twitter
    For Quick Alerts
    ALLOW NOTIFICATIONS  
    For Daily Alerts

    2019ರಲ್ಲಿ ಅತಿ ಹೆಚ್ಚು ದುಡ್ಡು ಬಾಚಿದ ಬಾಲಿವುಡ್ ಚಿತ್ರಗಳು

    By ಜೇಮ್ಸ್ ಮಾರ್ಟಿನ್
    |

    2019 ಮುಗಿಯುತ್ತಾ ಬಂದಿದೆ, ಹೊಸ ಕನಸುಗಳು, ಹೊಸ ನಿರೀಕ್ಷೆಗಳ ಜೊತೆ ಹೊಸ ವರ್ಷವನ್ನು ಸ್ವಾಗತಿಸಲು ಬಣ್ಣದ ಜಗತ್ತು ಬಾಲಿವುಡ್ ಕೂಡಾ ಸಜ್ಜಾಗಿದೆ. ಕಳೆದ ವರ್ಷದಲ್ಲಿ ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸಾಫೀಸ್ ನಲ್ಲೂ ಭರ್ಜರಿ ಬೆಳೆ ತೆಗೆದಿವೆ. ಹಲವು ಚಿತ್ರಗಳು ಭಾರಿ ನಿರೀಕ್ಷೆ ಹುಟ್ಟಿಸಿ ನೆಲಕಚ್ಚಿವೆ.

    ಬಾಕ್ಸಾಫೀಸ್ ನಲ್ಲಿ 100 ಕೋಟಿ ರು ಗಳಿಕೆ ಎಂಬುದು ಈಗ ಕನಿಷ್ಠ ಮೊತ್ತವಾಗಿದ್ದು, 200 ಪ್ಲಸ್ ಕೋಟಿ ರು ಗಳಿಕೆಯಿಂದ ಮೊದಲುಗೊಂಡು ಅತಿ ಹೆಚ್ಚು ಗಳಿಸಿದ ಚಿತ್ರಗಳನ್ನು ಪಟ್ಟಿ ಮಾಡಲಾಗಿದೆ.

    ಬಾಕ್ಸಾಫೀಸ್ ಸುಲ್ತಾನ್ : 100 ಕೋಟಿ ರು ಗಳಿಸಿದ ಸಲ್ಮಾನ್ ಫಿಲಂಗಳುಬಾಕ್ಸಾಫೀಸ್ ಸುಲ್ತಾನ್ : 100 ಕೋಟಿ ರು ಗಳಿಸಿದ ಸಲ್ಮಾನ್ ಫಿಲಂಗಳು

    ಚಿತ್ರಮಂದಿರದಿಂದ ಟಿಕೆಟ್ ಗಳಿಕೆ ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿದರೆ ಬರುವ ಮೊತ್ತವನ್ನು ಕಾಲಕಾಲಕ್ಕೆ ಮಾರುಕಟ್ಟೆ ತಜ್ಞರಾದ ತರಣ್ ಆದರ್ಶ್, ರಮೇಶ್ ಬಲ ಮುಂತಾದವರು ನೀಡುತ್ತಾ ಬಂದಿದ್ದಾರೆ. ಮಿಕ್ಕಂತೆ ವಿಕಿಪೀಡಿಯಾ ನೀಡಿರುವ ಮಾಹಿತಿ ಅನ್ವಯ 2019ರಲ್ಲಿ ಅತಿ ಹೆಚ್ಚು ದುಡ್ಡು ಬಾಚಿದ ಬಾಲಿವುಡ್ ಚಿತ್ರಗಳ ಪಟ್ಟಿ ನೀಡಲಾಗಿದೆ.

