ನನ್ನ ಸ್ಕರ್ಟ್ ಒಳಗೆ ಕೈ ಹಾಕಿದ, ಹೃತಿಕ್ ರೋಷನ್ ಕುಟುಂಬದ ವಿರುದ್ಧ ಗಾಯಕಿಯ ಗಂಭೀರ ಆರೋಪ...!
ಬಣ್ಣದ ಪ್ರಪಂಚದಲ್ಲಿ ನಡೆದ ಲೈಂಗಿಕ ಪ್ರಕರಣ.. ಕಿರುಕುಳ.. ದೌರ್ಜನ್ಯದ ಕುರಿತು ವಾರಕ್ಕೊಮ್ಮೆಯಾದರು ನಾವೆಲ್ಲರೂ ಸುದ್ದಿಯನ್ನ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಕಳೆದ ಐದಾರು ವರ್ಷದಲ್ಲಿ ಅನೇಕ ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಇಲ್ಲಿಯವರೆಗೆ ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲ ಇಂಡಸ್ಟ್ರಿಯಲ್ಲೂ ಇದೂ ಕಾಮನ್ನೂ ಕೂಡ. ಇನ್ನು ಮೀಟೂ ಅಭಿಯಾನದ ಸ್ಟ್ರಾಂಗ್ ಆದ ಮೇಲಂತೂ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತು ಪರಿಚಯವಾಗಿದೆ. ಸದ್ಯ ಬೆಂಗಾಲಿ ಗಾಯಕಿ ಲಗ್ನಜಿತ ಚಕ್ರವರ್ತಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ವಿರುದ್ಧ ನೇರಾ ನೇರ ಆರೋಪ ಮಾಡಿದ್ದಾರೆ. ರಾಜೇಶ್ ರೋಷನ್ ತಮ್ಮ ಸ್ಕರ್ಟ್ ಒಳಗೆ ಕೈ ಹಾಕಿದ್ದ ಎಂದು ಹೇಳಿದ್ದಾರೆ.

ಹೌದು, ಬೆಂಗಾಲಿಯಲ್ಲಿ ಗಾಯಕಿಯಾಗಿ ಹೆಸರು ಮಾಡಿ ಅನೇಕ ಆಲ್ಬಂಗಳಿಗೆ ತಮ್ಮ ಚಿನ್ನದ ಕಂಠ ಕುಣಿಸಿರುವ ಲಗ್ನಜಿತಾ ಚಟರ್ಜಿ, ಸ್ಟ್ರೈಟ್ ಅಪ್ ವಿತ್ ಶ್ರೀ ಪಾಡ್‌ಕಾಸ್ಟ್‌ನಲ್ಲಿ ಹೃತಿಕ್ ರೋಷನ್ ಅವರ ಚಿಕ್ಕಪ್ಪ ಮತ್ತು ಕಹೋ ನಾ ಪ್ಯಾರ್ ಹೈ ಚಿತ್ರದ ಸಂಗೀತ ನಿರ್ದೇಶಕ ರಾಜೇಶ್ ರೋಷನ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಲಗ್ನಜಿತಾ ನಾನು ಮುಂಬೈನಲ್ಲಿ ವಾಸ ಮಾಡುತ್ತಿದ್ದ ದಿನಗಳವು. ಅದೊಂದು ದಿನ ರಾಜೇಶ್ ರೋಷನ್ ತಮ್ಮ ಸಾಂತಾಕ್ರೂಜ್ ಬಳಿ ಇರುವ ಮನೆಗೆ ಕೆಲಸದ ಪ್ರಯುಕ್ತ ನನಗೆ ಕರೆದಿದ್ದರು. ಈ ಕಾರಣಕ್ಕೆ ನಾನು ಅಲ್ಲಿ ತೆರಳಿದ್ದೆ ಎಂದಿದ್ದಾರೆ. ಅವರ ಮನೆಯನ್ನು ನೋಡಿ ನಾನು ಬೆಕ್ಕಸ ಬೆರಗಾಗಿದ್ದೆ ಯಾಕೆಂದರೆ ಮನೆ ಅಷ್ಟೊಂದು ಸುಂದರವಾಗಿತ್ತು, ಮನೆಯನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡಲಾಗಿತ್ತು ಎಂದಿರುವ ಲಗ್ನಜಿತಾ ಆ ನಂತರ ನಾನು ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದ ಮ್ಯೂಸಿಕ್ ರೂಮ್‌ಗೆ ಹೋಗಿ ಕುಳುತುಕೊಂಡೆ ಅಲ್ಲಿ ಎಲ್ಲ ತರಹದ ಸಂಗೀತದ ಉಪಕರಣಗಳು ಇದ್ದವು ಎಂದಿದ್ದಾರೆ.
