Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಕಿನಿ ವಿವಾದಕ್ಕೆ ಕಾರಣವಾಗಿದ್ದ 'ಬೇಷರಮ್ ರಂಗ್' ಹಾಡು ಕದ್ದ ಮಾಲು; ಪಾಕ್ ಸಿಂಗರ್ ಆರೋಪ!
2022ರಲ್ಲಿ ಇತರೆ ಇಂಡಸ್ಟ್ರಿಗಳು ಒಳ್ಳೊಳ್ಳೆ ಚಿತ್ರಗಳನ್ನು ನೀಡಿ ಬಾಕ್ಸ್ ಅಫೀಸ್‌ನಲ್ಲಿ ಕೋಟಿ ಕೋಟಿ ಗಳಿಸಿ ಮೆರೆದರೆ ಬಾಲಿವುಡ್ ಚಿತ್ರರಂಗ ಮಾತ್ರ ಮೊದಲಿನ ಹಾಗೆ ಇತರೆ ಇಂಡಸ್ಟ್ರಿಗಳನ್ನು ಮೀರಿಸುವುದಿರಲಿ ಪೈಪೋಟಿಯನ್ನೂ ಸಹ ನೀಡದೇ ಹಿನ್ನಡೆ ಅನುಭವಿಸಿತು. ಹೌದು, ಕಳೆದ ವರ್ಷ ಬಾಲಿವುಡ್ ಚಿತ್ರರಂಗಕ್ಕೆ ಒಳ್ಳೆಯ ವರ್ಷವಾಗಿರಲಿಲ್ಲ. ಅದರಲ್ಲಿಯೂ ಬಾಲಿವುಡ್ ಸಿನಿ ರಸಿಕರೇ ಬಾಲಿವುಡ್ ಚಿತ್ರಗಳ ವಿರುದ್ಧ ತಿರುಗಿಬಿದ್ದು ಬಾಯ್‌ಕಾಟ್ ಟ್ರೆಂಡ್ ನಡೆಸಿದ್ದು ಚಿತ್ರಗಳ ಸೋಲಿಗೆ ಪ್ರಮುಖ ಕಾರಣವಾಯಿತು.
ಬಿಡುಗಡೆಗೊಂಡ ಚಿತ್ರಗಳು ಬಾಯ್‌ಕಾಟ್ ಅಭಿಯಾನದಿಂದ ಹಿನ್ನಡೆ ಅನುಭವಿಸಿದರೆ, ಈ ವರ್ಷ ಬಿಡುಗಡೆಯಾಗಲಿರುವ ಚಿತ್ರಗಳಿಗೂ ಸಹ ಕಳೆದ ವರ್ಷವೇ ಬಾಯ್‌ಕಾಟ್ ಬಿಸಿ ತಟ್ಟಿದೆ. ಅದರಲ್ಲಿಯೂ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರದ ಬೇಷರಮ್ ರಂಗ್ ಹಾಡು ಭಾರೀ ವಿವಾದಕ್ಕೆ ಒಳಗಾಗಿ ಚಿತ್ರವನ್ನು ಬಾಯ್‌ಕಾಟ್ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು.
ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು ಹಾಗೂ ಕಡು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದ ಶಾರುಖ್ ಖಾನ್ ದೀಪಿಕಾ ಜತೆ ಹಾಟ್ ಆಗಿ ರೊಮ್ಯಾನ್ಸ್ ಮಾಡಿದ್ದೆಲ್ಲಾ ಹಿಂದೂಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದ ಹಿಂದೂ ಪರ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ ಟ್ರೆಂಡ್ ನಡೆಸಿದ್ದರು. ಅಂದಹಾಗೆ ಈ ಟ್ರೆಂಡ್‌ಗೆ ಬೆಂಬಲವೂ ವ್ಯಕ್ತವಾಯಿತು ಹಾಗೂ ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ಕೇಸರಿ ಬಿಕಿನಿ ತೊಟ್ಟಾಗ ಯಾಕೆ ಈ ರೀತಿ ವಿರೋಧಿಸಲಿಲ್ಲ ಎಂದು ದನಿ ಎತ್ತಿ ಹಲವರು ವಿರೋಧವನ್ನೂ ಸಹ ವ್ಯಕ್ತಪಡಿಸಿದರು. ಹೀಗೆ ದೊಡ್ಡ ಮಟ್ಟದ ವಿರೋಧವನ್ನು ಎದುರಿಸಿದ್ದ ಈ ಹಾಡಿವ ವಿರುದ್ಧ ಇದೀಗ ಕೃತಿಚೌರ್ಯದ ಆರೋಪ ಸಹ ಕೇಳಿಬಂದಿದೆ. ಹೌದು, ಪಾಕಿಸ್ತಾನದ ಗಾಯಕನೋರ್ವ ಇದು ನಾನು ಹಾಡಿದ್ದ ಹಾಡಿನ ಕಾಪಿ ಎಂದು ಆರೋಪಿಸಿದ್ದಾನೆ.