    ಕನಿಷ್ಠ 200 ಪ್ಲಸ್ ಕೋಟಿ ರು ಗಳಿಸಿದ ಚಿತ್ರಗಳು

    ಕನಿಷ್ಠ 200 ಪ್ಲಸ್ ಕೋಟಿ ರು ಗಳಿಸಿದ ಚಿತ್ರಗಳು

    ಬಾಲಿವುಡ್ ನಲ್ಲಿ ಸಲ್ಮಾನ್, ಶಾರುಖ್, ಅಮೀರ್ ಖಾನ್ ತ್ರಯರಲ್ಲದೆ ನಂತರ ಅಜಯ್, ಅಕ್ಷಯ್ ಸೇರಿದಂತೆ ಇನ್ನಿತರ ಸ್ಟಾರ್ ಗಳು ಕೂಡಾ 100 ಕೋಟಿ ಕ್ಲಬ್ಬಿನಲ್ಲಿ ಸೇರಿಕೊಂಡರು. ಕಳೆದ ವರ್ಷದ ಟಾಪ್ 10ರಲ್ಲಿ ವೈವಿಧ್ಯಮಯ ಚಿತ್ರಗಳು ಹೆಚ್ಚು ಗಳಿಕೆ ಪಟ್ಟಿಯಲ್ಲಿವೆ. ಯಶ್ ರಾಜ್ ಪ್ರೊಡೆಕ್ಷನ್, ಅನಿಲ್ ತಡಾನಿ ಅವರ ಎಎ ಫಿಲಂಸ್, ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಹೆಚ್ಚಿನ ಗಳಿಕೆ ಕಂಡಿದ್ದರೆ, ರಿಲಯನ್ಸ್ ಎಂಟರ್ಟೈನ್ಮೆಂಟ್ ಪಿವಿಆರ್ ಪಿಕ್ಚರ್ಸ್ ಕೂಡಾ ಟಾಪ್ ಗಳಿಕೆ ಪಟ್ಟಿ ಸೇರಿದೆ.

    ಪ್ರಭಾಸ್ ಹಾಗೂ ಶ್ರದ್ಧಾಕಪೂರ್ ಅಭಿನಯದ ಸಾಹೋ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿತ್ತು. 350 ಕೋಟಿ ರು ಹೂಡಿಕೆಯ ಈ ಚಿತ್ರ 433.06 ಕೋಟಿ ರು ಗಳಿಸಿತ್ತು. ಆದರೆ, ಹಿಂದಿಯಲ್ಲಿ ನಿರೀಕ್ಷಿತ ಮಟ್ಟದ ಗಳಿಕೆ ಕಾಣಲಿಲ್ಲ.

    1. ವಾರ್

    1. ವಾರ್

    1. ವಾರ್ -ಯಶ್ ರಾಜ್ ಫಿಲಂಸ್-474.79 ಕೋಟಿ ರು

    ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ವಾರ್ ಚಿತ್ರ ಸಕತ್ ಸಾಹಸಮಯ ದೃಶ್ಯಗಳಿಂದ ಕೂಡಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಬಹುತೇಕ ವಿಮರ್ಶಕರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾದರೂ ಮೊದಲ ದಿನವೇ 53.35 ಕೋಟಿ ರು ಬಾಚಿತು. 3 ದಿನಗಳಲ್ಲೇ 100 ಕೋಟಿ ರು ಕ್ಲಬ್ ಸೇರಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆದು ತ್ವರಿತಗತಿಯಲ್ಲಿ 200 ಕೋಟಿ ರು ಗಡಿ ದಾಟಿತು. ಒಟ್ಟಾರೆ, 474.79 ಕೋಟಿ ರು ಬಾಚಿದೆ. ಹೃತಿಕ್ ಅಕ್ಟೋಬರ್ 02 ರಂದು ತೆರೆ ಕಂಡ ಈ ಚಿತ್ರದಲ್ಲಿ ರೋಷನ್- ಟೈಗರ್ ಶ್ರಾಫ್ ಮುಖ್ಯ ಭೂಮಿಕೆಯಲ್ಲಿದ್ದು, ಸಿದ್ದಾರ್ಥ್ ಆನಂದ್ ನಿರ್ದೇಶಕರಾಗಿದ್ದಾರೆ.

    1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?

    2. ಕಬೀರ್ ಸಿಂಗ್

    2. ಕಬೀರ್ ಸಿಂಗ್

    2. ಕಬೀರ್ ಸಿಂಗ್- ಟೀ ಸೀರಿಸ್(ಎಎ ಫಿಲಂಸ್)- 379.02 ಕೋಟಿ ರು.

