ಚಂದ್ರಮುಖಿ ಪ್ರಾಣಸಖಿ ಭಾವನಾ ಅವರಂತೆ ಮದುವೆಯಾಗದೇ ಮಗುಗೆ ಜನ್ಮ ನೀಡಿದ ಖ್ಯಾತ ಗಾಯಕಿ

ತಾಯ್ತನ ಎಂಬುದು ಹೆಣ್ಣಿನ ಜೀವನದ ಒಂದು ವರ. ಮದುವೆಯಾದ ನಂತರ ವರ್ಷದಲ್ಲಿ ಸಿಹಿ ಸುದ್ದಿ ಕೊಡದೇ ಇದ್ದರೆ ಮನೆಯಲ್ಲಿ ಇರೋ ಬರೋ ಸಂಬಂಧಿಕರೆಲ್ಲಾ ಅಯ್ಯೋ ಏನೂ ಸುದ್ದಿನೇ ಇಲ್ವಾ ಎಂದು ಪ್ರಶ್ನೆಯನ್ನು ಕೇಳಲು ಶುರು ಮಾಡುತ್ತಾರೆ. ಕುಂತಲ್ಲಿ.. ನಿಂತಲ್ಲಿ.. ಹೋದಲ್ಲಿ.. ಬಂದಲ್ಲಿ.. ಹಿಂಸೆ ಕೊಡುತ್ತಾರೆ. ಇನ್ನೂ.. ದಂಪತಿ ಜೀವನದಲ್ಲಿ ಮಗುವಿನ ಆಗಮನವಾಗುತ್ತದೆ ಎಂದಾದರೆ ಆ ದಂಪತಿಗೆ ವರ್ಣಿಸಲಾಗದಷ್ಟು ಖುಷಿ, ಸಂಭ್ರಮವಾಗುತ್ತದೆ.

ಆದರೆ ಈಗ ಬದಲಾದ ಕಾಲದಲ್ಲಿ ಮದುವೆಯಾಗದೇ ಕೃತಕ ಗರ್ಭಧಾರಣೆಯ ಮೂಲಕ ಮಕ್ಕಳನ್ನು ಪಡೆಯುವರ ಪ್ರಮಾಣ ಹೆಚ್ಚಾಗುತ್ತಿದೆ. ಕೇವಲ ಜನಸಾಮಾನ್ಯರಷ್ಟೇ ಅಲ್ಲ ಭಾರತೀಯ ಚಿತ್ರರಂಗದಲ್ಲಿ ಅನೇಕರು ಐವಿಎಫ್ ಮೂಲಕ ಗರ್ಭ ಧರಿಸಿದ್ದಾರೆ. ಮಗುಗೆ ಜನ್ಮವನ್ನು ನೀಡಿದ್ದಾರೆ.

Bhojpuri Singer Devi Joins Bhavana Ramanna in Redefining Motherhood Becomes a Single Mother via IVF

ಈ ಸಾಲಿನಲ್ಲಿ ಕನ್ನಡದ ಚಂದ್ರಮುಖಿ ಪ್ರಾಣ ಸಖಿ ಭಾವನಾ ರಾಮಣ್ಣ ಕೂಡ ಇದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮುದ್ದಾದ ಹೆಣ್ಣು ಮಗುಗೆ ಜನ್ಮ ನೀಡಿದ್ದಾರೆ. ಇದೀಗ ಭಾವನಾ ಅವರಂತೆಯೇ ಚಿತ್ರರಂಗದ ಗಾಯಕಿ ಕೂಡ ಐವಿಎಫ್ ಮೂಲಕ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ.

ಹೌದು, ದೇವಿ.. ಭೋಜ್‌ಪುರಿಯ ಖ್ಯಾತ ಗಾಯಕಿ. 50ಕ್ಕೂ ಹೆಚ್ಚಿನ ಆಲ್ಬಂಗಳಿಗೆ ತಮ್ಮ ಕಂಠ ಕುಣಿಸಿರುವ ದೇವಿ ಅವರಿಗೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇವರ ಸ್ಟೇಜ್ ಶೋ ಇದೆ ಅಂದರೆ ಸಾಕು ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಬಂದು ಮುತ್ತಿಕೊಳ್ಳುತ್ತಾರೆ.

