ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಖಾಸಗಿ ವಿಡಿಯೋ ಲೀಕ್: ಡೋಂಟ್ ಕೇರ್ ಎಂದ ನಟಿ
ನಟಿಯರ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳ ಖಾಸಗಿ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವೆ. ಕೆಲವರು ವಿಡಿಯೋ ತಮ್ಮದಲ್ಲ ಫೇಕ್ ಎನ್ನುತ್ತಾರೆ. ಕೆಲವರು ಖಿನ್ನತೆಗೆ ಜಾರುತ್ತಾರೆ. ಕೆಲವರು ಈ ಬಗ್ಗೆ ದೂರು ನೀಡುತ್ತಾರೆ, ಕೆಲವರ ಬಂಧನವೂ ಆಗುತ್ತದೆ ಆದರೆ ಈ ಎಂಎಂಎಸ್ ಹಗರಣಗಳು ಮಾತ್ರ ನಿಲ್ಲುತ್ತಿಲ್ಲ.
ಇದೀಗ ನಟಿಯೊಬ್ಬರ ಖಾಸಗಿ ವಿಡಿಯೋ ಲೀಕ್ ಆಗಿದೆ. ಆದರೆ ನಟಿಯು, ಎಂಎಂಎಸ್ ಬಗ್ಗೆ ಯಾವುದೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ ಬದಲಿಗೆ ಇಂಥಹದ್ದುಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ ಎಂದಿದ್ದಾರೆ.
ಹಿಂದಿ ಬಿಗ್‌ಬಾಸ್ ಒಟಿಟಿಯಲ್ಲಿ ಸ್ಪರ್ಧೆ ಮಾಡಿದ್ದ ಭೋಜ್ಪುರಿ ಸಿನಿಮಾಗಳ ನಟಿ ಅಕ್ಷರಾ ಸಿಂಗ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದಲೂ ಹರಿದಾಡುತ್ತಿದೆ. ಅದರ ಜೊತೆಗೆ ಇದೇ ನಟಿಯದ್ದು ಎನ್ನಲಾಗಿರುವ ಮತ್ತೊಂದು ವಿಡಿಯೋ ಸಹ ತೀರ ಇತ್ತೀಚೆಗೆ ವೈರಲ್ ಆಗಿದೆ.

ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟಿ ಅಕ್ಷರಾ ಸಿಂಗ್, ''ಈ ರೀತಿಯ ಸಣ್ಣತನದ ಕೃತ್ಯಗಳ ಬಗ್ಗೆ ಕೇರ್ ಮಾಡುವುದಿಲ್ಲ, ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ'' ಎಂದಿದ್ದಾರೆ.
''ಯಾರಾದರೂ ಆ ಕೃತ್ಯ ಮಾಡಿರಲಿ ಅವರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಎಂಎಂಎಸ್ ವಿಡಿಯೋವನ್ನು ನಾನೇ ಈ ವರೆಗೆ ನೋಡಲು ಹೋಗಿಲ್ಲ. ನನಗೆ ಅದು ನೋಡುವ, ಪ್ರತಿಕ್ರಿಯಿಸುವ ವಿಷಯ ಎನಿಸಿಲ್ಲ. ಆ ವಿಡಿಯೋದಲ್ಲಿ ಇರುವುದು ನಾನೇನಾ ಅಥವಾ ಬೇರೆಯವರ ಎಂಬ ಕುತೂಹಲವೂ ನನಗೆ ಇಲ್ಲ. ಇಂಥಹಾ ಸಣ್ಣತನದ ವಿಷಯಗಳಿಗೆಲ್ಲ ನಾನು ಕೇರ್ ಮಾಡುವುದಿಲ್ಲ'' ಎಂದಿದ್ದಾರೆ.
ಇದೇ ಸಮಯದಲ್ಲಿ ಆಕೆಯದ್ದೇ ಹಳೆಯ ವಿಡಿಯೋ ಒಂದು ಯೂಟ್ಯೂಬ್ ನಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ನಟಿ ಅಕ್ಷರಾ ಸಿಂಗ್ ಅಳುತ್ತಾ ತನಗೆ ಮೋಸ ಮಾಡಿದ್ದಾರೆಂದು ಗೋಗರೆಯುತ್ತಿದ್ದಾರೆ. ಭೋಜ್ಪುರಿ ಸಿನಿಮಾ ರಂಗದವರನ್ನು ಬೈಯ್ಯುತ್ತಿದ್ದಾರೆ. ಆದರೆ ಇದು ಎರಡು ವರ್ಷಗಳ ಹಿಂದಿನ ವಿಡಿಯೋ ಆಗಿದೆ.
ಇದೆಲ್ಲದರ ನಡುವೆ ಅಕ್ಷರಾ ಸಿಂಗ್ ಹಾಗೂ ಅವರ ಸಹ ನಟ ಪವನ್ ಸಿಂಗ್ ನಟಿಸಿರುವ ರೊಮ್ಯಾಂಟಿಕ್ ಹಾಡಿನ ವಿಡಿಯೋ ಬಹಳ ವೈರಲ್ ಆಗಿದೆ. ಈ ಇಬ್ಬರು ಭೋಜ್ಪುರಿ ಸಿನಿಮಾ ರಂಗದ ಜನಪ್ರಿಯ ಜೋಡಿಯಾಗಿದ್ದು, ಈ ಹಿಂದೆಯೂ ಇವರ ಹಾಡಿನ ವಿಡಿಯೋಗಳು ವೈರಲ್ ಆಗಿದ್ದವು. ಇತ್ತೀಚೆಗೆ ಸಖತ್ ಹಾಟ್ ಹಾಡೊಂದರಲ್ಲಿ ಈ ಜೋಡಿ ನಟಿಸಿತ್ತು.


Click it and Unblock the Notifications











