ತಾಯಿಯಾಗುವ ಯಾವ ಆಸೆಯೂ ನನಗಿಲ್ಲ ; ಆ ತರಹದ ಹುಡುಗರು ನನ್ನ ಜೀವನದಲ್ಲಿ ಬೇಡ ಎಂದ 41 ವರ್ಷದ ಚೆಲುವೆ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ.
ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಇದರ ನಡುವೆ ಎಷ್ಟೇ ದೃಢ ನಿರ್ಧಾರ ಮಾಡಿದರು.. ಜೀವನ ಸಂಗಾತಿಯೇ ಬೇಡ ಎಂದು ಅಂದುಕೊಂಡರು.. ಕೆಲ ಮಹಿಳೆಯರಲ್ಲಿ ತಾಯ್ತನದ ಹಂಬಲ ಮಾತ್ರ ಇದ್ದೇ ಇರುತ್ತೆ. ಆದರೆ ಅಲ್ಲೊಬ್ಬರು.. ಇಲ್ಲೊಬ್ಬರು.. ಇದಕ್ಕೆ ತದ್ವಿರುದ್ಧ ಎಂಬಂತೆ ಇರುತ್ತಾರೆ. ಮದುವೆಯೂ ಬೇಡ.. ಮಕ್ಕಳು ಬೇಡ.. ಎನ್ನುವ ಧೋರಣೆ ಇವರದ್ದು. ಉದಾಹರಣೆಗೆ ಶಕ್ತಿ ಮೋಹನ್.
ಹೌದು. ಶಕ್ತಿ ಮೋಹನ್.. ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿ. ''ಧೂಮ್ 3'' ಚಿತ್ರದಲ್ಲಿ ಕತ್ರಿನಾ ಕೈಫ್ ಅವರನ್ನು ಕಮಲಿ ಹಾಡಿಗಾಗಿ ತಮ್ಮ ಬೆರಳ ತುದಿಯಲ್ಲಿ ಕುಣಿಸಿದವರು ಇವರೇ. ''ಪದ್ಮಾವತ್'' ಚಿತ್ರದ ನೃತ್ಯ ಸಂಯೋಜಕಿ ಕೂಡ ಇವರೇ.
''ಸಿದ್ದಾರ್ಥ ಕಣ್ಣನ್'' ಅವರಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ.. ಪ್ರೀತಿ ಮತ್ತು ಸಂಬಂಧದ ಕುರಿತು ಮಾತನಾಡಿರುವ ಶಕ್ತಿ ಮೋಹನ್, ಮದುವೆಯ ಕುರಿತು ಹಲವರು ಪ್ರಶ್ನೆ ಕೇಳುತ್ತಾರೆ ಎಂದು ಹೇಳಿದ್ದಾರೆ. ನನ್ನ ತಂದೆ ಯಾರಾದರೂ ಬಾಯ್‌ಫ್ರೆಂಡ್ ಇದ್ದಾರಾ..? ಎಂದು ಕೇಳಿದರೆ ನನ್ನ ತಾಯಿ ಕೂಡ ನಿನ್ನ ಕನಸಿನ ರಾಜಕುಮಾರ ಯಾರಾದರೂ ಇದ್ದರೆ ಹೇಳು ಎಂದು ಪ್ರಶ್ನೆ ಕೇಳುತ್ತಾರೆ ಎಂದಿದ್ದಾರೆ.
ನನ್ನ ಕೆಲಸ ಮತ್ತು ನನ್ನ ಸ್ಟುಡಿಯೋ ಇಷ್ಟೇ ಸಾಕು, ಸದ್ಯ ನಾನು ನೆಮ್ಮದಿಯಿಂದ ಇದ್ದೇನೆ, ಖುಷಿಯಿಂದ ಇದ್ದೇನೆ, ಎಂದು ಹೇಳಿರುವ ಶಕ್ತಿ ಮೋಹನ್, ಜೀವನದಲ್ಲಿ ಯಾರಾದರೂ ಇರಬೇಕು ಎನ್ನುವ ಒತ್ತಡ ಸಮಾಜ ನಮ್ಮ ಮೇಲೆ ಹಾಕುತ್ತೆ, ಆದರೆ ನಾನು ಹೀಗೆ ಸಂತೋಷವಾಗಿದ್ದೇನೆ, ಅದರಲ್ಲಿ ಸಮಸ್ಯೆ ಏನು..? ತಪ್ಪೇನು..? ಎಂದು ಕೇಳಿದ್ದಾರೆ.