26 ವರ್ಷದ ಹಳೆಯ ಹಾಡಿನ ಕಾಪಿ ಎಂದ ಸಜ್ಜದ್ ಅಲಿ
ಹೌದು, ಪಾಕಿಸ್ತಾನದ ಗಾಯಕ ಸಜ್ಜದ್ ಅಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು "ಇತ್ತೀಚೆಗಷ್ಟೆ ಹೊಸ ಚಿತ್ರವೊಂದರ ಹಾಡನ್ನು ಕೇಳಿದ ನಂತರ 26 ವರ್ಷಗಳ ಹಿಂದೆ ನಾನು ರಚಿಸಿದ್ದ ಅಬ್ ಕೆ ಹಮ್ ಬೆಚಾರೆ ಹಾಡಿನ ನೆನಪಾಯಿತು. ಕೇಳಿ ಆನಂದಿಸಿ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊದಲ್ಲಿ ತಮ್ಮ ಆ 26 ವರ್ಷಗಳ ಹಳೆಯ ಹಾಡನ್ನು ಸಜ್ಜದ್ ಅಲಿ ಹಾಡಿದ್ದಾರೆ.

ಹಾಡು ಕೇಳುತ್ತಿದ್ದಂತೆ ಪಠಾಣ್ ಕಡೆ ಬೆರಳು ತೋರಿಸಿದ ನೆಟ್ಟಿಗರು
ಇನ್ನು ಗಾಯಕ ಸಜ್ಜದ್ ಅಲಿ ಯಾವ ಚಿತ್ರದ ಹಾಡು ಎಂಬುದನ್ನು ಮಾತ್ರ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ ನೆಟ್ಟಿಗರು ಮಾತ್ರ ಈ ಹಾಡಿನ ರಾಗವನ್ನು ಕೇಳಿದ ತಕ್ಷಣ ಇವರು ಪಠಾಣ್ ಚಿತ್ರದ ಬೇಷರಮ್ ಹಾಡಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ. ಈ ಮೂಲಕ ಬೇಷರಮ್ ರಂಗ್ ಹಾಡು ನನ್ನ ಹಾಡಿನ ಕಾಪಿ ಎಂಬುದನ್ನು ಸಜ್ಜದ್ ಅಲಿ ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

ಆರೋಪಕ್ಕೆ ವ್ಯಕ್ತವಾಯಿತು ಮಿಶ್ರ ಪ್ರತಿಕ್ರಿಯೆ
ಸಜ್ಜದ್ ಅಲಿ ಈ ರೀತಿಯ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಹುತೇಕ ನೆಟ್ಟಿಗರು ಹೌದು, ಪಠಾಣ್ ಚಿತ್ರತಂಡ ಈ ಹಾಡಿನ ಕೃತಿ ಚೌರ್ಯ ಮಾಡಿದೆ, ಇದು ಪಕ್ಕಾ ಕಾಪಿ ಹಾಡು, ಹಾಡನ್ನು ಕದ್ದ ಕಾರಣ ಇವರಿಗೆ ಸೂಕ್ತ ಹಣ ನೀಡಬೇಕು, ಒಂದೊಳ್ಳೆ ಹಾಡನ್ನು ಕದ್ದು ಹಾಳು ಮಾಡಿಬಿಟ್ರು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹಾಡಿನ ರಾಗ ತುಸು ಅದೇ ರೀತಿ ಇದ್ದರೂ ಸಹ ಎರಡೂ ಹಾಡುಗಳಿಗೂ ಸಾಕಷ್ಟು ವ್ಯತ್ಯಾಸವಿದೆ, ಇದನ್ನು ಕೃತಿಚೌರ್ಯ ಎನ್ನಲಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.