ಹತ್ಯೆ ಯತ್ನ ಕೇಸ್: ವಿಮಾನ ನಿಲ್ದಾಣದಲ್ಲೇ ನಟಿಯ ಬಂಧನ

ಜನಪ್ರಿಯ ಬಾಂಗ್ಲಾದೇಶಿ ನಟಿ ನುಸ್ರತ್ ಫರಿಯಾ ಬಂಧನವಾಗಿದೆ. ಆಕೆ ಥೈಲ್ಯಾಂಡ್‌ಗೆ ಪ್ರಯಾಣಿಸಲು ಯತ್ನಿಸುತ್ತಿದ್ದಾಗ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಾಂಗ್ಲಾ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನ ಚರಿತ್ರೆಯ 'ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್' ಚಿತ್ರದಲ್ಲಿ ಶೇಖ್ ಹಸೀನಾ ನಟಿ ನುಸ್ರತ್ ಫರಿಯಾ ಪಾತ್ರದಲ್ಲಿ ನಟಿಸಿದ್ದರು. 2024 ರ ಜುಲೈನಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಢಾಕಾದ ವತಾರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Bangladeshi actress Nusraat Faria arrested at Dhaka s airport over an attempted murder case

ಏಪ್ರಿಲ್ 29 ರಂದು ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ನುಸ್ರತ್ ಫರಿಯಾ ಸೇರಿದಂತೆ ಹದಿನೇಳು ಕಲಾವಿದರ ಹೆಸರುಗಳು ಕೇಳಿಬಂದಿದೆ. ರೊಕೆಯಾ ಪ್ರಾಚಿ, ಸೋಹಾನಾ ಸಾಬಾ, ಮೆಹರ್ ಅಫ್ರೋಜ್ ಶಾನ್, ಅಪು ಬಿಸ್ವಾಸ್, ನಿಪುನ್ ಅಕ್ಟರ್, ಅಶ್ನಾ ಹಬೀಬ್ ಭಬ್ನಾ, ಜಾಯೆದ್ ಖಾನ್, ಸುಬೋರ್ನಾ ಮುಸ್ತಫಾ, ಅಜಿಜುಲ್ ಹಕೀಮ್, ಜ್ಯೋತಿಕಾ ಜ್ಯೋತಿ, ಸೈಮನ್ ಸಾದಿಕ್ ಹೆಸರುಗಳು ಪ್ರಕರಣದಲ್ಲಿದೆ.

ದೂರುದಾರ ಎನಾಮುಲ್ ಹಕ್ ಅವರು ಶೇಖ್ ಹಸೀನಾ ಮತ್ತು ಇತರ 283 ಜನರು ಮತ್ತು 300 ರಿಂದ 400 ಗುರುತಿಸಲಾಗದ ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಿ ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. 'ರಿವೇಂಜ್' ಎಂಬ ಒಂದು ತೆಲುಗು ಚಿತ್ರದಲ್ಲಿ ಕೂಡ ನುಸ್ರತ್ ಫರಿಯಾ ನಟಿಸಿದ್ದಾರೆ.

ಬಾಂಗ್ಲಾದೇಶಿ ನಟಿ, ನಿರೂಪಕಿ, ಮಾಡೆಲ್, ಗಾಯಕಿ ಹಾಗೂ ರೇಡಿಯೋ ಜಾಕಿ ಆಗಿ ನುಸ್ರತ್ ಫರಿಯಾ ಗುರ್ತಿಸಿಕೊಂಡಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲಿ ಕೂಡ ಮಿಂಚಿದ್ದಾರೆ. 2015ರಲ್ಲಿ ಬಂದ 'ಆಶಿಕಿ' ಆಕೆ ನಟಿಸಿದ ಮೊದಲ ಬಾಂಗ್ಲಾ ಬೆಂಗಾಲಿ ಭಾಷೆ ಸಿನಿಮಾ ಆಗಿತ್ತು. ಬಳಿಕ 'ಹೀರೊ 420', 'ಧಕ್ ತೆರಿ ಕಿ', 'ಇನ್ಸ್‌ಪೆಕ್ಟರ್ ನೊಟಿ ಕೆ', 'ಶಹನ್‌ಶಾ', 'ರಾಕ್‌ಸ್ಟಾರ್' ಸೇರಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

'ಅಬರ್ ಪ್ರೊಲೊಯ್' ಎಂಬ ಒಂದು ವೆಬ್ ಸೀರಿಸ್ ಜೊತೆಗೆ ಲಕ್ಸ್ ಸ್ಟೈಲ್ ಚೆಕ್, ಫೇರ್ ಅಂಡ್ ಹ್ಯಾಂಡ್ಸಮ್: ದಿ ಅಲ್ಟಿಮೇಟ್ ಮ್ಯಾನ್ ಹಾಗೂ ಲೇಟ್ ನೈಟ್ ಕಾಫಿ ಎಂಬ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ನುಸ್ರತ್ ಕಾಣಿಸಿಕೊಂಡಿದ್ದಾರೆ. ನುಸ್ರತ್ ಬಂಧನ ವಿಚಾರ ತಿಳಿದು ಕೆಲ ಅಭಿಮಾನಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿರುವುದಾಗಿಯೂ ವರದಿಯಾಗಿದೆ.

More from Filmibeat

English summary
Actress Nusraat Faria, who portrayed Bangladesh's former PM Sheikh Hasina in the biopic, "Mujib : The Making of a Nation", has been arrested
Read more about: actress hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X