    ತೆಲುಗಿನ ಸೂಪರ್ ಹಿಟ್ ಚಿತ್ರ ಅರ್ಜುನ್ ರೆಡ್ಡಿ ರಿಮೇಕ್ ಕಬೀರ್ ಸಿಂಗ್ ಚಿತ್ರ ಹೊಸ ಕ್ರೇಜ್ ಹುಟ್ಟು ಹಾಕಿತು ಜೊತೆಗೆ ವರ್ಷದ ಅತ್ಯಂತ ವಿವಾದಿತ ಚಿತ್ರದ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆದುಕೊಂಡಿತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಶಹೀದ್ ಕಪೂರ್, ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರದ ಹಸಿಬಿಸಿ ದೃಶ್ಯ, ಸಂಭಾಷಣೆ, ಮುಖ್ಯ ಪಾತ್ರ ಪೋಷಣೆ ಬಗ್ಗೆ ಇಂದಿಗೂ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಚಿತ್ರ 379.02 ಕೋಟಿ ರು ಗಳಿಸಿ ಯಶಸ್ವಿ ಚಿತ್ರ ಎನಿಸಿದೆ.

    3. ಉರಿ

    3. ಉರಿ

    3. ಉರಿ- ದಿ ಸರ್ಜಿಕಲ್ ಸ್ಟ್ರೈಕ್- ಆರ್ ಎಸ್ ವಿಪಿ ಮೂವಿಸ್-342.06 ಕೋಟಿ ರು.

    ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಕಥಾನಕ ಹೊಂದಿರುವ ಉರಿ ಚಿತ್ರದ ವಿಕ್ಕಿ ಕೌಶಲ್ ನಟನೆ, ಡೈಲಾಗ್ಸ್ ಹೊಸ ಸಂಚಲನ ಮೂಡಿಸಿತ್ತು. ವಿಕ್ಕಿ ಕೌಶರ್ ಲೆಗ್ ಸ್ಟಾರ್ ಪಟ್ಟ ನೀಡಿತು. ಪುಲ್ವಾಮಾದಲ್ಲಿ ಉಗ್ರರ ದಾಳಿ, ಅದಕ್ಕೆ ಸೇನೆಯ ಪ್ರತೀಕಾರ ಎಲ್ಲವೂ ಚಿತ್ರದ ಓಟಕ್ಕೆ ಪೂರಕವಾಯಿತು. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ 342.06 ಕೋಟಿ ರು ಗಳಿಸಿ, ಭರ್ಜರಿ ಯಶಸ್ಸು ಗಳಿಸಿತು.

    4. ಭಾರತ್

    4. ಭಾರತ್

    4. ಭಾರತ್-ರೀಲ್ ಲೈಫ್ ಪ್ರೊಡೆಕ್ಷನ್-ಸಲ್ಮಾನ್ ಖಾನ್ ಫಿಲಂಸ್, ಟೀಸೀರಿಸ್-ಎಎ ಫಿಲಂಸ್-325.58 ಕೋಟಿ ರು.

    ಕೊರಿಯನ್ ಚಿತ್ರದ ರಿಮೇಕ್ ಭಾರತ್ ಮೂಲಕ ಸಲ್ಮಾನ್ ಖಾನ್ ಮತ್ತೊಮ್ಮೆ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡರು. ಸಲ್ಮಾನ್ ಖಾನ್, ಕತ್ರೀನಾ ಕೈಫ್ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತು.

    ಜೂನ್ 5 ರಂದು ತೆರೆ ಕಂಡ ಅಲಿ ಅಬ್ಬಾದ್ ಜಾಫರ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ 325.58 ಕೋಟಿ ರು ಗಳಿಸಿದ್ದಲ್ಲದೆ, ವಿಮರ್ಶಕರ ಮಿಶ್ರ ಪ್ರತಿಕ್ರಿಯೆ ನಡುವೆಯೂ ಉತ್ತಮ ಗಳಿಕೆ ಕಂಡು ಅಚ್ಚರಿ ಮೂಡಿಸಿತು.

