೆಂಗಳೂರು ಹುಡುಗಿ ದ್ರೌಪದಿ

  ಬೆಂಗಳೂರು ಹುಡುಗಿ ದ್ರೌಪದಿ

  ಖ್ಯಾತ ನಿರ್ಮಾಪಕ ಮಧು ಮಂತೇನಾ ನಿರ್ಮಿಸಲಿರುವ ಮಹಾಭಾರತ ಚಿತ್ರದಲ್ಲಿ ಬೆಂಗಳೂರು ಮೂಲದ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದ್ರೌಪದಿ ಪಾತ್ರ ನಿರ್ವಹಿಸಲಿದ್ದಾರೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ದ್ರೌಪದಿಯನ್ನ ನಾಯಕಿಯನ್ನಾಗಿಸಿ ಚಿತ್ರಕಥೆ ಮಾಡಲಾಗುತ್ತದೆ.

  ಅಮೀರ್ ಖಾನ್ 'ಮಹಾಭಾರತ'ದಲ್ಲಿ ಪ್ರಭಾಸ್.! ಯಾವ ಪಾತ್ರಕ್ಕೆ.?ಅಮೀರ್ ಖಾನ್ 'ಮಹಾಭಾರತ'ದಲ್ಲಿ ಪ್ರಭಾಸ್.! ಯಾವ ಪಾತ್ರಕ್ಕೆ.?

  ದೀಪಿಕಾ ಪಡುಕೋಣೆ ಸಹ ನಿರ್ಮಾಪಕಿ

  ದೀಪಿಕಾ ಪಡುಕೋಣೆ ಸಹ ನಿರ್ಮಾಪಕಿ

  ಮಧು ಮಂತೇನಾ ಅವರ ಜೊತೆ ದೀಪಿಕಾ ಪಡುಕೋಣೆ ಅವರು ಸಹ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಇದಕ್ಕೂ ಮುಂಚೆ ಚಪಕ್ ಚಿತ್ರಕ್ಕೆ ದೀಪಿಕಾ ನಿರ್ಮಾಪಕಿಯಾಗಿದ್ದರು. ಈ ಸಿನಿಮಾ ಇನ್ನು ಚಿತ್ರೀಕರಣ ನಡೆಯುತ್ತಿದೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ ವಾಲ್ ಜೀವನಾಧರಿತ ಕಥೆ ಇದಾಗಿದೆ.

  'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.!'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.!

  ಯಾರೆಲ್ಲಾ ಭಾಗಿಯಾಗಬಹುದು?

  ಯಾರೆಲ್ಲಾ ಭಾಗಿಯಾಗಬಹುದು?

  ಮಹಾಭಾರತ ಅಂದ್ಮೇಲೆ ಅಲ್ಲಿ ದ್ರೌಪದಿ ಮಾತ್ರ ಮುಖ್ಯವಲ್ಲ. ಧರ್ಮರಾಮ, ಭೀಮ, ಅರ್ಜುನ, ನಕುಲ, ಸಹದೇವ, ದುರ್ಯೋಧನ, ಕೃಷ್ಣ ಹೀಗೆ ಅನೇಕ ಪಾತ್ರಗಳು ಇರಲಿದೆ. ಇಂತಹ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಯಾವ ನಟರು ನಟಿಸಬಹುದು ಎಂಬ ಕುತೂಹಲ ಈಗ ಆರಂಭವಾಗಿದೆ.

  1000 ಕೋಟಿಯ 'ಮಹಾಭಾರತ'ಕ್ಕೆ ಅಮೀರ್ ಖಾನ್ ಹಾಕಿದ್ರು ಬ್ರೇಕ್.!1000 ಕೋಟಿಯ 'ಮಹಾಭಾರತ'ಕ್ಕೆ ಅಮೀರ್ ಖಾನ್ ಹಾಕಿದ್ರು ಬ್ರೇಕ್.!

  ದೀಪಾವಳಿಗೆ ಮೊದಲ ಆವೃತ್ತಿ ಬಿಡುಗಡೆ

  ದೀಪಾವಳಿಗೆ ಮೊದಲ ಆವೃತ್ತಿ ಬಿಡುಗಡೆ

  ಮಹಾಭಾರತ ಚಿತ್ರವನ್ನ ಎರಡು ಅಥವಾ ಮೂರಕ್ಕಿಂತ ಹೆಚ್ಚು ಸರಣಿ ಮಾಡುವ ನಿರೀಕ್ಷೆ ಇದೆ. ಮೊದಲ ಆವೃತ್ತಿ 2021ರ ದೀಪಾವಳಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಪ್ರಿ-ಪ್ರೊಡಕ್ಷನ್ ಮುಗಿದ್ಮೇಲೆ ಸಿನಿಮಾ ಶೂಟಿಂಗ್ ಆರಂಭಿಸುವ ಚಿಂತನೆ ಇದೆ.

  English summary
  Bangalore based, bollywood super star actress playing draupadi role in madhu mantena's mahabharat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X