ಭಾರತ್ ಕಲೆಕ್ಷನ್ ನೋಡಿ ಸಲ್ಮಾನ್ 'ಪೇಪರ್ ಹುಲಿ' ಎಂದ ಗಾಯಕಿ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಜೂನ್ 5 ರಂದು ಬಿಡುಗಡೆಯಾಗಿತ್ತು. ಮೂರನೇ ವಾರ ಪ್ರದರ್ಶನ ಕಾಣುತ್ತಿರುವ ಭಾರತ್ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಯ ಗಳಿಕೆ ಕಂಡಿಲ್ಲ ಎನ್ನುವುದು ಬೇಸರದ ಸಂಗತಿ.
ಮೊದಲ ವಾರ ಉತ್ತಮ ಬಿಸಿನೆಸ್ ಮಾಡಿದ ಭಾರತ್ ಎರಡನೇ ವಾರ ಹಾಗೂ ಮೂರನೇ ವಾರ ಗಳಿಕೆಯಲ್ಲಿ ಸಾಧಾರಣ ಯಶಸ್ಸು ಕಂಡಿದೆ. ನೂರು ಕೋಟಿ ಗಳಿಸಿ ದಾಖಲೆ ಬರೆದಿದ್ದ ಸಲ್ಲು ಚಿತ್ರ 200 ಕೋಟಿ ಕ್ಲಬ್ ಗೆ ಸೇರುವ ಹಾದಿಯಲ್ಲಿ ನಿಧಾನವಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಭಾರತ್ ಸಿನಿಮಾ ಮೂರನೇ ವಾರದಲ್ಲಿ 188 ಕೋಟಿ ಗಳಿಕೆ ಕಂಡಿದೆ. ಇದು ಸಹಜವಾಗಿ ಸಲ್ಲು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಭಾರತ್ ಸಿನಿಮಾದ ಈ ಕಳಪೆ ಪ್ರದರ್ಶನದ ಬಗ್ಗೆ ಗಾಯಕಿ ಸೋನಾ ಮಹಾಪಾತ್ರ ಸಲ್ಲು ಕಾಲೆಳೆದಿದ್ದಾರೆ. ''ಭಾರತ್ ಸಿನಿಮಾಗೆ ಭಾರಿ ಹೈಪ್ ಕ್ರಿಯೇಟ್ ಮಾಡಿ, ಇಷ್ಟೊಂದು ಪ್ರಚಾರ ಮಾಡಿದರೂ ಕಲೆಕ್ಷನ್ ನಲ್ಲಿ ಒಂದು ವಾರವು ಸ್ಥಿರವಾಗಿರಲಿಲ್ಲ. ಇದಕ್ಕೆ ಏನು ಹೇಳಬೇಕು'' ಎಂದು ಪ್ರಶ್ನಿಸಿ 'ಪೇಪರ್ ಟೈಗರ್' ತಾವೇ ಉತ್ತರಿಸಿದ್ದಾರೆ.
ಇಂತವರನ್ನ ಆರಾಧಿಸುವುದನ್ನ ಭಾರತದಲ್ಲಿ ಕೈಬಿಡಬೇಕೆಂದು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಇದಕ್ಕೂ ಮುಂಚೆ ಭಾರತ್ ಚಿತ್ರದಿಂದ ಪ್ರಿಯಾಂಕಾ ಚೋಪ್ರಾ ಹೊರಹೋಗಿದ್ದಾಗ ಪಿಗ್ಗಿಯನ್ನ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದರು.
ಆ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳು ಸೋನಾ ವಿರುದ್ಧ ಕಿಡಿಕಾರಿದ್ದರು. ಜೀವ ಬೆದರಿಕೆ ಬರ್ತಿದೆ ಎಂದು ಸೋನಾ ಆರೋಪಿಸಿದ್ದರು. ಇದೀಗ, ಭಾರತ್ ಕಲೆಕ್ಷನ್ ಬಗ್ಗೆ ಕಾಮೆಂಟ್ ಮಾಡಿ ಮತ್ತೆ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಂದ್ಹಾಗೆ, ಭಾರತ್ ಸಿನಿಮಾ ಸುಮಾರು 4500 ಸ್ಕ್ರೀನ್ ಹಾಗೂ ವಿದೇಶದಲ್ಲಿ 1300 ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಸಲ್ಮಾನ್ ಖಾನ್ ಜೊತೆ ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದರು.


Click it and Unblock the Notifications











