ಮದುವೆಯಾಗಿ ಖ್ಯಾತ ನಟಿಗೆ ಕೈ ಕೊಟ್ಟ ನಟ, ಹೊರ ಬಿತ್ತು ಇಬ್ಬರ ಮಂಚದ ವಿಡಿಯೋ ; ಚಿತ್ರರಂಗದಲ್ಲಿ ಭಾರೀ ಕಂಪನ

''ಪ್ರೀತಿ'' ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚಕೊಡಿ ಮನಸಿನ ಇವತ್ತಿನ ಅನೇಕ ಯುವಕ ಮತ್ತು ಯುವತಿಯರಿಗಂತೂ ಲವ್ ಅನ್ನೋದು ಶೋಕಿ. ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ. ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ...

ಅಂತೆಲ್ಲ ಬಟ್ಟೆ ಬದಲಿಸಿದಂತೆ ಪ್ರೇಮ ಸಂಬಂಧಗಳನ್ನು ಇಲ್ಲಿ ಅನೇಕರು ಬದಲಿಸುತ್ತಾ ಹೋಗ್ತಾರೆ. ನೀನೆ ನನ್ನ ಉಸಿರು ಎಂದು ಹೇಳುತ್ತಲೇ ಮದುವೆಯಾಗಿ ಆ ನಂತರ ಕೈ ಕೊಡುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ, ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಂಡವರಲ್ಲಿ ಬಹುತೇಕರ ಕಥೆ ಹೀಗೆ ನಂಬಿಕೆ ದ್ರೋಹ..ಮೋಸದಿಂದನೇ ಕೂಡಿದೆ. ಉದಾಹರಣೆಗೆ ''ಮಣಿ ಮೆರಾಜ್'' ಮತ್ತು ''ವನ್ನು ದಿ ಗ್ರೇಟ್''.

Bhojpuri Actress Vannu the Great Drops Bombshell Accuses Mani Meraj of Forced Video and Betrayal

ಹೌದು. ''ಮಣಿ ಮೆರಾಜ್'' ಮತ್ತು ''ವನ್ನು ದಿ ಗ್ರೇಟ್''.. ಬಿಹಾರ್‌ನ ಎರಡು ಪ್ರಖ್ಯಾತ ಹೆಸರು. ಭೋಜ್‌ಪುರಿ ಚಿತ್ರರಂಗದಲ್ಲಿ ಇವರಿಬ್ಬರಿಗೆ ಅವರದ್ದೇ ಆದ ಬ್ರ್ಯಾಂಡ್ ವ್ಯಾಲ್ಯೂ ಇದೆ. ಡಿಮ್ಯಾಂಡ್ ಇದೆ.

''ಯೂಟ್ಯೂಬ್'' ಮೂಲಕ ಮುನ್ನೆಲೆಗೆ ಬಂದು ಹಂತ ಹಂತವಾಗಿ ಬದುಕು ರೂಪಿಸಿಕೊಂಡ ''ಮಣಿ ಮೆರಾಜ್'' ಭೋಜ್‌ಪುರಿಯ ''ವೆಲ್‌ಕಮ್'' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲ ''ಅಪ್ನೇ ಲಬರ್ ಕೋ ದೋಖಾ ದೋ'' ಸೇರಿ ಹಲವು ಆಲ್ಬಂ ಹಾಡುಗಳಲ್ಲಿ ಕೂಡ ಕಾಣಿಸಿಕೊಂಡಿದ್ಧಾರೆ. ಇನ್ನೂ ''ಜೀ ನ್ಯೂಸ್'' 10.2 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ಮಣಿ ಮೆರಾಜ್ ಅವರನ್ನು ಬಿಹಾರದ ಅತಿ ದೊಡ್ಡ ಯೂಟ್ಯೂಬರ್ ಎಂದು ಬಣ್ಣಿಸಿದೆ.

ಮತ್ತೊಂದು ಕಡೆ ''ವನ್ನು ದಿ ಗ್ರೇಟ್'' ಅವರ ಕೈ ಹಿಡಿದಿದ್ದು ಕೂಡ ಇದೇ ಸೋಶಿಯಲ್ ಮೀಡಿಯಾ. ಪಂಜಾಬ್‌ನವರಾದರು ಕೂಡ ''ರೀಲ್ಸ್'' ಮೂಲಕ ಬಿಹಾರದೆಲ್ಲೆಡೆ ಮನೆ ಮಾತಾದ ''ವನ್ನು ದಿ ಗ್ರೇಟ್'' ಹಲವಾರು ಹಾಡುಗಳಲ್ಲಿ ಮಾದಕವಾಗಿ ಕುಣಿದಿದ್ದಾರೆ. ಬಿಹಾರದ ಪಡ್ಡೆ ಹೈಕ್ಳನ್ನು ಹುಚ್ಚಿಡಿಸುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಖ್ಯಾತ ನಟಿ ಎಂದು ಹೆಸರು ಮಾಡಿದ್ದಾರೆ.

