For Quick Alerts
  ALLOW NOTIFICATIONS  
  For Daily Alerts

  'ಸನ್ನಿ ಬರ್ತ್‌ಡೇ ದಿನ ಪರೀಕ್ಷೆ ಬರೆಯದ ವಿದ್ಯಾರ್ಥಿ': ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರು, ಸನ್ನಿ ಶಾಕ್!

  |

  ನನ್ನ ನೆಚ್ಚಿನ ನಟಿ ಸನ್ನಿ ಲಿಯೋನಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾನು ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ. ಉತ್ತರ ಬರೆಯುತ್ತಿಲ ಎಂದು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಮೌಲ್ಯಮಾಪನದ ವೇಳೆ ಆ ಉತ್ತರಪತ್ರಿಕೆ ನೋಡಿದ ಮೌಲ್ಯಮಾಪಕರು ಶಾಕ್ ಆಗಿದ್ದಾರೆ. ಈ ವಿಚಾರದ ಬಗ್ಗೆ ಮಾಜಿ ನೀಲಿತಾರೆ ಸನ್ನಿ ಲಿಯೋನಿ ಸಹ ಪ್ರತಿಕ್ರಿಯಿಸಿದ್ದಾರೆ.

  ಮೇ ಮತ್ತು ಜೂನ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಸಿತ್ತು. ಮೇ 13ರಂದು ಮೊದಲ ಸೆಮಿಸ್ಟರ್ ಇತಿಹಾಸ ವಿಷಯದ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯದೇ ಉತ್ತರ ಪತ್ರಿಕೆ ಖಾಲಿಕೊಟ್ಟು ಬಂದಿದ್ದಾನೆ. ಪ್ರಶ್ನೆಗಳಿಗೆ ಉತ್ತರಿಸುವ ಬದಲು, ವಿದ್ಯಾರ್ಥಿಯು ಮೊದಲ ಪ್ರಶ್ನೆಯ ಉತ್ತರವನ್ನು ಗೀಚಿದ್ದು, ಎರಡನೇ ಪ್ರಶ್ನೆಗೆ ವಿಚಿತ್ರವಾಗಿ ಉತ್ತರಿಸಿದ್ದಾನೆ. 'ಇಂದು ನಟಿ ಸನ್ನಿ ಲಿಯೋನಿ ಹುಟ್ಟುಹಬ್ಬ. ಅವಳು ನನ್ನ ಲವರ್ ಹಾಗೂ ಆಕೆಯ ಹುಟ್ಟುಹಬ್ಬದ ಹಿನ್ನೆಲೆ ನಾನು ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ. ಪರೀಕ್ಷೆಯನ್ನು ಬರೆಯುತ್ತಿಲ್ಲ' ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ.

  ಮಂಡ್ಯದಲ್ಲಿ ಅದ್ಧೂರಿಯಾಗಿ ಸನ್ನಿ ಲಿಯೋನಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳುಮಂಡ್ಯದಲ್ಲಿ ಅದ್ಧೂರಿಯಾಗಿ ಸನ್ನಿ ಲಿಯೋನಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

  ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟಿರುವುದು ಮಾತ್ರವಲ್ಲದೇ ಸ್ನೇಹಿತರು, ಸಹಪಾಠಿಗಳು ಹಾಗೂ ಮೌಲ್ಯಮಾಪಕರು ಸನ್ನಿ ಹುಟ್ಟುಹಬ್ಬಕ್ಕೆ ಶುಭ ಹಾರೈಸುವಂತೆ ಮನವಿ ಮಾಡಿಕೊಂಡಿದ್ದಾನೆ. ಇತ್ತೀಚೆಗೆ ಪತ್ರಿಕೆ ಮೌಲ್ಯಮಾಪನ ಮಾಡಲು ಹೊರಟಾಗ ಆತನ ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರೇ ದಂಗಾಗಿದ್ದಾರೆ. ಸದ್ಯ ವಿವಿ ಮೌಲ್ಯಮಾಪನ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿದ್ದು, ಮೌಲ್ಯಮಾಪಕರು ಸಿಸ್ಟಮ್‌ಗೆ ಲಾಗ್ ಇನ್ ಮಾಡಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ ವೇಳೆ ಸನ್ನಿ ಅಭಿಮಾನಿಯ ಉತ್ತರ ಪತ್ರಿಕೆ ಕಂಡು ಶಾಕ್ ಆಗಿದ್ದಾರೆ.

