ವೇದಿಕೆಯಲ್ಲಿ ಇದ್ದಾಗಲೇ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟು: ವಿಡಿಯೋ ಫುಲ್ ವೈರಲ್

ಲೈವ್ ಶೋ ವೇಳೆ ಖ್ಯಾತ ಜನಪದ ಗಾಯಕಿ ನಿಶಾ ಉಪಾಧ್ಯಾಯ ಮೇಲೆ ಗುಂಡಿನ ದಾಳಿ ನಡೆದಿರುವ ವರದಿಯಾಗಿದೆ. ಬಿಹಾರದ ಪಾಟ್ನ ಬಳಿ ಖಾಸಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿಶಾ ವೇದಿಕೆ ಏರಿ ಹಾಡು ಹಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಂದೂಕಿನ ಸದ್ದು ಕೇಳಿದೆ. ಏನಾಯ್ತು ಎಂದು ನೋಡುವಷ್ಟರಲ್ಲಿ ಆಕೆಯ ಎಡಗಾಲಿನ ತೊಡೆಗೆ ಗುಂಡು ತಗುಲಿದೆ.

ಕಾರ್ಯಕ್ರಮ ನಡುವೆ, ಸ್ಥಳೀಯ ಜನರು ಸಂಭ್ರಮದಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಈ ವೇಳೆ ಭೋಜ್‌ಪುರಿ ಗಾಯಕಿ ನಿಶಾ ಕಾಲಿಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಒಳಗಾದ ಗಾಯಕಿಯನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಆಕೆ ಈಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆಯೇ ಮಾಧ್ಯಮಗಳ ಜೊತೆ ಘಟನೆ ಬಗ್ಗೆ ಮಾತನಾಡಿದ್ದಾರೆ. ಗುಂಡೇಟಿನಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದ್ದು ಸದ್ಯ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Bhojpuri folk Singer Nisha Upadhyay Suffers Bullet Injury During live Show

ಗುಂಡಿನ ದಾಳಿಗೆ ಕೆಲ ನಿಮಿಷಗಳ ಮೊದಲು ನಿಶಾ ಕಾರ್ಯಕ್ರಮದಲ್ಲಿ ಡ್ರಮ್ ಬಾರಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸರು "ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಆದರೆ ಇನ್ನೂ ಲಿಖಿತ ದೂರು ದಾಖಲಾಗಿಲ್ಲ. ಗುಂಡಿನ ದಾಳಿ ಹೇಗೆ ನಡೆದಿದೆ ಮತ್ತು ಗುಂಡಿನ ದಾಳಿಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿಶಾ ಉಪಾಧ್ಯಾಯ ಬಿಹಾರದ ಖ್ಯಾತ ಗಾಯಕಿ. ಸರನ್ ಜಿಲ್ಲೆಯ ಗೌರ್ ಬಸಂತ್ ಗ್ರಾಮದವರು. ಸದ್ಯ ಪಾಟ್ನಾದಲ್ಲಿ ವಾಸಿಸುತ್ತಿದ್ದಾರೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. 'ಲೇ ಲೇ ಆಯೆ ಕೋಕಾ ಕೋಲಾ', 'ನವಕರ್ ಮಂತ್ರ', 'ಧೋಲಿದಾ ಧೋಲ್ ರೇ ವಾಗಡ್' ಮತ್ತು 'ಹಸಿ ಹಸಿ ಜಾನ್ ಮರೇಲಾ' ಆಕೆಯ ಕೆಲ ಜನಪ್ರಿಯ ಗೀತೆಗಳು.

More from Filmibeat

English summary
Bhojpuri folk Singer Nisha Upadhyay Suffers Bullet Injury During live Show. now Her condition is said to be stable. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X