twitter
    For Quick Alerts
    ALLOW NOTIFICATIONS  
    For Daily Alerts

    ಮಹಾರಾಷ್ಟ್ರದಲ್ಲಿ ಬೀಫ್ ಬ್ಯಾನ್: ಬಾಲಿವುಡ್ ಚಿತ್ರೋದ್ಯಮ ಗರಂ

    |

    ಹತ್ತೊಂಬತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾರಾಷ್ಟ್ರ ಜಾನುವಾರು ಸಂರಕ್ಷಣಾ ತಿದ್ದುಪಡಿ ವಿಧೇಯಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

    ಆ ಮೂಲಕ ಮಹಾರಾಷ್ಟ್ರದ ಬಿಜೆಪಿ ಸರಕಾರ ಗೋಹತ್ಯೆ ನಿಷೇಧವನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಜೊತೆಗೆ ದನದ ಮಾಂಸ ಸಾಗಾಣಿ ಮತ್ತು ಮಾರಾಟ ಕೂಡಾ ಬ್ಯಾನ್ ಆಗಿದೆ. ಆ ಮೂಲಕ ಅಸೆಂಬ್ಲಿ ಚುನಾವಣೆಯಲ್ಲಿನ ತನ್ನ ಪ್ರಣಾಳಿಕೆಯಂತೆ ನಡೆದುಕೊಂಡಿದೆ.

    ಮಹಾರಾಷ್ಟ್ರ ಸರಕಾರದ ಈ ಕ್ರಮದಿಂದ ಒಂದು ವರ್ಗದ ಜನತೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುವುದಂತೂ ನಿಶ್ಚಿತ. ಸರಕಾರದ ಈ ಕ್ರಮಕ್ಕೆ ವ್ಯಾಪಕ ಸ್ವಾಗತದ ಜೊತೆಗೆ ವಿರೋಧವೂ ವ್ಯಕ್ತವಾಗಿದೆ.

    ರಾಜ್ಯದ ಮುಸ್ಲಿಂ ಚೇಂಬರ್ ಆಫ್ ಕಾಮರ್ಸ್ (MCCI) ಫಡ್ನವೀಸ್ ಸರಕಾರದ ಕ್ರಮಕ್ಕೆ ತನ್ನ ಬೆಂಬಲ ಸೂಚಿಸಿದೆ. ಅಲ್ಲದೇ, ದೇಶಾದ್ಯಂತ ಈ ಕಾನೂನು ಜಾರಿಗೆ ತನ್ನಿ ಎಂದು ಪ್ರಧಾನಿ ಮೋದಿಯರನ್ನು ವಿನಂತಿಸಿಕೊಂಡಿದೆ.

    ಇದೊಂದು ಐತಿಹಾಸಿಕ ನಿರ್ಧಾರ, ದೇಶಾದ್ಯಂತ ಈ ಕಾನೂನು ಜಾರಿಗೆ ಬರಬೇಕು. ಅದಕ್ಕಾಗಿ, ಸಹಿ ಅಭಿಯಾನ ಆರಂಭಿಸಲಿದ್ದೇವೆ ಎಂದು ಎಂಸಿಸಿಐ ನಿರ್ದೇಶಕ ಜಾಸಿಂ ಮೊಹಮ್ಮದ್ ಹೇಳಿದ್ದಾರೆ.

    ಸರಕಾರದ ಗೋಹತ್ಯಾ ನಿಷೇಧಕ್ಕೆ ಬಾಲಿವುಡ್ ಚಿತ್ರೋದ್ಯಮ ಟ್ವೀಟ್ ಮೂಲಕ ಯಾವ ರೀತಿ ಸ್ಪಂದಿಸಿದೆ?

    ರವೀನಾ ಟಂಡನ್

    ಗೋವನ್ನು ಪೂಜಿಸುವ ಸಂಸ್ಕೃತಿ ನಮ್ಮಲ್ಲಿದೆ. ಅದು ನಮಗೆ ಹಾಲು ನೀಡುತ್ತದೆ, ಅದನ್ನು ನಾನು ಗೋಮಾತೆ ಎಂದು ಕರೆಯುತ್ತೇವೆ.

