For Quick Alerts
  ALLOW NOTIFICATIONS  
  For Daily Alerts

  ಗಲ್ಫ್ ರಾಷ್ಟ್ರಗಳಲ್ಲಿ 'ಬೆಲ್ ಬಾಟಮ್' ಬ್ಯಾನ್: 4ನೇ ದಿನ ಗಳಿಸಿದ್ದೆಷ್ಟು?

  |

  ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಮ್' ಸಿನಿಮಾ ಕಳೆದ ಶುಕ್ರವಾರ ವರ್ಲ್ಡ್‌ವೈಡ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೊರೊನಾ ವೈರಸ್ ಎರಡನೇ ಅಲೆಯ ಭೀತಿಯ ನಡುವೆಯೂ ತೆರೆಕಂಡ ಅಕ್ಷಯ್ ಕುಮಾರ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. 'ಬೆಲ್ ಬಾಟಮ್' ಚಿತ್ರದ ಬಗ್ಗೆ ಮೌತ್ ಟಾಕ್ (ಬಾಯಿ ಮಾತು) ಚೆನ್ನಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ನಿರೀಕ್ಷೆ ಮಾಡಲಾಗಿದೆ.

  ಒಳ್ಳೆಯ ಓಪನಿಂಗ್ ಪಡೆದಿರುವ ಬೆಲ್ ಬಾಟಮ್ ಚಿತ್ರ ಗಲ್ಫ್ ರಾಷ್ಟ್ರಗಳಲ್ಲಿ ಪ್ರದರ್ಶಕ ಕಂಡಿಲ್ಲ ಎಂದು ವರದಿಯಾಗಿದೆ. ಪ್ರಮುಖವಾಗಿ ಸೌದಿ ಅರೆಬಿಯಾ, ಕತಾರ್ ಹಾಗೂ ಕುವೈತ್ ದೇಶಗಳಲ್ಲಿ ಅಕ್ಷಯ್ ಕುಮಾರ್ ಚಿತ್ರಕ್ಕೆ ನಿಷೇಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ರಂಜಿತ್ ತಿವಾರಿ ನಿರ್ದೇಶಿಸಿದ್ದ ಈ ಸಿನಿಮಾ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ನಡೆದ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. 1984ರಲ್ಲಿ ನಡೆದ ವಿಮಾನ ಅಪಹರಣದ ಸುತ್ತ ಬೆಲ್ ಬಾಟಮ್ ಚಿತ್ರಕಥೆ ಮಾಡಿದ್ದು, ವಿಮಾನಗಳ್ಳರು ಲಾಹೋರ್‌ನಲ್ಲಿ ಮೊದಲು ವಿಮಾನ ಕೆಳಗಿಳಿಸಿ, ನಂತರ ಅದನ್ನು ದುಬೈಗೆ ತೆಗೆದುಕೊಂಡು ಹೋಗಿದ್ದರು. ಆಮೇಲೆ 'ಬೆಲ್ ಬಾಟಮ್' ಎಂಬ ಹೆಸರಿನಲ್ಲಿ ಆಪರೇಷನ್ ಕೈಗೊಂಡು ವಿಮಾನದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವ ರಾ ಏಜೆಂಟ್ ಸುತ್ತ ಈ ಚಿತ್ರ ಸಿದ್ಧವಾಗಿದೆ. ಇದೀಗ, ಬೆಲ್ ಬಾಟಮ್ ಚಿತ್ರದಲ್ಲಿ ವಾಸ್ತವಿಕ ದೋಷ ಇದೆ ಎಂದು ಯುಎಇ ಅಧಿಕಾರಿಗಳು ಆರೋಪಿಸಿದ್ದು, ಚಿತ್ರಕ್ಕೆ ನಿಷೇಧ ಹೇರಿದ್ದಾರೆ.

  1984ರ ವಿಮಾನ ಅಪಹರಣ ಘಟನೆಯಲ್ಲಿ ಭಾರತೀಯ ಪ್ರಯಾಣಿಕರನ್ನು ಮುಕ್ತಗೊಳಿಸಲು ಮತ್ತು ಅಪಹರಣಕಾರರನ್ನು ಬಂಧಿಸುವಲ್ಲಿ ಯುಎಇ ರಕ್ಷಣಾ ಸಚಿವರಾಗಿದ್ದ ಶೇಖ್ ಮೊಹಮ್ಮದ್ ಬಿನ್ ರಾಶಿ ಅಲ್ ಮಕ್ತೌಮ್ ಹಾಗೂ ಯುಎಇ ಅಧಿಕಾರಿಗಳು ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿದ್ದು, ಈ ಚಿತ್ರದಲ್ಲಿ ಅದನ್ನು ಕಡಗಣಿಸಲಾಗಿದೆ ಎಂದು ದೂರಿದ್ದಾರೆ. ಹಾಗಾಗಿ, ಗಾಲ್ಫ್ ರಾಷ್ಟ್ರಗಳಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿಲ್ಲ ಎಂದು ವರದಿಯಾಗಿದೆ. ಮುಂದೆ ಓದಿ..