    5. ಮಿಷನ್ ಮಂಗಲ್

    5. ಮಿಷನ್ ಮಂಗಲ್

    5. ಮಿಷನ್ ಮಂಗಲ್-ಫಾಕ್ಸ್ ಸ್ಟಾರ್ ಸ್ಟುಡಿಯೋ-290.02 ಕೋಟಿ ರು

    ಬಹುತೇಕ ಮಹಿಳಾ ನಟಿಯರನ್ನೇ ಪ್ರಧಾನ ಭೂಮಿಕೆಯಲ್ಲಿ ಹೊಂದಿದ್ದ ಮಂಗಳಯಾನ ಕುರಿತ ಮಿಷನ್ ಮಂಗಲ್ ಚಿತ್ರ ಅಚ್ಚರಿಯ ಗಳಿಕೆ ಕಂಡಿತು. ಅಕ್ಷಯ್ ಕುಮಾರ್ ಅಲ್ಲದೆ ವಿದ್ಯಾಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್ ಅಭಿನಯಕ್ಕೆ ವಿಮರ್ಶಕರು ಫುಲ್ ಮಾರ್ಕ್ಸ್ ನೀಡಿದ್ದರು. ಗಳಿಕೆಯನ್ನು ಮುನ್ನುಗ್ಗಿ 290.02 ಕೋಟಿ ರು ಗಳಿಸಿದ ಸಾಧನೆ ಮಾಡಿದೆ.

    6. ಹೌಸ್ ಫುಲ್ 4

    6. ಹೌಸ್ ಫುಲ್ 4

    6. ಹೌಸ್ ಫುಲ್ 4-ಫಾಕ್ಸ್ ಸ್ಟಾರ್ ಸ್ಟುಡಿಯೋಸ್-279.13 ಕೋಟಿ ರು.

    ಹಾಸ್ಯಮಯ ದೃಶ್ಯ ಹೌಸ್ ಫುಲ್ 4 ಬಹು ತಾರಾಗಣ ಹೊಂದಿದ್ದು,
    ಅಕ್ಷಯ್, ಬಾಬ್ಬಿ ಡಿಯೋಲ್, ರಿತೇಶ್ ದೇಶ್ ಮುಖ್ ಅಭಿನಯದ ಈ ಚಿತ್ರದ ಶೈತಾನ್ ಕಾ ಸಾಲ ಹಾಡು ಸಕತ್ ಹಿಟ್ ಆಗಿತ್ತು. ಫರ್ಹಾದ್ ನಿರ್ದೇಶನದ ಈ ಚಿತ್ರ 76 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಅಕ್ಟೋಬರ್ 25ರಂದು ತೆರೆ ಕಂಡು ಸುಮಾರು 279.13 ಕೋಟಿ ರು ಗಳಿಸಿತು.

    7. ಗಲ್ಲಿ ಬಾಯ್

    7. ಗಲ್ಲಿ ಬಾಯ್

    7. ಗಲ್ಲಿ ಬಾಯ್- ಎಕ್ಸೆಲ್ ಎಂಟರ್ ಟೇನ್ಮೆಂಟ್, ಟೈಗರ್ ಬೇಬಿ ಪ್ರೊಡೆಕ್ಷನ್- ಎಎ ಫಿಲಂಸ್-238.16 ಕೋಟಿ ರು.


    ರಣವೀರ್ ಸಿಂಗ್, ಆಲಿಯಾ ಭಟ್, ಸಿದ್ದಾಂತ್ ಚತುರ್ವೇದಿ ಅಭಿನಯದ ಗಲ್ಲಿ ಬಾಯ್ ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದಾರೆ. 40 ರಿಂದ 84 ಕೋಟಿ ರು ಹೂಡಿಕೆಯೊಂದಿಗೆ ತಯಾರಾದ ಗಲ್ಲಿ ಬಾಯ್ ಚಿತ್ರ ಸರಿ ಸುಮಾರು 238.16 ಕೋಟಿ ರು ಗಳಿಸಿತು. ಧಾರಾವಿಯ ಸ್ಲಂನ ಯುವಕನೊಬ್ಬ Rapper ಆಗಿ ಬೆಳೆಯುವ ಕಥೆ ಹೊಂದಿದೆ. ಆಸ್ಕರ್ ಅಂಗಳಕ್ಕೂ ಕಾಲಿಟ್ಟ ಈ ಚಿತ್ರದ ಕಥೆ, ಹಾಡು ಎಲ್ಲಾ ವರ್ಗದ ಮೆಚ್ಚುಗೆ ಗಳಿಸಿತು.

