For Quick Alerts
  ALLOW NOTIFICATIONS  
  For Daily Alerts

  ಇಬ್ಬರ ಜೊತೆ ಮಗಳು ಅನನ್ಯ ಡೇಟಿಂಗ್ ಬಗ್ಗೆ ತಾಯಿ ಭಾವನಾ ಮಾತು; ಇಬ್ಬರೂ ಸರಿಯಾಗಿದ್ದಾರೆ ಎಂದ ಜನ!

  |

  ಬಾಲಿವುಡ್‌ನ ಖ್ಯಾತ ಹಾಗೂ ಸಾಕಷ್ಟು ವಿವಾದಗಳನ್ನು ಎಬ್ಬಿಸುವ ವೇದಿಕೆ ಎಂದೇ ಹೆಸರು ಮಾಡಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸಿ ಹಲವಾರು ಸೆಲೆಬ್ರಿಟಿಗಳು ತಮ್ಮ ಸುತ್ತ ಹರಿದಾಡುತ್ತಿದ್ದ ಗಾಸಿಪ್ ಕುರಿತು ತುಟಿಬಿಚ್ಚಿದ್ದಾರೆ. ವಿವಾದ ಎಬ್ಬಿಸಲೇ ಬೇಕೆಂದು ಕರಣ್ ಜೋಹರ್ ಕೇಳುವ ಪ್ರಶ್ನೆಗಳಿಗೆ ಕೆಲ ಸೆಲೆಬ್ರಿಟಿಗಳು ಜಾಣ್ಮೆಯಿಂದ ಉತ್ತರಗಳನ್ನು ನೀಡಿ ಜಾರಿಕೊಂಡರೆ ಇನ್ನೂ ಕೆಲ ಸೆಲೆಬ್ರಿಟಿಗಳು ಇರುವ ವಿವಾದವನ್ನು ತೊಲಗಿಸುವ ಭರದಲ್ಲಿ ಏನೇನೋ ಹೇಳಿಕೆ ನೀಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡುಬಿಟ್ಟಿದ್ದಾರೆ.

  ಇನ್ನೂ ಕೆಲವರಂತೂ ಎಲ್ಲಾ ತಿಳಿದಿದ್ದೇ ವಿವಾದಗಳಿಗೆ ಕೇರ್ ಮಾಡದೇ ತಮ್ಮ ಮೂಗಿನ ನೇರಕ್ಕೆ ಉತ್ತರ ನೀಡಿಬಿಡ್ತಾರೆ. ಈ ಮೂಲಕ ತಮ್ಮ ಜೀವನದ ಬಗ್ಗೆ ಇರುವ ಅಂತೆ ಕಂತೆಗಳೆಲ್ಲಾ ನಿಜ ಎಂಬುದನ್ನು ಒಪ್ಪಿಕೊಂಡ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಹೇಳಿಕೆಯನ್ನು ಅನನ್ಯ ಪಾಂಡೆ ಅವರ ತಾಯಿ ಭಾವನಾ ಪಾಂಡೆ ನೀಡಿ ಕೂಡ ನೀಡಿ ಇರುವ ವಿವಾದ ಮತ್ತಷ್ಟು ದೊಡ್ಡದಾಗುವಂತೆ ಮಾಡಿದ್ದಾರೆ.

  ಹೌದು, ಅನನ್ಯ ಪಾಂಡೆ ಇಬ್ಬರು ಹೀರೊಗಳ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಕಾಂಟ್ರವರ್ಸಿ ಇತ್ತು. ಅದರ ಕುರಿತಾಗಿ ಇದೀಗ ಭಾವನಾ ಪಾಂಡೆ ಮನಬಿಚ್ಚಿ ಮಾತನಾಡಿದ್ದು, ಆಕೆ ಕೊಟ್ಟ ಉತ್ತರ ಕಂಡು ವೀಕ್ಷಕರೇ ಆಶ್ಚರ್ಯಕ್ಕೊಳಗಾಗಿದ್ದಾರೆ.

  ಯಾರ ಜೊತೆ ನಿಮ್ಮ ಮಗಳು ತೆರೆ ಮೇಲೆ ಚೆನ್ನಾಗಿ ಕಾಣ್ತಾರೆ?

  ಯಾರ ಜೊತೆ ನಿಮ್ಮ ಮಗಳು ತೆರೆ ಮೇಲೆ ಚೆನ್ನಾಗಿ ಕಾಣ್ತಾರೆ?

