For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್‌ಗೆ ಮುತ್ತು ಕೊಡಲು ಇಷ್ಟವಿಲ್ಲದೆ ಕಣ್ಣೀರು ಹಾಕಿದ್ದ ನಟಿ ಭಾಗ್ಯಶ್ರೀ

  |

  ಸಿನಿಮಾಗಳಲ್ಲಿ ಮುತ್ತುಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ಬಾಲಿವುಡ್‌ ಸಿನಿಮಾಗಳಲ್ಲಿಯಂತೂ ನಟ-ನಟಿಯರು ಮುತ್ತಿಡುವ ದೃಶ್ಯಗಳು ವಿಪರೀತ. ಆದರೆ ಕೆಲವು ನಟರು ಆನ್‌ಸ್ಕ್ರೀನ್‌ ಕಿಸ್ಸಿಂಗ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರು.

  ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಆನ್‌ ಸ್ಕ್ರೀನ್‌ನಲ್ಲಿ ಮುತ್ತಿನ ದೃಶ್ಯಗಳಲ್ಲಿ ನಟಿಸುವುದಿಲ್ಲ. ಸಲ್ಮಾನ್‌ರ ಈ ಹಿಂದಿನ ಸಿನಿಮಾ ರಾಧೆಯಲ್ಲಿ ವಿಶೇಷ ಹಾಡೊಂದರಲ್ಲಿ ನಟಿ ಜಾಕ್ವೆಲಿನ್‌ರ ತುಟಿಗೆ ತುಟಿ ಒತ್ತಿದ್ದಾರೆ. ಅದಕ್ಕೆ ಮುನ್ನ ಆನ್‌ಸ್ಕ್ರೀನ್‌ ಕಿಸ್ಸಿಂಗ್‌ನಿಂದ ಸಲ್ಮಾನ್ ದೂರವೇ ಇದ್ದರು. ಶಾರುಖ್ ಖಾನ್ ಸಹ 'ಜಬ್ ತಕ್ ಹೈ ಜಾನ್' ಸಿನಿಮಾದಲ್ಲಿ ಕತ್ರೀನಾ ಕೈಫ್‌ರೊಂದಿಗೆ ಆನ್‌ಸ್ಕ್ರೀನ್‌ ಕಿಸ್ಸಿಂಗ್‌ ದೃಶ್ಯದಲ್ಲಿ ನಟಿಸಿದ್ದರು. ಆ ನಂತರ ಅಂಥಹಾ ದೃಶ್ಯಗಳಿಂದ ದೂರ ಉಳಿದರು.

  ಈಗ ತೆರೆಯ ಮೇಲೆ ಮುತ್ತು ಕೊಡುವುದು ತೀರ ಸಾಮಾನ್ಯ ಎನಿಸಿಕೊಂಡು ಬಿಟ್ಟಿದೆ. ಆದರೆ ಮುಂಚೆ ಹೀಗಿರಲಿಲ್ಲ. ಮುತ್ತು ಕೊಡುವ, ತಬ್ಬಿಕೊಳ್ಳುವ ದೃಶ್ಯದಲ್ಲಿ ನಟಿಸ ಬೇಕೆಂದರೆ ನಟಿಯರು ತೀವ್ರ ಆತಂಕಕ್ಕೆ ಒಳಗಾಗುತ್ತಿದ್ದರು. ಇದೆ ಕಾರಣಕ್ಕೆ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಬಿಟ್ಟು ಹೊರಟು ಸಂಗತಿಗಳು ಸಹ ಇವೆ. ಸಲ್ಮಾನ್ ಖಾನ್‌ ಜೊತೆ ಮುತ್ತಿಡುವ ದೃಶ್ಯದಲ್ಲಿ ನಟಿಸಬೇಕಾಗಿ ಬಂದಾಗ ಕಣ್ಣೀರು ಹಾಕಿದ ಘಟನೆಯನ್ನು ನಟಿ ಭಾಗ್ಯಶ್ರೀ ನೆನಪು ಮಾಡಿಕೊಂಡಿದ್ದಾರೆ.

  ಸಲ್ಮಾನ್ ಖಾನ್ ಹೀರೋ ಆದ ಸಿನಿಮಾ 'ಮೈನೆ ಪ್ಯಾರ್ ಕಿಯಾ'

  ಸಲ್ಮಾನ್ ಖಾನ್ ಹೀರೋ ಆದ ಸಿನಿಮಾ 'ಮೈನೆ ಪ್ಯಾರ್ ಕಿಯಾ'

  ಸಲ್ಮಾನ್ ಖಾನ್‌ಗೆ ಬಾಲಿವುಡ್‌ನಲ್ಲಿ ಗುರುತು ತಂದುಕೊಟ್ಟ, ನೆಲೆ ಒದಗಿಸಿಕೊಟ್ಟ ಸಿನಿಮಾ 'ಮೈನೆ ಪ್ಯಾರ್ ಕಿಯಾ' ಈ ಸಿನಿಮಾದಲ್ಲಿ ಭಾಗ್ಯಶ್ರೀ ನಾಯಕಿ. ಸಿನಿಮಾದಲ್ಲಿ ಸಲ್ಮಾನ್ ಅನ್ನು ತಬ್ಬಿಕೊಳ್ಳುವ ದೃಶ್ಯವಿತ್ತಂತೆ. ಆದರೆ ಆ ದೃಶ್ಯದಲ್ಲಿ ನಟಿಸಲು ಭಾಗ್ಯಶ್ರೀಗೆ ಇಷ್ಟವಿಲ್ಲ. ದೃಶ್ಯದಲ್ಲಿ ನಟಿಸಲು ಇಷ್ಟವಿಲ್ಲದೆ ಕಣ್ಣೀರು ಹಾಕಿದ್ದರಂತೆ ಭಾಗ್ಯಶ್ರೀ.