ಅಂದ್ಹಾಗೇ ದೇವಿ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಜನಿಸಿದವರು. ಚಂದಾ ಕ್ಯಾಸೆಟ್‌ನ ''ಬವರಿಯಾ'' ಆಲ್ಬಂ ಇವರ ಬದುಕಿನ ದಿಕ್ಕನ್ನೇ ಬದಲಿಸಿತು. ಡಾ. ಪ್ರಮೋದ್ ಕುಮಾರ್ ಸಾಹಿತ್ಯ ಮತ್ತು ದೇವಿಂದರ್ ದೇವ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ''ಬವರಿಯಾ'' ಆಲ್ಬಂನ 8 ಹಾಡುಗಳು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದವು. ಈ ಆಲ್ಬಂನ ''ಪಿಯಾ ಗಯಿಲೇ ಕಲ್ಕತ್ವ ಏ ಸಜನಿ''.. ''ಕುವೇ ಕಾ ಥಂಡಾ ಪಾನಿ''.. ''ಪರವಲ್ ಬೇಚೆ ಜಾಯಿಬ್ ಭಾಗಲ್ಪುರ್''.. ''ಅಂಗುರಿ ಮೇ ಡಸಲೇ ಬಿಯಾ ನಾಗಿನಿಯಾ'' ಹಾಡುಗಳು ಇಂದಿಗೂ ಕೂಡ ಜನಪ್ರಿಯ.

ಇನ್ನು ಹಲವರು ಖ್ಯಾತರಾದ ತಕ್ಷಣ ತಮ್ಮ ಬದುಕನ್ನು ಬದುಕುವ ರೀತಿ ಬದಲಿಸಿಕೊಳ್ಳುತ್ತಾರೆ. ಆಡಂಬರದ ಜೀವನ ಶೈಲಿ ರೂಢಿಸಿಕೊಳ್ಳುತ್ತಾರೆ. ಆದರೆ ದೇವಿ ಮಾತ್ರ ಇದಕ್ಕೆ ತದ್ವಿರುದ್ದ. ಜೀವನದಲ್ಲಿ ಸರಳತೆ ಅಳವಡಿಸಿಕೊಂಡಿದ್ಧಾರೆ. ಅಶ್ಲೀಲ ಹಾಡುಗಳನ್ನು ವಿರೋಧಿಸುವ ದೇವಿ ತಮ್ಮ ಹಾಡುಗಳಲ್ಲಾಗಲಿ.. ವ್ಯೆಯಕ್ತಿಕ ಬದುಕಿನಲ್ಲಾಗಲಿ.. ಸಭ್ಯತೆ ಎಲ್ಲೆಯನ್ನು ಮೀರಿಲ್ಲ.

Bhojpuri Singer Devi Joins Bhavana Ramanna in Redefining Motherhood Becomes a Single Mother via IVF

ಇಂಥಾ ದೇವಿ ಸದ್ಯ ಮದುವೆಯಾಗದೇ ತಾಯಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಐವಿಎಫ್ ಮೂಲಕ ಋಷಿಕೇಶ್‌ನ ಏಮ್ಸ್‌ ಆಸ್ಪತ್ರೆಯಲ್ಲಿ ಗಂಡು ಮಗುಗೆ ಜನ್ಮ ನೀಡಿದ್ದಾರೆ. ಜರ್ಮನ್ ವೀರ್ಯಾಣು ಬ್ಯಾಂಕಿನ ನೆರವಿನಿಂದ ದೇವಿ ಗರ್ಭಿಣಿಯಾಗಿದ್ದರು ಎಂದು ಆಜ್‌ ತಕ್.. ನ್ಯೂಸ್ 18.. ಸೇರಿ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸದ್ಯ ದೇವಿ ಅವರಿಗೆ ಭೋಜ್‌ಪುರಿಯ ಚಿತ್ರರಂಗದಲ್ಲಿನ ಅವರ ಸ್ನೇಹಿತರು, ಹಿತೈಶಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನೂ ಕನ್ನಡದಲ್ಲಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಮಗು ಪಡೆಯುತ್ತಿರುವುದಾಗಿ ಹೇಳಿದಾಗ ಹಲವರು ಮುಂದೊಂದು ದಿನ ನಿಮ್ಮ ಮಗು ನನ್ನ ತಂದೆ ಯಾರು ಎಂದು ಪ್ರಶ್ನೆಯನ್ನು ಕೇಳಿದರೆ ನೀವೇನು ಹೇಳುತ್ತೀರಾ ಎಂದು ಕೇಳಿದ್ದರು. ವ್ಯಂಗ್ಯ ಮಾಡಿದ್ದರು. ಸದ್ಯ ದೇವಿ ಅವರ ವಿಚಾರದಲ್ಲಿ ಕೂಡ ಹಲವರು ಇದೇ ತರಹದ ಮಾತುಗಳನ್ನಾಡುತ್ತಿದ್ದಾರೆ. ಆದರೆ ಆ ಮಾತುಗಳಿಗೆ ದೇವಿ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

More from Filmibeat

English summary
A new wave in entertainment: Bhojpuri singer Devi's bold decision to become a single mother through IVF draws parallels with Kannada actress Bhavana Ramanna's journey. A look at their powerful choice.
Read more about: pregnant pregnancy singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X