   ವಿಚಾರ ತಿಳಿದು ಸನ್ನಿ ಏನಂದ್ರು?

  ವಿಚಾರ ತಿಳಿದು ಸನ್ನಿ ಏನಂದ್ರು?

  ಮಾಜಿ ನೀಲಿ ರಾಣಿ ಸನ್ನಿಲಿಯೋನಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಈಕೆಯ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕಳು ಅಲರ್ಟ್‌ ಆಗ್ತಾರೆ. ಸನ್ನಿ ಎಂದರೆ ತಮ್ಮ ಹುಟ್ಟುಹಬ್ಬದ ದಿನ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯದ ವಿಚಾರ ನಟಿ ಸನ್ನಿ ಲಿಯೋನಿ ಗಮನಕ್ಕೂ ಬಂದಿದೆ. ಈ ಬಗ್ಗೆ ಸನ್ನಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಸನ್ನಿ ಲಿಯೋನಿ ಅಭಿಮಾನಿಯೊಬ್ಬ ಆಕೆಯ ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. ಆತನ ಅಭಿಮಾನಕ್ಕೆ ಶಾಕ್ ಸನ್ನಿ ಶಾಕ್ ಆಗಿದ್ದರು.

   ಸಕ್ಕರೆ ನಾಡಲ್ಲಿ ಸನ್ನಿ ಬರ್ತ್‌ಡೇ ಆಚರಣೆ

  ಸಕ್ಕರೆ ನಾಡಲ್ಲಿ ಸನ್ನಿ ಬರ್ತ್‌ಡೇ ಆಚರಣೆ

  ಸನ್ನಿ ಲಿಯೋನಿಗೆ ಕರ್ನಾಟಕದಲ್ಲೂ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಈ ವರ್ಷ ಮಂಡ್ಯದಲ್ಲಿರೋ ಸನ್ನಿ ಲಿಯೋನಿ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ನೆಚ್ಚಿನ ನಟಿಯ ಹುಟ್ಟುಹಬ್ಬ ಆಚರಿಸಿದ್ದರು. ಮಂಡ್ಯ ಜಿಲ್ಲೆ ಕಸಬಾ ತಾಲೂಕಿನ ಕೊಮ್ಮೇರಹಳ್ಳಿಯಲ್ಲಿ ಅಭಿಮಾನಿಗಳು ಬಡ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಅಂತೆಲ್ಲಾ ಬರೆದು ದೊಡ್ಡೆ ಫ್ಲೆಕ್ಸ್ ಹಾಕಿಸಿದ್ದರು. ಕೇಕ್ ಕತ್ತರಿಸಿ, ಬಿರಿಯಾನಿ ಮಾಡಿ ಊರಿಗೆಲ್ಲಾ ಹಂಚಿದ್ದರು. ರಕ್ತದಾನದ ಶಿಬಿರವನ್ನು ಆಯೋಜಿಸಿದ್ದರು. ಇನ್ನು ಮಂಡ್ಯದಲ್ಲಿ ಪ್ರಸಾದ್ ಎಂಬುವವರು ಸನ್ನಿ ಲಿಯೋನಿ ಹೆಸರಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದಾರೆ.

