ಲಾಬಿ ಮಾಡಿ ಆರನೇ ಪ್ರಶಸ್ತಿ ಪಡೆದ್ರಾ ಆಲಿಯಾ ಭಟ್, ಫಿಲ್ಮ್‌ಫೇರ್ ಸುತ್ತ ಮುತ್ತ ಆಕ್ರೋಶದ ಜ್ವಾಲೆ

ಪ್ರಶಸ್ತಿಗಳು ಬಂದರೆ ಮಾತ್ರ ಚಿತ್ರ ಗೆದ್ದಂತೆ ಅಲ್ಲ. ಪ್ರಶಸ್ತಿ ಒಲಿದರೆ ಮಾತ್ರ ಅಭಿನಯಕ್ಕೆ ಬೆಲೆ ಸಿಕ್ಕಿದೆ ಎಂದಲ್ಲ. ಚಿತ್ರ ನೋಡಿದ ಪ್ರೇಕ್ಷಕರು ಭೇಷ್ ಎಂದಾಗಲೇ ಅದು ಚಿತ್ರವೊಂದರ ಗೆಲುವು. ಅಭಿನಯಕ್ಕೆ ಮನ ಸೋತು ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದರೆ ಅದು ಕೂಡ ಗೆಲುವು. ಪ್ರಶಸ್ತಿ ಇವತ್ತ್ ಬಂದರೆ ನಾಳೆ ಮರೆತು ಹೋಗುತ್ತೆ. ಆದರೆ ಚಿತ್ರಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸಿದರೆ ಅದು ಮರೆಯಲಾಗದ ನೆನಪು.

ಆದರೂ ಕೂಡ ಅದ್ಯಾಕೋ ಈ ಪ್ರಶಸ್ತಿಯನ್ನು ಹಲವರು ಗಂಭೀರವಾಗಿ ಪರಿಗಣಿಸುತ್ತಾರೆ. ಚಿತ್ರ ಗೆಲ್ಲಲಿ.. ಸೋಲಲಿ.. ಪ್ರಶಸ್ತಿ ಮಾತ್ರ ಪ್ರತಿ ವರ್ಷ ತಮಗೆ ಸಿಗಬೇಕೆಂದುಕೊಳ್ಳುತ್ತಾರೆ. ಲಾಬಿಯನ್ನು ಕೂಡ ಮಾಡುತ್ತಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಈ ಲಾಬಿ ಗ್ಯಾಂಗ್ ದೊಡ್ಡದಿದೆ ಎನ್ನುವ ಮಾತು ಇದೆ. ಕಂಗನಾ ರಣಾವತ್ ಸೇರಿ ಈ ಹಿಂದೆ ಹಲವರು ಈ ಮಾತನ್ನು ಹೇಳಿದ್ದು ಇದೆ. ಸದ್ಯ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತೊಮ್ಮೆ ಈ ಲಾಬಿ ಚರ್ಚೆಗೆ ನಾಂದಿಯನ್ನು ಹಾಡಿದೆ.

Best Actress Shock Alia Bhatt s Jigra Filmfare Win Sparks Fan Fury Yami Gautam Sidelined Trends

ಹೌದು, ಪ್ರತಿ ವರ್ಷದಂತೆ ಈ ವರ್ಷ ಕೂಡ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಹಿಂದಿ ಉದ್ಯಮದವರಿಗೆ ನೀಡಲಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಕಾರ್ತಿಕ್ ಆರ್ಯನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದಕ್ಕೆ ಯಾರ ತಕರಾರು ಇಲ್ಲ.

ಆದರೆ ಆಲಿಯಾ ಭಟ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿರುವುದು ಫಿಲ್ಮ್‌ ಫೇರ್‌ನ ಆಯೋಜಕರು ಮತ್ತು ಆಡಳಿತ ಮಂಡಳಿಯ ಮೇಲೆ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಯಾಕೆಂದರೆ ಆಲಿಯಾಗೆ ಈ ಪ್ರಶಸ್ತಿ ಸಿಕ್ಕಿದ್ದು ''ಜಿಗ್ರಾ'' ಚಿತ್ರದಲ್ಲಿನ ಅಭಿನಯಕ್ಕಾಗಿ. ವಿಶೇಷ ಅಂದರೆ ಈ ಚಿತ್ರಕ್ಕೆ ಖುದ್ದು ಆಲಿಯಾನೇ ನಿರ್ಮಾಪಕಿ. ಇನ್ನೂ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲು ಇಲ್ಲ. ಆಲಿಯಾ ಅವರ ಅಭಿನಯ ಈ ಚಿತ್ರದಲ್ಲಿ ಹಲವರಿಗೆ ಇಷ್ಟ ಕೂಡ ಆಗಿಲ್ಲ.

