ಸಲ್ಮಾನ್ ಖಾನ್ ಸಿನಿಮಾವನ್ನು ಏಳು ಬಾರಿ ನಿರಾಕರಿಸಿದ್ದರಂತೆ ಈ ನಟಿ

ನಟಿಯೊಬ್ಬರು ಸಲ್ಮಾನ್ ಖಾನ್ ಸಿನಿಮಾಗಳನ್ನು ನಿರಾಕರಿಸುವುದು ಈ ಸಮಯದಲ್ಲಿ ಊಹಿಸಿಕೊಳ್ಳುವುದು ಕಷ್ಟ. ಆದರೆ ತಮ್ಮ ಮೊದಲ ಸಿನಿಮಾ ಅವಕಾಶವೇ ಸಲ್ಮಾನ್ ಖಾನ್ ಜೊತೆಗೆ ನಟಿಸುವ ಅವಕಾಶ ದೊರೆತಿದ್ದರೂ ಏಳು ಬಾರಿ ಅವಕಾಶ ನಿರಾಕರಿಸಿದ್ದರು ಒಬ್ಬ ನಟಿ. ಅವರೇ ಭಾಗ್ಯಶ್ರೀ.

ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ಸುಂದರಿ ಭಾಗ್ಯಶ್ರೀ, ಸಿನಿಮಾರಂಗಕ್ಕೆ ಪ್ರವೇಶಿಸಿದ್ದೇ ಸಲ್ಮಾನ್ ಖಾನ್ ನಟನೆಯ ಸಿನಿಮಾ 'ಮೈನೆ ಪ್ಯಾರ್ ಕಿಯಾ' ಸಿನಿಮಾದ ಮೂಲಕ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು.

ಆದರೆ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಾಗ ಭಾಗ್ಯಶ್ರೀ ನಿರಾಕರಿಸಿದ್ದರಂತೆ. ಬರೋಬ್ಬರಿ ಏಳು ಬಾರಿ 'ನಾನು ನಟಿಸುವುದಿಲ್ಲ' ಎಂದಿದ್ದರಂತೆ ಭಾಗ್ಯಶ್ರಿ. ಆದರೆ ನಿರ್ದೇಶಕ ಸೂರಜ್ ಬರ್ಜಾತಿಯಾ ಪ್ರಯತ್ನ ಕೈಬಿಡದೆ ಭಾಗ್ಯಶ್ರಿಯನ್ನು ಸಿನಿಮಾಕ್ಕಾಗಿ ಒಪ್ಪಿಸಿಯೇ ಬಿಟ್ಟರು. ಆಮೇಲಿನದ್ದು ಇತಿಹಾಸ.

ಅವಕಾಶ ಬಂದಾಗ ಭಾಗ್ಯಶ್ರೀಗೆ 20 ವರ್ಷ ವಯಸ್ಸು

ಅವಕಾಶ ಬಂದಾಗ ಭಾಗ್ಯಶ್ರೀಗೆ 20 ವರ್ಷ ವಯಸ್ಸು

'ಮೈನೆ ಪ್ಯಾರ್ ಕಿಯಾ' (1989 ರಲ್ಲಿ ಬಿಡುಗಡೆ) ಸಿನಿಮಾದ ಅವಕಾಶ ಭಾಗ್ಯಶ್ರಿಗೆ ಬಂದಾಗ ಅವರಿಗಿನ್ನೂ 20 ವರ್ಷ ವಯಸ್ಸು. ಚೆನ್ನಾಗಿ ಓದುತ್ತಿದ್ದ ಭಾಗ್ಯಶ್ರಿ, ವಿದೇಶಕ್ಕೆ ಹೋಗಿ ಹೋಗುವ ಆಸೆಯಿಟ್ಟುಕೊಂಡಿದ್ದರಂತೆ, ಹಾಗಾಗಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರಂತೆ.