    8. ಟೋಟಲ್ ಧಮಾಲ್

    8. ಟೋಟಲ್ ಧಮಾಲ್

    8. ಟೋಟಲ್ ಧಮಾಲ್- ಅಜಯ್ ದೇವಗನ್ ಫಿಲಂಸ್, ಫಾಕ್ಸ್ ಸ್ಟಾರ್ ಸ್ಟುಡಿಯೋಸ್-228.27 ಕೋಟಿ ರು.

    2007ರ ಧಮಾಲ್ ಚಿತ್ರದ ಮುಂದುವರೆದ ಭಾಗವಾದ ಟೋಟಲ್ ಧಮಾಲ್ ಫೆಬ್ರವರಿ 22ರಂದು ತೆರೆ ಕಂಡಿತ್ತು. ಅಜಯ್ ದೇವಗನ್ ,ಅನಿಲ್ ಕಪೂರ್, ಮಾಧುರಿ ದೀಕ್ಷಿತ್, ರಿತೇಶ್ ದೇಶ್ ಮುಖ್, ಅರ್ಷದ್ ವಾರ್ಸಿ, ಈಶಾ ಗುಪ್ತಾ ಅಭಿನಯದ ಈ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ ಆದರೂ ಉತ್ತಮ ಗಳಿಕೆ ಕಂಡು 228.27 ಕೋಟಿ ರು ಗಳಿಸಿ ಅಚ್ಚರಿ ಮೂಡಿಸಿತು.

    9- ಚಿಚೋರೆ

    9- ಚಿಚೋರೆ

    9- ಚಿಚೋರೆ-ನಾಡಿಯಾಡ್ ವಾಲ್ ಗ್ರ್ಯಾಂಡ್ ಸನ್ ಎಂಟರ್ ಟೇನ್ಮೆಂಟ್-ಫಾಕ್ಸ್ ಸ್ಟಾರ್ ಸ್ಟುಡಿಯೋಸ್-212.67 ಕೋಟಿ ರು.

    ಕಾಲೇಜುಗಳ ಹಾಸ್ಟೆಲ್ ಜೀವನದ ಕಥೆ ಕಟ್ಟಿ ಕೊಡುವ ಚಿಚೋರೆ ಹಾಸ್ಯದ ಜೊತೆಗೆ ಇಂದಿನ ಪೀಳಿಗೆಯ ಪೋಷಕರು ಹಾಗೂ ಮಕ್ಕಳ ನಡುವಿನ ಬಾಂಧವ್ಯ ಹೇಗಿರಬೇಕು ಎಂಬುದನ್ನು ತಿಳಿ ಹೇಳುತ್ತದೆ. ವಿಮರ್ಶಕರು, ಪ್ರೇಕ್ಷಕರ ಮೆಚ್ಚುಗೆ ಪಡೆದ ಈ ಚಿತ್ರದಲ್ಲಿ ಸುಶಾಂತ್ ಸಿಂಗ್, ಶ್ರದ್ಧಾಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ. ಫಾಕ್ಸ್ ಸ್ಟಾರ್ ಸ್ಟುಡಿಯೋ ವಿತರಣೆಯ ಈ ಚಿತ್ರ ಸುಮಾರು 212.67 ಕೋಟಿ ರು ಬಾಚಿತ್ತು.

    10. ಸೂಪರ್ 30

    10. ಸೂಪರ್ 30

    10. ಸೂಪರ್ 30-ಫಾಂಟಮ್ ಫಿಲಂಸ್, ರಿಲಯನ್ಸ್ ಎಂಟರ್ ಟೇನ್ಮೆಂಟ್-208.93 ಕೋಟಿ ರು.

    ಗಣಿತಜ್ಞ ಆನಂದ್ ಕುಮಾರ್ ಜೀವನಗಾಥೆಯನ್ನು ಹೊಂದಿರುವ ವಿಕಾಸ್ ಬೆಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದರು. ವಿಮರ್ಶಕರ ಮೆಚ್ಚುಗೆಯನ್ನು ಪಡೆದ ಈ ಚಿತ್ರ 208.93 ಕೋಟಿ ರು ಗಳಿಸಿತು.

    English summary
    Best of 2019: Here is list of Top 10 Highest Grossing Bollywood Movies Of 2019 as per the worldwide box office gross revenue.
    Monday, December 16, 2019, 20:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X