ಶವವಾಗಿ ಪತ್ತೆಯಾದ ಮಾಡೆಲ್ ಬಿದಿಶಾ: ಕೊಲೆಯೊ? ಆತ್ಮಹತ್ಯೆಯೊ?

ಇತ್ತೀಚೆಗೆ ಮಾಡೆಲ್‌ಗಳ ಸಾವಿನ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿದೆ. ಮಾಡೆಲ್‌ಗಳು, ಪೋಷಕ ಪಾತ್ರ, ಎಕ್ಸ್‌ಟ್ರಾಗಳಾಗಿ ನಟಿಸುವ ನಟಿಯರ ಆತ್ಮಹತ್ಯೆ, ಕೊಲೆ ಪ್ರಕರಣಗಳು ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಾಗಿದೆ.

ಇದೀಗ ಕೊಲ್ಕತ್ತ ಮೂಲದ ಮಾಡೆಲ್ ಬಿದಿಶಾ ಡೆ ಮಜೂಮ್‌ಧಾರ್ ಸಾವನ್ನಪ್ಪಿದ್ದಾರೆ. ಬಿದಿಶಾಳ ಮೃತ ದೇಹ ಅವರದ್ದೇ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತಿದೆಯಾದರು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆಲ ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದ 21 ವರ್ಷದ ಯುವತಿ ಬಿದಿಶಾ, ಕೊಲ್ಕತ್ತದ ಡಂಡಂನ ನಗೇರ್ ಬಜಾರ್‌ನಲ್ಲಿ ವಾಸಿಸುತ್ತಿದ್ದರು. ಬಿದಿಶಾಗೆ ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿದ್ದವು, ಅದೇ ಕಾರಣಕ್ಕೆ ಮನನೊಂದು ಬಿದಿಶಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ ನೆರೆ ಹೊರೆಯವರು.

Bengali Model and Actress Bidisha De Found Dead In Her House In Kolkata

ಶವ ಪತ್ತೆಯಾದ ಮನೆಯಲ್ಲಿಯೇ ಬಿದಿಶಾ ಬರೆದಿರುವುದು ಎನ್ನಲಾಗುತ್ತಿರುವ ಆತ್ಮಹತ್ಯೆ ಪತ್ರ ಸಹ ದೊರೆತಿದೆ. ಆದರೆ ಆತ್ಮಹತ್ಯೆ ಪತ್ರ ಗೊಂದಲದಿಂದ ಕೂಡಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿದಿಶಾಳದ್ದು ಎನ್ನಲಾಗುತ್ತಿರುವ ಸೂಸೈಡ್ ನೋಟ್‌ನಲ್ಲಿ, ''ತೀರ ಗಂಭೀರ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ವೃತ್ತಿ ಬದುಕು ಯಶಸ್ವಿಯಾಗುತ್ತಿಲ್ಲ, ಮಾಡೆಲಿಂಗ್‌ನ ಯಾವುದೇ ಹೊಸ ಕೆಲಸಗಳು ಸಿಗುತ್ತಿಲ್ಲವಾದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ'' ಎಂದು ಪತ್ರದಲ್ಲಿ ಬರೆಯಲಾಗಿದೆ.

ಆದರೆ ಬಿದಿಶಾ ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆತ್ಮಹತ್ಯೆ ಪತ್ರವನ್ನು ಕೈಬರಹ ತಜ್ಞರಿಂದ ಪರೀಕ್ಷೆ ಮಾಡಿಸುತ್ತಿದ್ದಾರೆ. ಅಲ್ಲದೆ ಬಿದಿಶಾಳ ಮೊಬೈಲ್ ಅನ್ನು ವಶಪಡಿಸಿಕೊಂಡು ಸುಳಿವಗಾಗಿ ಹುಡುಕಾಟ ನಡೆಸಿದ್ದಾರೆ. ಬಿದಿಶಾಳ ಮೃತದೇಹದ ಮರಣೋತ್ತರ ಪರೀಕ್ಷೆ ಸಹ ಮಾಡಿಸಲಾಗಿದೆ.

Bengali Model and Actress Bidisha De Found Dead In Her House In Kolkata

ಕೋಲ್ಕತ್ತದ ಮಾಡೆಲಿಂಗ್ ಜಗತ್ತಿನಲ್ಲಿ ಬಿದಿಶಾ ಹೆಸರು ಮಾಡಿದ್ದರು. ಹಲವು ಲೋಕಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿದ್ದವು ಎನ್ನಲಾಗುತ್ತಿದೆ. ಮಾಡೆಲಿಂಗ್ ಜಗತ್ತಿನ ಹಲವರು ಬಿದಿಶಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಬಿದಿಶಾ ಸಾವಿನ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿರುವ ಕೊಲ್ಕತ್ತದ ಮಾಡೆಲ್ ಸಂತೂ ಮಂಡಲ್, ''ನಿನ್ನೆಯಷ್ಟೆ ಫೇಸ್‌ಬುಕ್ ಡಿಪಿ ಬದಲಾಯಿಸಿದ್ದೀಯ. ಇನ್‌ಸ್ಟಾಗ್ರಾಂನ ಕವರ್ ಪಿಕ್ ಬದಲಾಯಿಸಿದ್ದೀಯ. ನಟಿ ಪಲ್ಲವಿ ದೇ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಅದನ್ನು ಖಂಡಿಸಿ ಪೋಸ್ಟ್ ಹಾಕಿದ್ದೆ ಆದರೆ ಈಗ ನೀನು ಅದೇ ದಾರಿ ಹಿಡಿದೆಯಲ್ಲ'' ಎಂದು ನೋವಿನಿಂದ ಪ್ರಶ್ನೆ ಮಾಡಿದ್ದಾರೆ.

ಬೆಂಗಾಳಿ ಭಾಷೆಯ ಜನಪ್ರಿಯ ಟಿವಿ ನಟಿ ಪಲ್ಲಬಿ ಡೇ ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಲ್ಲಬಿ ಡೇ ಜೊತೆಗೆ ಲಿವ್ ಇನ್ ರಿಲೇಷನ್‌ನಲ್ಲಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

ಕೊಲ್ಕತ್ತದಲ್ಲಿ ಮಾತ್ರವೇ ಅಲ್ಲ ಹಲವು ರಾಜ್ಯಗಳಲ್ಲಿ ಮಾಡೆಲ್‌ಗಳು, ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರ ನಟಿಯರು ಆತ್ಮಹ್ಯೆಗೆ ಶರಣಾಗುತ್ತಿರುವ ಸುದ್ದಿಗಳು ಇತ್ತೀಚೆಗೆ ಹೆಚ್ಚು-ಹೆಚ್ಚು ಬರುತ್ತಿವೆ.

for India

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

More from Filmibeat

English summary
Bengali model and actress Bidisha De Majumdar found dead in her house in Kolkata's Dum Dum. Police investigating the case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X