ಮುಂದುವರೆದು ನನಗೆ ಮಕ್ಕಳಿಗೆ ಜನ್ಮ ನೀಡಬೇಕೆಂಬ ಯಾವ ಆಸೆ ಕೂಡ ಇಲ್ಲ ಎಂದು ಹೇಳಿರರುವ ಶಕ್ತಿ ಮೋಹನ್, ತಾಯ್ತನ ಅನುಭವಿಸುವ ಯಾವ ಆಸೆಯೂ ನನ್ನಲಿಲ್ಲ ಎಂದು ಹೇಳಿದ್ದಾರೆ. ನನಗಾಗಿ ಮಕ್ಕಳನ್ನು ಹೊಂದಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ತಮ್ಮ ಹಿಂದಿನ ಕಹಿ ಘಟನೆಯನ್ನು ಕೂಡ ನೆನೆದಿರುವ ಶಕ್ತಿ ಮೋಹನ್, ಪ್ರೀತಿಯಲ್ಲಿ ನನಗೆ ಮೋಸ ಆಗಿದೆ ಎಂದು ಹೇಳಿದ್ದಾರೆ. ಎರಡು ಬಾರಿ ನನಗೆ ಲವ್ ಬ್ರೇಕಪ್ ಆಗಿದೆ ಎಂದು ಹೇಳಿರುವ ಶಕ್ತಿ ಮೋಹನ್, ರಿಲೇಶನ್‌ಶಿಪ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋದು ಅರ್ಥವಾಗುತ್ತಿದ್ದಂತೆ ಆ ಸಂಬಂಧದಿಂದ ಹೊರ ಬಂದೆ. ಅದು ಮೂರು ವರ್ಷದ ರಿಲೇಶನ್‌ಶಿಪ್. ಆದ್ರೆ ನನ್ನಮ್ಮ ಆ ಹುಡುಗ ಒಳ್ಳೆಯವನು ಅಂತ ಹೇಳ್ತಿದರು. ಹುಡುಗರು ಹಾಗೆಯೇ ಇರುತ್ತಾರೆ, ಅವರನ್ನು ಒಪ್ಪಿಕೊಳ್ಳಬೇಕು ಅನ್ನೋದು ಅಮ್ಮನ ಅಭಿಪ್ರಾಯ. ಆದ್ರೆ ಹುಡುಗರು ಹಾಗಿದ್ರೆ ಅವರಿಗೆ ನನ್ನ ಜೀವನದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.
ಪ್ರೀತಿಯಲ್ಲಿ ನೊಂದು ಬೆಂದು ನಾನು ಕಣ್ಣೀರು ಹಾಕುವ ಸಮಯದಲ್ಲಿ ನನ್ನ ತಾಯಿ ನನ್ನ ಸಂಕಟವನ್ನೆಲ್ಲಾ ಕಣ್ಣಾರೆ ಕಂಡಿದ್ದಾರೆ ಎಂದು ಹೇಳಿರುವ ಶಕ್ತಿ ಮೋಹನ್, ಮೋಸ ಅಂದರೆ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಈಗ ಯಾರಾದರೂ ನಿಮಗೆ ಮೋಸ ಮಾಡಿದರೆ, ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ನನ್ನ ಬಾಯ್‌ಫ್ರೆಂಡ್ ನನ್ನೆದುರೇ ಬೇರೆಯವರ ಜೊತೆ ಚಕ್ಕಂದ ಆಡುತ್ತಿದ್ದ, ಪ್ರಶ್ನೆ ಮಾಡಿದಾಗ ನೆಪ ಹೇಳಲು ಶುರು ಮಾಡಿದ, ಕೊನೆಗೆ ಸತ್ಯ ಒಪ್ಪಿಕೊಂಡು, ನನ್ನೆದುರು ಕ್ಷಮಿಸುವಂತೆ ಕಣ್ಣೀರು ಕೂಡ ಹಾಕಿದ ಎಂದು ಹೇಳಿರುವ ಶಕ್ತಿ ಮೋಹನ ಇವೆಲ್ಲದರಿಂದ ನಾನು ಬೇಸತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಒಂಟಿಯಾಗಿಯೇ ಸದ್ಯ ಖುಷಿಯಾಗಿದ್ದೇನೆ ಎಂದಿದ್ದಾರೆ.


Click it and Unblock the Notifications