   ಡಿಂಗರ ಬಿಲ್ಲಿ ಹಾಡಿಗೆ ಸನ್ನಿ ಸ್ಟೆಪ್ಸ್

  ಡಿಂಗರ ಬಿಲ್ಲಿ ಹಾಡಿಗೆ ಸನ್ನಿ ಸ್ಟೆಪ್ಸ್

  ಈಗಾಗಲೇ ಕನ್ನಡದ 'ಡಿಕೆ', 'ಲವ್‌ ಯೂ ಆಲಿಯಾ' ಸಿನಿಮಾಗಳಲ್ಲಿ ಸನ್ನಿ ಲಿಯೋನ್ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ 'ಚಾಂಪಿಯನ್' ಚಿತ್ರಕ್ಕಾಗಿ ನಾಯಕ ಸಚಿನ್‌ ಧನ್‌ಪಾಲ್ ಜೊತೆ 'ಡಿಂಗರ ಬಿಲ್ಲಿ' ಅನ್ನುವ ಹಾಡಿಗೆ ಸನ್ನಿ ಕುಣಿದು ರಂಗೇರಿಸಿದ್ದಾರೆ. ಆ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕಾಗಿ ಸನ್ನಿ ಲಿಯೋನಿ ಬೆಂಗಳೂರಿಗೆ ಬಂದು ಹೋಗಿದ್ದರು.

   ನನ್ನೊಟ್ಟಿಗೆ ನಟಿಸೋಕೆ ಕೆಲವರಿಗೆ ನಾಚಿಕೆ

  ನನ್ನೊಟ್ಟಿಗೆ ನಟಿಸೋಕೆ ಕೆಲವರಿಗೆ ನಾಚಿಕೆ

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸನ್ನಿಲಿಯೋನಿ "ನಾನು ಬಾಲಿವುಡ್‌ಗೆ ಬಂದ ಆರಂಭದಲ್ಲಿ ಕೆಲವರು ನನ್ನೊಟ್ಟಿಗೆ ನಟಿಸಲು ಹಿಂದೇಟು ಹಾಕಿದರು. ಆದರೆ ಅದೇ ಸಮಯದಲ್ಲಿ ನನ್ನ ಜೊತೆ ತೆರೆ ಹಂಚಿಕೊಳ್ಳಲು ಸಾಕಷ್ಟು ಜನ ಆಸಕ್ತಿ ತೋರಿಸಿದ್ದರು. ಆದರೆ ಹೆಸರಾಂತ ಸಿನಿಮಾ ನಿರ್ಮಾಣ ಸಂಸ್ಥೆಗಳು, ಕಲಾವಿದರು ನನ್ನ ಜೊತೆ ಕೆಲಸ ಮಾಡಲು ಇವತ್ತಿಗೂ ಸಂಕೋಚಪಡುತ್ತಿದ್ದಾರೆ" ಎಂದಿದ್ದಾರೆ. ಜೊತೆಗೆ ನನಗೇನು ಬೇಸರ ಇಲ್ಲ, ಎಂದಾದರೂ ಒಂದು ದಿನ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಗುತ್ತಿದೆ ಎಂದಿದ್ದಾರೆ.

   ಪೋರ್ನ್‌ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಸನ್ನಿ

  ಪೋರ್ನ್‌ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಸನ್ನಿ

  ವಿದೇಶಗಳಲ್ಲಿ ಪೋರ್ನ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನಿ ಅದನ್ನು ಬಿಟ್ಟು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಭಾರತದಲ್ಲೇ ಪತಿ ಡೇನಿಯಲ್ ವೆಬರ್‌ ಜೊತೆ ನೆಲೆಸಿರುವ ಸನ್ನಿ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಬಾಲಿವುಡ್‌ಗೆ ಬಂದ ಆರಂಭದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಒಂದಷ್ಟು ಐಟಂ ಸಾಂಗ್‌ಗಳಿಗೆ ಕುಣಿದ ಚೆಲುವೆಗೆ ಈಗ ಅವಕಾಶಗಳು ಕಮ್ಮಿ ಆಗಿದೆ. ಆಗೊಮ್ಮೆ ಈಗೊಮ್ಮೆ ದಕ್ಷಿಣ ಭಾರತ ಸಿನಿಮಾಗಳಲ್ಲೂ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

  English summary
  Bangalore University Student Gave Up Exam Because of Sunny Leone Birthday now Actress Reacts. Know More.
  Sunday, August 21, 2022, 11:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X