ಭಾಗ್ಯಶ್ರಿ ವಿದೇಶಕ್ಕೆ ಹೋಗುವುದು ತಂದೆಗೆ ಇಷ್ಟವಿರಲಿಲ್ಲ

ಭಾಗ್ಯಶ್ರಿ ವಿದೇಶಕ್ಕೆ ಹೋಗುವುದು ತಂದೆಗೆ ಇಷ್ಟವಿರಲಿಲ್ಲ

ಆದರೆ ಭಾಗ್ಯಶ್ರಿ ವಿದೇಶಕ್ಕೆ ಹೋಗುವುದು ಅವರ ತಂದೆಗೆ ಇಷ್ಟವಿರಲಿಲ್ಲ. ಮಗಳು ಭಾರತದಲ್ಲಿಯೇ ಓದಲಿ ಎಂಬುದು ಅವರ ಆಸೆ. ಕೊನೆಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಆಸೆ ಕೈಬಿಟ್ಟ ಭಾಗ್ಯಶ್ರಿ ಭಾರತದಲ್ಲಿಯೇ ಓದುವ ನಿರ್ಣಯ ಮಾಡಿದರು. ಭಾರತದಲ್ಲಿಯೇ ಇರುವುದು ಎಂದು ನಿಶ್ಚಯಿಸಿದ ನಂತರ ಇದೂ ಇರಲಿ ಎಂದು ಒಲ್ಲದ ಮನಸ್ಸಿನಿಂದಲೇ ಸಿನಿಮಾದಲ್ಲಿ ನಟಿಸಿದರಂತೆ.

ಏಳು ಬಾರಿ ಕತೆ ಹೇಳಿದ್ದ ಸೂರಜ್ ಬರ್ಜಾತಿಯಾ

ಏಳು ಬಾರಿ ಕತೆ ಹೇಳಿದ್ದ ಸೂರಜ್ ಬರ್ಜಾತಿಯಾ

ಸೂರಜ್ ಬರ್ಜಾತಿಯಾ ಸಿನಿಮಾದ ಕತೆ ಹೇಳಿದಾಗ ಭಾಗ್ಯಶ್ರಿಗೆ ಬಹಳ ಇಷ್ಟವಾಯಿತಂತೆ ಆದರೆ ತಾನು ನಟಿಸುವುದಿಲ್ಲ ಎಂದರಂತೆ. ಏಳು ಬಾರಿ ಸೂರಜ್ ಬರ್ಜಾತಿಯಾ ಒಪ್ಪಿಸಲು ಪ್ರಯತ್ನಪಟ್ಟರಂತೆ, ಪ್ರತಿಬಾರಿಯೂ ಕತೆಯಲ್ಲಿ ಭಿನ್ನತೆ ತರುತ್ತಿದ್ದರಂತೆ. ಕೊನೆಗೆ ಎಂಟನೇ ಬಾರಿ ನಟಿಸಲು ಒಪ್ಪಿಕೊಂಡರು ಭಾಗ್ಯಶ್ರೀ.

ಕನ್ನಡದ ಮೂರು ಸಿನಿಮಾದಲ್ಲಿ ನಟನೆ

ಕನ್ನಡದ ಮೂರು ಸಿನಿಮಾದಲ್ಲಿ ನಟನೆ

ಮೈನೆ ಪ್ಯಾರ್‌ ಕಿಯಾ ಬಿಡುಗಡೆ ಆದ ಬಳಿಕವೂ ಮೂರು ವರ್ಷ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ ಭಾಗ್ಯಶ್ರೀ. ವಿದ್ಯಾಭ್ಯಾಸ ಮುಗಿಸಿ ನಟನೆಗೆ ಮೂರ್ಣಪ್ರಮಾಣವಾಗಿ ಇಳಿದರು. ಕನ್ನಡದಲ್ಲಿ 'ಅಮ್ಮಾವ್ರ ಗಂಡ', 'ಗಂಡುಗಲಿ ಕುಮಾರರಾಮ', 'ಸೀತಾರಾಮ ಕಲ್ಯಾಣ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಪ್ರಭಾಸ್ ರ 'ರಾಧೆ-ಶ್ಯಾಂ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Actress Bhagyashree told she rejected Salman Khan movie Maine Pyar Kiya 7 times.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X