  ಕಾಫಿ ವಿತ್ ಕರಣ್ ಕಾರ್ಯಕ್ರಮದ ರಾಪಿಡ್ ಫೈರ್ ಸುತ್ತಿನಲ್ಲಿ ಅನನ್ಯಗೆ ಯಾವ ನಟ ತೆರೆ ಮೇಲೆ ಸರಿಯಾದ ಜೋಡಿ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಭಾವನಾ ಪಾಂಡೆ ಕಾರ್ತಿಕ್ ಆರ್ಯನ್ ಎಂಬ ಉತ್ತರವನ್ನು ನೀಡಿದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಕರಣ್ ಜೋಹರ್ ಹಾಗಾದ್ರೆ ಯಾಕೆ ನಿಮ್ಮ ಮಗಳು ಹಾಗೂ ಕಾರ್ತಿಕ್ ಆರ್ಯನ್ ಬ್ರೇಕ್ ಅಪ್ ಮಾಡಿಕೊಂಡ್ರು ಎಂದು ಪ್ರಶ್ನೆಯನ್ನು ಹಾಕಿದರು. ಇದಕ್ಕೆ ಉತ್ತರಿಸಿದ ಭಾವನಾ ಹಾಗೆ ಹೇಳ್ಬೇಡಿ ನಿಮಗೆ ಗೊತ್ತಿಲ್ಲ ಎಂಬ ಉತ್ತರ ನೀಡಿ ಜಾರಿಕೊಂಡರು.

  ಇಬ್ಬರ ಜೊತೆ ಡೇಟಿಂಗ್

  ಇಬ್ಬರ ಜೊತೆ ಡೇಟಿಂಗ್

  ಇನ್ನು ಇದೇ ರಾಪಿಡ್ ಫೈರ್ ಸುತ್ತನಲ್ಲಿ ಗೌರಿ ಖಾನ್ ಕೂಡ ಭಾಗವಹಿಸಿದ್ದರು ಹಾಗೂ ನಿಮ್ಮ ಮಗಳು ಸುಹಾನಾಗೆ ಏನು ಸಲಹೆ ನೀಡಲು ಬಯಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದರು. ಏಕಕಾಲಕ್ಕೆ ಇಬ್ಬರು ಹುಡುಗರನ್ನು ಡೇಟ್ ಮಾಡಬೇಡ ಎಂಬ ಸಲಹೆಯನ್ನು ಗೌರಿ ಖಾನ್ ತಮ್ಮ ಮಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕರಣ್ ಜೋಹರ್ ಈ ಕೆಲಸವನ್ನು ಅನನ್ಯ ಈಗಾಗಲೇ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದರು. ಇದಕ್ಕೆ ಮುಕ್ತಕಂಠದಿಂದ ಉತ್ತರಿಸಿದ ಭಾವನಾ ಪಾಂಡೆ ಹೌದು, ಅವಳು ಎರಡು ಸಂಬಂಧದ ಬಗ್ಗೆ ಚಿಂತಿಸಿ ಒಂದನ್ನು ಮುರಿದುಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಮಗಳು ಇಬ್ಬರ ಜತೆ ಏಕಕಾಲಕ್ಕೆ ಡೇಟಿಂಗ್ ಮಾಡಿದ್ದರ ಕುರಿತು ಭಾವನಾ ಪಾಂಡೆ ತುಟಿ ಬಿಚ್ಚಿದ್ದಾರೆ.

  ಇಶಾನ್ ಕಟ್ಟರ್ ಜತೆ ಬ್ರೇಕಪ್

  ಇಶಾನ್ ಕಟ್ಟರ್ ಜತೆ ಬ್ರೇಕಪ್

  ಇನ್ನು ಈ ಹಿಂದೆ ಇದೇ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನನ್ಯ ಪಾಂಡೆ ಇಶಾನ್ ಕಟ್ಟರ್ ಜತೆ ಬ್ರೇಕಪ್ ಮಾಡಿಕೊಂಡು ಸಿಂಗಲ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದರು ಹಾಗೂ ವಿಜಯ್ ದೇವರಕೊಂಡ ಜತೆ ಫ್ರೆಂಡ್ಲಿ ಡೇಟ್ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಭಾವನಾ ಪಾಂಡೆ ಹೇಳಿಕೆಯನ್ನು ಗಮನಿಸಿದರೆ ವಿಜಯ್ ದೇವರಕೊಂಡಗಾಗಿ ಅನನ್ಯ ಪಾಂಡೆ ಇಶನ್ ಕಟ್ಟರ್ ಜತೆ ಬ್ರೇಕಪ್ ಮಾಡಿಕೊಂಡ್ರಾ ಎಂಬ ಅನುಮಾನ ಮೂಡದೇ ಇರದು

  English summary
  Bhavna Panday hints that Ananya Panday was dating two men at a time. Read on
  Friday, September 23, 2022, 12:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X