  ನನಗಿನ್ನೂ ಆಗ ಹದಿನೆಂಟು ವರ್ಷ: ಭಾಗ್ಯಶ್ರೀ

  ನನಗಿನ್ನೂ ಆಗ ಹದಿನೆಂಟು ವರ್ಷ: ಭಾಗ್ಯಶ್ರೀ

  ''ನನಗಿನ್ನೂ ಆಗ ಹದಿನೆಂಟು ವರ್ಷ. ಆದರೆ ಆಗಲೇ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೆ. ಅವರೊಟ್ಟಿಗೆ ವಿವಾಹವಾಗಲು ನಿಶ್ಚಯಿಸಿದ್ದೆ. ಹಾಗಾಗಿ ಬೇರೆ ಪುರುಷರನ್ನು ತಬ್ಬಿಕೊಳ್ಳುವುದು ಮುತ್ತು ನೀಡುವುದು ನನಗೆ ಬಹಳ ಮುಜುಗರ ತರುತ್ತಿತ್ತು. ನಾನಂತೂ ಕಣ್ಣೀರು ಹಾಕಿಕೊಳ್ಳುತ್ತಿದ್ದೆ'' ಎಂದು ಭಾಗ್ಯಶ್ರೀ ರಿಯಾಲಿಟಿ ಶೋ ಒಂದಕ್ಕೆ ಅತಿಥಿಯಾಗಿ ಬಂದಾಗ ಹೇಳಿಕೊಂಡಿದ್ದಾರೆ.

  ಐಡಿಯಾ ಉಪಯೋಗಿಸಿದ ನಿರ್ದೇಶಕ

  ಐಡಿಯಾ ಉಪಯೋಗಿಸಿದ ನಿರ್ದೇಶಕ

  ಸಿನಿಮಾಕ್ಕಾಗಿ ಆ ದೃಶ್ಯಗಳಲ್ಲಿ ನಟಿಸಬೇಕಾಗಿ ಬಂದಾಗ, ಸಲ್ಮಾನ್ ಖಾನ್ ಸಹ ಬಂದು ನನ್ನನ್ನು ಸಮಾಧಾನ ಪಡಿಸಿ ದಯವಿಟ್ಟು ಈ ಸೀನ್‌ನಲ್ಲಿ ನಟಿಸಿ ಎಂದು ಕೇಳಿಕೊಳ್ಳುತ್ತಿದ್ದರು. ಮುತ್ತಿಡುವ ಸೀನ್‌ನಲ್ಲಿ ನಾನು ನಟಿಸುವುದೇ ಇಲ್ಲ ಎಂದು ಹಠ ಹಿಡಿದೆ ಆಗ ಸಿನಿಮಾದ ನಿರ್ದೇಶಕ ಸೂರಜ್ ಬರ್ಜಾತಿಯಾ ಐಡಿಯಾ ಮಾಡಿ, ಇಬ್ಬರ ತುಟಿಗಳ ಮಧ್ಯ ಗಾಜು ಇರಿಸಿ ನಾಯಕ-ನಾಯಕಿಗೆ ಮುತ್ತಿಡುವ ದೃಶ್ಯ ಚಿತ್ರೀಕರಣ ಮಾಡಿದರು'' ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ ಭಾಗ್ಯಶ್ರೀ.

  ಶಿವರಾಜ್ ಕುಮಾರ್ ಜೊತೆ ನಟನೆ

  ಶಿವರಾಜ್ ಕುಮಾರ್ ಜೊತೆ ನಟನೆ

  1989ರ 'ಮೈನೆ ಪ್ಯಾರ್ ಕಿಯಾ' ಸಿನಿಮಾದ ಮೂಲಕವೇ ನಟನೆ ಆರಂಭಿಸಿದ ಭಾಗ್ಯಶ್ರೀ ಬಾಲಿವುಡ್‌ನಲ್ಲಿ ಬಹಳದ ದೊಡ್ಡ ಹೆಸರು ಮಾಡಿದರು. 1997ರಲ್ಲಿ ಕನ್ನಡದ 'ಅಮ್ಮಾವ್ರ ಗಂಡ' ಸಿನಿಮಾದಲ್ಲಿ ನಾಯಕಿಯಾಗಿ ಭಾಗ್ಯಶ್ರೀ ನಟಿಸಿದರು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಾಯಕ. ಆ ನಂತರ 2019ರಲ್ಲಿ ಬಿಡುಗಡೆ ಆದ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ಭಾಗ್ಯಶ್ರೀ ನಟಿಸಿದರು. ಈ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕ. ಇದೀಗ ಕಂಗನಾ ಮುಖ್ಯ ಪಾತ್ರದಲ್ಲಿ ನಟಿಸಿರುವ ತಮಿಳುನಾಡಿ ಮಾಜಿ ಸಿಎಂ ಜಯಲಲಿತಾ ಕುರಿತ ಸಿನಿಮಾ 'ತಲೈವಿ'ಯಲ್ಲಿ ನಟಿಸಿದ್ದಾರೆ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ.

  English summary
  Actress Bhagyashree recalls being uncomfortable while doing kissing and hugging scene with Salman Khan in Maine Pyar Kiya movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X