  ಬೆಲ್ ಬಾಟಮ್ ವಿಮರ್ಶೆ: ಅಕ್ಷಯ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆಬೆಲ್ ಬಾಟಮ್ ವಿಮರ್ಶೆ: ಅಕ್ಷಯ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ

  ಮೊದಲ ವಾರ 12 ಕೋಟಿ ಗಳಿಕೆ

  ಮೊದಲ ವಾರ 12 ಕೋಟಿ ಗಳಿಕೆ

  ಕೊರೊನಾ ವೈರಸ್ ಭೀತಿಯ ನಡುವೆಯೂ ಚಿತ್ರಮಂದಿರಗಳಲ್ಲಿ ತೆರೆಗೆ ಬಂದ ಬೆಲ್ ಬಾಟಮ್ ಸಿನಿಮಾ ಮೊದಲ ವಾರಾಂತ್ಯಕ್ಕೆ ಸಾಧಾರಣ ಮೊತ್ತ ಗಳಿಕೆ ಕಂಡಿದೆ. ಹಲವು ಸಂಕಷ್ಟಗಳ ನಡುವೆಯೂ ಧೈರ್ಯವಾಗಿ ಥಿಯೇಟರ್‌ಗೆ ಬಂದಿದ್ದ ಅಕ್ಷಯ್ ಕುಮಾರ್ ಸಿನಿಮಾ ಮೊದಲ ನಾಲ್ಕು ದಿನಕ್ಕೆ 12.65 ಕೋಟಿ ಬಾಚಿಕೊಂಡಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

  ಭಾನುವಾರ ಗಳಿಸಿದ್ದೆಷ್ಟು?

  ಭಾನುವಾರ ಗಳಿಸಿದ್ದೆಷ್ಟು?

  ಆಗಸ್ಟ್ 19ಕ್ಕೆ ತೆರೆಕಂಡ ಬೆಲ್ ಬಾಟಮ್ ಮೊದಲ ದಿನ 2.75 ಕೋಟಿ ಗಳಿಸಿತ್ತು. ಎರಡನೇ ದಿನ ಶುಕ್ರವಾರವೂ 2.75 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ದಿನ ಶನಿವಾರ 3.25 ಕೋಟಿ ಗಳಿಸಿದ್ರೆ, ಭಾನುವಾರ 4.30 ಕೋಟಿ ಬಾಚಿಕೊಂಡಿತು. ಈ ಮೂಲಕ ಮೊದಲ ನಾಲ್ಕು ದಿನಗಳಲ್ಲಿ ಒಟ್ಟು 12.65 ಕೋಟಿ ಗಳಿಸಿರುವ ಮಾಹಿತಿ ಇದೆ.

  ಅಕ್ಷಯ್‌ ಕುಮಾರ್ 'ಬೆಲ್ ಬಾಟಂ' ಮೊದಲ ದಿನ ಗಳಿಸಿದ್ದೆಷ್ಟು?ಅಕ್ಷಯ್‌ ಕುಮಾರ್ 'ಬೆಲ್ ಬಾಟಂ' ಮೊದಲ ದಿನ ಗಳಿಸಿದ್ದೆಷ್ಟು?

  ಒಟಿಟಿ ಆಫರ್ ಬಂದರೂ ಹೋಗಲಿಲ್ಲ

  ಒಟಿಟಿ ಆಫರ್ ಬಂದರೂ ಹೋಗಲಿಲ್ಲ

  ಬೆಲ್ ಬಾಟಮ್ ಚಿತ್ರಕ್ಕೆ ಒಟಿಟಿಯಿಂದ ಆಫರ್ ಬಂದಿತ್ತು. ಥಿಯೇಟರ್‌ಗೂ ಮೊದಲೇ ಒಟಿಟಿಯಲ್ಲಿ ರಿಲೀಸ್ ಮಾಡಲು ಕೇಳಿಕೊಂಡರು. ಆದರೆ, ಚಿತ್ರಮಂದಿರದಲ್ಲೇ ಬರಬೇಕು ಎನ್ನುವುದು ಅಕ್ಷಯ್ ಕುಮಾರ್ ತಂಡದ ನಿರ್ಧಾರವಾಗಿತ್ತು. ಅಂದುಕೊಂಡಂತೆ ಚಿತ್ರಮಂದಿರದಲ್ಲೇ ಬಂದ ಬೆಲ್‌ ಬಾಟಮ್‌ಗೆ ಅಷ್ಟು ದೊಡ್ಡ ಓಪನಿಂಗ್ ಸಿಕ್ಕಿಲ್ಲ. ಆದರೆ, ನಿರಾಸೆಯಂತೂ ಆಗಲಿಲ್ಲ.

  ಅಕ್ಷಯ್-ಲಾರಾ ದತ್ತಾ

  ಅಕ್ಷಯ್-ಲಾರಾ ದತ್ತಾ

  ಭಾರತೀಯ ರಾ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ಬಣ್ಣ ಹಚ್ಚಿದ್ದು, ಲಾರಾ ಮೇಕ್ ಓವರ್‌ಗೆ ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ. ಇನ್ನುಳಿದಂತೆ ವಾಣಿ ಕಪೂರ್, ಹುಮಾ ಖುರೇಶಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  Akshay Kumar Starrer Bell Bottom Film Banned In Saudi Arabia, Qatar and Kuwait Due to Factual Error.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X