ಇನ್ನೂ ವಿಶೇ‍ಷ ಅಂದರೆ ಪ್ರಶಸ್ತಿಯನ್ನು ಸ್ವೀಕರಿಸಲು ಆಲಿಯಾ ಮುಂಬೈನಿಂದ 533 ಕೀ.ಮಿ ದೂರ ಇರುವ ಅಹಮದಾಬಾದ್‌ಗೆ ಬಂದೇ ಇಲ್ಲ. ಆದರೂ ಕೂಡ ಇವರ ಜೊತೆ ಸ್ಫರ್ಧೆಯಲ್ಲಿದ್ದ ಕರೀನಾ ಕಪೂರ್ ಖಾನ್ (ಕ್ರ್ಯೂ), ಶ್ರದ್ಧಾ ಕಪೂರ್ (ಸ್ತ್ರೀ 2), ಟಬು (ಕ್ರ್ಯೂ), ಯಾಮಿ ಗೌತಮ್ (ಆರ್ಟಿಕಲ್ 370) ಮತ್ತು ಕೃತಿ ಸನೋನ್ (ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ) ಅವರನ್ನು ಕಡೆಗಣಿಸಿ ಈ ಪ್ರಶಸ್ತಿಯನ್ನು ಆಲಿಯಾಗೆ ನೀಡಲಾಗಿದೆ.

ಹಾಗೇ ನೋಡಿದರೆ ಆಲಿಯಾಗಿಂತ ಈ ಪ್ರಶಸ್ತಿಗೆ ಈ ಬಾರಿ ''ಆರ್ಟಿಕಲ್ 370'' ಚಿತ್ರದಲ್ಲಿನ ಅಭಿನಯಕ್ಕೆ ಯಾಮಿ ಗೌತಮ್ ಅರ್ಹರಾಗಿದ್ದರು. ಎಲ್ಲರು ಯಾಮಿ ಗೌತಮ್ ಅವರಿಗೆ ಈ ಬಾರಿ ಪ್ರಶಸ್ತಿ ಬರುತ್ತೆ ಎಂದುಕೊಂಡಿದ್ದರು. ಆದರೆ.. ಬಾಲಿವುಡ್‌ಗೆ ಹೊರಗಡೆಯಿಂದ ಬಂದಿರುವ ಯಾಮಿ ಗೌತಮ್‌ಗೆ ದಕ್ಕಿದ್ದು ಈ ಬಾರಿ ಕೂಡ ನಿರಾಸೆ.

Best Actress Shock Alia Bhatt s Jigra Filmfare Win Sparks Fan Fury Yami Gautam Sidelined Trends

ಹೀಗಾಗಿಯೇ ಹಲವರು ಈಗ ಆಲಿಯಾ ಭಟ್ ವಿರುದ್ದ ಮತ್ತು ಫಿಲ್ಮ್‌ಫೇರ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ''ರೆಡ್ಡಿಟ್''ನಲ್ಲಿ ಈ ಕುರಿತು ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ಹಲವರು "ಪ್ರತಿ ವರ್ಷವೂ ಆಲಿಯಾ ಭಟ್ ಮಾತ್ರ ತಪ್ಪದೇ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹೇಗೆ ಗೆಲ್ಲುತ್ತಾರೆಂದು ಅರ್ಥವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಈ ವರ್ಷ ಅವರ ಚಿತ್ರ ಫ್ಲಾಪ್ ಆಗಿದ್ದರೂ ಅವರಿಗೆ 'ಜನಪ್ರಿಯ' ವಿಭಾಗದಲ್ಲಿ ಪ್ರಶಸ್ತಿ ಬಂದಿದೆ. ಇದು ಅವರ ಆರನೇ ಪ್ರಶಸ್ತಿಯಾಗಿದ್ದು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ಆ ಆರರಲ್ಲಿ ಮೂರು ಪ್ರಶಸ್ತಿಗಳಿಗೆ ಮಾತ್ರ ಅರ್ಹರು, ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ವರ್ಷ ನ್ಯಾಯಯುತವಾಗಿ ಈ ಪ್ರಶಸ್ತಿ ಯಾಮಿ ಗೌತಮ್ ಅವರ ಅದ್ಭುತ ಅಭಿನಯಕ್ಕೆ ಸಿಗಬೇಕಿತ್ತು. ಆದರೆ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಇದು ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕುತ್ತಿರುವ ಹಲವರು ಬಾಲಿವುಡ್‌ನಲ್ಲಿ ಲಾಬಿ ಸಂಸ್ಕ್ರತಿ ಕೊನೆಯಾಗಬೇಕು ಎಂಬ ಮಾತುಗಳನ್ನಾಡುತ್ತಿದ್ದಾರೆ.

More from Filmibeat

English summary
Alia Bhatt's victory for Jigra at the Filmfare Awards 2025 triggers massive online backlash. Netizens erupt, demanding justice for Yami Gautam: 'Sidelined again!
Read more about: alia bhat awards filmfare award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X