ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್ ಬಾಟಮ್ ಪ್ರದರ್ಶನ

ಕೊರೊನಾ ಎರಡನೇ ಲಾಕ್‌ಡೌನ್ ಆದ ಬಳಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ತೆರೆಗೆ ಬಂದ ದೊಡ್ಡ ಸಿನಿಮಾ ಬೆಲ್ ಬಾಟಮ್. ಆಗಸ್ಟ್ 19 ರಂದು ರಿಲೀಸ್ ಆಗಿದ್ದ ಈ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಸಾಂಕ್ರಾಮಿಕ ರೋಗದ ನಡುವೆ ಒಳ್ಳೆಯ ಮೌತ್ ಟಾಕ್ ಹೊಂದಿರುವ ಚಿತ್ರ ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ ಎನ್ನುವುದು ನಿರಾಸೆ ತಂದಿದೆ.

ಈ ಚಿತ್ರವೀಗ ಲಡಾಖ್‌ನ ಲೇಹ್‌ನಲ್ಲಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿದೆ. ಈ ಕುರಿತು ಬಾಲಿವುಡ್ ನಟ ಅಕ್ಷಯ್ ಸಂತಸ ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.

1980ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಬಹುದೊಡ್ಡ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗಿತ್ತು. ದುಬಾರಿ ಬೆಲೆಗೆ ಒಟಿಟಿ ಆಫರ್ ಬಂದರೂ ಸಹ ಚಿತ್ರತಂಡ, ಥಿಯೇಟರ್‌ನಲ್ಲಿ ರಿಲೀಸ್ ಮಾಡುವುದಾಗಿ ಹಠಕ್ಕೆ ಬಿದ್ದು ಚಿತ್ರಮಂದಿದರಲ್ಲಿ ಬಿಡುಗಡೆ ಮಾಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಳಿಕೆಯಲ್ಲೂ ನಿರಾಸೆ ಎದುರಾಗಿದೆ. ಮುಂದೆ ಓದಿ...

ಅದ್ಭುತ ಅನುಭವ ಎಂದ ಅಕ್ಷಯ್ ಕುಮಾರ್

ಅದ್ಭುತ ಅನುಭವ ಎಂದ ಅಕ್ಷಯ್ ಕುಮಾರ್

ಲೇಹ್‌ನಲ್ಲಿರುವ ಮೊಬೈಲ್ ಥಿಯೇಟರ್ ಫೋಟೋ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ''ಲಡಾಖ್‌ನ ಲೇಹ್‌ನಲ್ಲಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ ಬೆಲ್‌ ಬಾಟಮ್ ಪ್ರದರ್ಶನ ಕಂಡಿದ್ದು ನನ್ನ ಹೃದಯ ತುಂಬಿದೆ ಬಂದಿದೆ ಹಾಗೂ ಹೆಮ್ಮೆ ಎನಿಸಿದೆ. 11562 ಅಡಿ ಎತ್ತರದಲ್ಲಿ 28 ಡಿಗ್ರಿ ಸೆಲ್ಸಿಯಸ್‌ನಲ್ಲಿ , ಥಿಯೇಟರ್ ಕಾರ್ಯನಿರ್ವಹಿಸುವುದು. ನಿಜಕ್ಕೂ ಇದು ಎಂತಹ ಅದ್ಭುತ'' ಎಂದು ಟ್ವೀಟ್ ಮಾಡಿದ್ದಾರೆ.

ನೈಜ ಘಟನೆ ಆಧರಿಸಿದ ಸಿನಿಮಾ

ನೈಜ ಘಟನೆ ಆಧರಿಸಿದ ಸಿನಿಮಾ

ರಂಜಿತ್ ತಿವಾರಿ ನಿರ್ದೇಶಿಸಿದ್ದ ಈ ಸಿನಿಮಾ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ನಡೆದ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. 80ರ ದಶಕದಲ್ಲಿ ನಡೆದ ವಿಮಾನ ಅಪಹರಣದ ಸುತ್ತ ಕಥೆ ಮಾಡಲಾಗಿದೆ. ಅಕ್ಷಯ್ ಕುಮಾರ್ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದರೆ, ವಾಣಿ ಕಪೂರ್ ಅವರ ಪತ್ನಿಯಾಗಿ ಅಭಿನಯಿಸಿದ್ದಾರೆ. ಲಾರಾ ದತ್ತಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ಮಾಡಿದ್ದು, ಹುಮಾ ಖುರೇಷಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಲ್ ಬಾಟಮ್ ಕಲೆಕ್ಷನ್ ಎಷ್ಟು?

ಬೆಲ್ ಬಾಟಮ್ ಕಲೆಕ್ಷನ್ ಎಷ್ಟು?

ಆಗಸ್ಟ್ 19ಕ್ಕೆ ತೆರೆಕಂಡ ಬೆಲ್ ಬಾಟಮ್ ಮೊದಲ ದಿನ 2.75 ಕೋಟಿ ಗಳಿಸಿತ್ತು. ಎರಡನೇ ದಿನ ಶುಕ್ರವಾರವೂ 2.75 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ದಿನ ಶನಿವಾರ 3.25 ಕೋಟಿ ಗಳಿಸಿದ್ರೆ, ಭಾನುವಾರ 4.30 ಕೋಟಿ ಬಾಚಿಕೊಂಡಿತು. ಈ ಮೂಲಕ ಮೊದಲ ನಾಲ್ಕು ದಿನಗಳಲ್ಲಿ ಒಟ್ಟು 12.65 ಕೋಟಿ ಗಳಿಸಿರುವ ಮಾಹಿತಿ ಇದೆ. ಮೊದಲ ಒಂಬತ್ತು ದಿನದಲ್ಲಿ 20 ಕೋಟಿ ದಾಟಿದೆ ಎಂದು ವರದಿಯಾಗಿದೆ.

ಅಕ್ಷಯ್ ಕುಮಾರ್ ಮುಂದಿನ ಚಿತ್ರಗಳು

ಅಕ್ಷಯ್ ಕುಮಾರ್ ಮುಂದಿನ ಚಿತ್ರಗಳು

ಅಕ್ಷಯ್ ಕುಮಾರ್ ಹಲವು ಚಿತ್ರಗಳು ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿಯ 'ಸೂರ್ಯವಂಶಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್, ರಣವೀರ್ ಸಿಂಗ್, ಅಜಯ್ ದೇವಗನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಭೂಮಿ ಪೆಡ್ನೇಕರ್ ಜೊತೆ 'ರಕ್ಷಾ ಬಂಧನ್' ಚಿತ್ರ ಮಾಡುತ್ತಿದ್ದಾರೆ. ಸಾರಾ ಅಲಿ ಖಾನ್, ಧನುಶ್ ಜೊತೆ 'ಅತ್ರಂಗಿ ರೇ' ಸಿನಿಮಾ ಮುಗಿಸಿದ್ದಾರೆ. ಇದರ ಜೊತೆ 'ರಾಮ್ ಸೇತು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Bollywood actor Akshay Kumar's Bell Bottom was screened at World’s highest mobile theatre at Leh in Ladakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X