ಇಂಥಾ ''ವನ್ನು ದಿ ಗ್ರೇಟ್'' ಕಳೆದ ಕೆಲ ದಿನಗಳಿಂದ ''ಮಣಿ ಮೆರಾಜ್'' ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿದ್ದಾರೆ. ಪ್ರೀತಿಸಿ-ಮೋಹಿಸಿ ಕದ್ದು ಮುಚ್ಚಿ ನನ್ನನ್ನೂ ಮದುವೆ ಕೂಡ ಮಾಡಿಕೊಂಡು ಈಗ ''ಮಣಿ ಮೆರಾಜ್'' ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಎರಡೂವರೆ ವರ್ಷ ದೈಹಿಕವಾಗಿ ನನ್ನನ್ನೂ ಉಪಯೋಗಿಸಿಕೊಂಡು ಈಗ ನಮ್ಮ ಧರ್ಮ ಬೇರೆ ಬೇರೆಯಾದ ಕಾರಣ ಮುಂದುವರೆಯಲು ಸಾಧ್ಯ ಇಲ್ಲ ಎಂದು ಹೇಳುತ್ತಿದ್ದಾನೆ ಎಂದು ಹೇಳಿದ್ಧಾರೆ. ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪವನ್ನು
ಕೂಡ ಮಾಡಿದ್ದಾರೆ.

Bhojpuri Actress Vannu the Great Drops Bombshell Accuses Mani Meraj of Forced Video and Betrayal

ಇಷ್ಟೇ ಅಲ್ಲ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ''ವನ್ನು ದಿ ಗ್ರೇಟ್'' ಸದ್ಯ ತಮ್ಮದೇ ಖಾಸಗಿ ವಿಡಿಯೋವನ್ನು ತಾವೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.

ಈ ಕುರಿತು ವಿಡಿಯೋ ಹಂಚಿಕೊಂಡು ಬರೆದುಕೊಂಡಿರುವ ''ವನ್ನು ದಿ ಗ್ರೇಟ್'' ಈ ವಿಡಿಯೋವನ್ನು ಹಂಚಿಕೊಳ್ಳುವಂತೆ ''ಮಣಿ''ನೇ ನನ್ನ ಒತ್ತಾಯ ಮಾಡಿದ, ಇದು ನಮ್ಮ ಮೊದಲ ವಾರ್ಷಿಕೋತ್ಸವದ ವಿಡಿಯೋ ಎಂದು ಹೇಳಿದ್ದಾರೆ. 14/7/2024ರಂದು ಓಡಿ ಹೋದ ''ಮಣಿ ಮೆರಾಜ್'' ನಿನ್ನ ಬಂಡವಾಳವನ್ನು ನಾನು ಎಲ್ಲರೆದುರು ಬಯಲು ಮಾಡ್ತೀನಿ ಎಂದು ಹೇಳಿರುವ ''ವನ್ನು ದಿ ಗ್ರೇಟ್'' ಜನ ನಿನ್ನ ಇನ್ನೂ ನಂಬಲು ಅವರನ್ನೇನು ಹುಚ್ಚರೆಂದು ಅಂದುಕೊಂಡಿದ್ದೀಯಾ. ನಿನ್ನ ರಾಸ ಲೀಲೆಯನ್ನು ಇನ್ಮುಂದೆ ಎಲ್ಲರು ನೋಡುತ್ತಾರೆ. ಈ ವಿಡಿಯೋ ಕೂಡ ಸುಳ್ಳು ಎಂದು ಹೇಳುತ್ತೀಯಾ ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಭೋಜ್‌ಪುರಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.

More from Filmibeat

English summary
A private video featuring Bhojpuri stars Vannu The Great and Mani Meraj has been leaked online, causing a massive controversy. Vannu the Great alleges, "He forced me," revealing explosive details about their relationship.
Read more about: viral video love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X