ಇನ್ನು ನಾನು ಆಗ ಕೆಲ ಜಾಹೀರಾತುಗಳಿಗೆ ಧ್ವನಿಯನ್ನ ನೀಡಿದ್ದೆ. ಹೀಗಾಗಿ ನಾನು ಮಾಡಿದ ಕೆಲಸವನ್ನು ತೋರಿಸುವಂತೆ ರಾಜೇಶಗ ರೋಷನ್ ನನಗೆ ಹೇಳಿದರು. ಅವರ ಅಣತಿಯಂತೆ ನಾನು ಟೇಬಲ್ ಮೇಲಿದ್ದ ಐಪ್ಯಾಡ್‌ನಲ್ಲಿ ಬ್ರೌಸ್ ಮಾಡಲು ಶುರು ಮಾಡಿದೆ ಎಂದಿರುವ ಲಗ್ನಜಿತಾ ಇದೇ ಸಮಯದಲ್ಲಿ ಸೀದಾ ನನ್ನ ಪಕ್ಕ ಬಂದು ಕುಳಿತುಕೊಂಡ ರಾಜೇಶ್ ರೋಷನ್ ಯಾವುದೇ ಅಳುಕಿಲ್ಲದೇ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದರು ಎಂದು ಹೇಳಿದ್ದಾರೆ. ತಪ್ಪೇ ಮಾಡಿಲ್ಲವೆನ್ನುವಂತೆ ವರ್ತಿಸಿದರು. ನಾನು ಕೂಡಲೇ ಅಲ್ಲಿದ್ದ ಎದ್ದು ಹೊರ ಬಂದೆ ಎಂದು ಹೇಳಿದ್ದಾರೆ.
ಮುಂದುವರೆದು ನಾನು ಆ ಸಮಯದಲ್ಲಿ ಈ ಘಟನೆಯನ್ನು ದೊಡ್ಡದು ಮಾಡಲಿಲ್ಲ. ಕಣ್ಣೀರು ಹಾಕುತ್ತಾ ಕೂಡ ಕೂರಲಿಲ್ಲ. ಯಾಕೆಂದರೆ ಅದು ಅವರ ಮಾನಸಿಕ ಸಮಸ್ಯೆ ಹೀಗಾಗಿ ಅವರು ಹಾಗೇ ಮಾಡಿದರು ಎಂದು ನಾನು ಭಾವಿಸುತ್ತೇನೆ ಎಂದಿರುವ ಲಗ್ನಜಿತಾ, ರಾಜೇಶ್ ರೋಷನ್ ಕೇವಲ ಒಂದು ಹೆಸರು ಮಾತ್ರ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಿದೆ ಎಂದು ಹೇಳಿದ್ದಾರೆ. ಸಾಕಷ್ಟು ಬಾರಿ ನನಗೆ ಇಂತಹ ಕಹಿ ಅನುಭವ ಆಗಿದೆ ಎಂದು ಲಗ್ನಜಿತಾ ಚಕ್ರವರ್ತಿ ಹೇಳಿದ್ದಾರೆ.


Click it and Unblock the Notifications