    ಫರನಾ ಅಕ್ತರ್

    ಖ್ಯಾತ ನಿರ್ದೇಶಕ, ಕಥೆಗಾರ, ನಿರ್ಮಾಪಕ ಫರನಾ ಅಕ್ತರ್ ಮಹಾ ಸರಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ..

    ವಿಶಾಲ್ ದದ್ಲಾನಿ

    ವಿಶಾಲ್ ದದ್ಲಾನಿ

    ನಾನೊಬ್ಬ ಶಾಖಾಹಾರಿ, ಹಾಗಾಗಿ ಬೀಫ್ ಬ್ಯಾನ್ ಆಗಿರೋದು ನನಗೆ ಯಾವುದೇ ಮಹತ್ವವಿಲ್ಲ. ಆದರೆ ಇದು ಜನರ ವೈಯಕ್ತಿಕ ವಿಚಾರ, ದೇಶದಲ್ಲಿ ಶೇ. 30ರಷ್ಟು ಜನ ಬೀಫ್ ತಿನ್ನೋರು ಇದ್ದಾರೆ.

    ಆರತಿ ಛಾಬ್ರಿಯಾ

    ನಾನು ಬೀಫ್ ತಿನ್ನೋಲ್ಲ ಬಿಡಿ, ಸೀರಿಯಸ್ಲಿ...

    ಸಿದ್ದಾರ್ಥ ಮಲ್ಯ

    ಮದ್ಯಲೋಕದ ದಿಗ್ಗಜ ವಿಜಯ್ ಮಲ್ಯ ಸುಪುತ್ರ ಸಿದ್ದಾರ್ಥ ಮಲ್ಯ ಸರಕಾರದ ಕ್ರಮವನ್ನು ವ್ಯಂಗ್ಯವಾಡಿದ್ದು ಹೀಗೆ...

    ಸುಮನಾ ಚಕ್ರವರ್ತಿ

    ಮೊದಲು ಗಮನಿಸಬೇಕಾಗಿರುವ ಸಮಸ್ಯೆಗಳೆಂದರೆ ಬಡತನ, ಭ್ರಷ್ಟಾಚಾರ, ರೇಪ್ ಮುಂತಾದವು..

    ಪುನೀತ್ ಮಲ್ಹೋತ್ರ

    ಬೀಫ್ ಬ್ಯಾನ್ ಹಿಂದಿನ ಡೀಲ್ ಏನು? ಘನವೆತ್ತ ಸರಕಾರದ ಈ ನಿರ್ಧಾರದ ಹಿಂದಿನ ಲಾಜಿಕ್ ಏನು?

    ಉದಯ್ ಚೋಪ್ರ

    ಬಾಲಿವುಡ್ ಚಿತ್ರೋದ್ಯಮದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ಉದಯ್ ಚೋಪ್ರ, ಮಹಾರಾಷ್ಟ್ರ ಸರಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ...

    ವೀರ್ ದಾಸ್

    ಬೀಫ್ ಬ್ಯಾನ್ ಜೊತೆ ಹಲ್ಲನ್ನು ನಿಷೇಧಿಸಿ. ಇದರಿಂದ ನೀವು ರಾಜಕಾರಣಿಗಳು ಬೇಕಾಬಿಟ್ಟಿ ಭಾಷಣ ಮಾಡುವುದು ತಪ್ಪುತ್ತೆ.

    ಪ್ರೀತೇಶ್ ನಂದಿ

    ಸರಕಾರದ ಈ ಕ್ರಮದಿಂದ ಎಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಆದರೂ ಬೀಫ್ ಬ್ಯಾನ್ ಆಗಿರೋದರಿಂದ ಸಾವಿರಾರು ಜಾನುವಾರುಗಳ ಜೀವ ಉಳಿಯುತ್ತೆ ಎನ್ನುವುದು ಸತ್ಯ.

    English summary
    Beef ban by Maharashtra government, Bollywood reaction through twitter. Most of them opposed government decision.
    Thursday, March 5, 2015, 11:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X