ಸೋತ್ರು ಬುದ್ದಿ ಬರ್ತಿಲ್ಲ.. ರೀಮೆಕ್ ನಿಲ್ತಿಲ್ಲ: ಬಾಲಿವುಡ್ ಅಲ್ಲ.. ರೀಮೆಕ್‌ವುಡ್

ಬಾಲಿವುಡ್‌ನಲ್ಲಿ ಸಾಲು ಸಾಲಾಗಿ ರೀಮೆಕ್ ಸಿನಿಮಾಗಳು ರಿಲೀಸ್ ಆಗಿ ಫ್ಲಾಪ್ ಆಗ್ತಿದೆ. ಸೌತ್‌ನಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ಕಥೆಗಳನ್ನು ಹುಡುಕಿ ಹುಡುಕಿ ಬಿಟೌನ್ ಮಂದಿ ಸಿನಿಮಾ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ಆದರೆ ಸಕ್ಸಸ್ ಮಾತ್ರ ಸಿಗುತ್ತಿಲ್ಲ. ಸ್ವಮೇಕ್ ಸಿನಿಮಾಗಳು ಗೆಲ್ಲುತ್ತಿಲ್ಲ. ರೀಮೆಕ್ ಸಿನಿಮಾಗಳು ಸದ್ದು ಮಾಡ್ತಿಲ್ಲ. ಇದೇ ವಿಚಾರ ಈಗ ಬಾಲಿವುಡ್ ಮಂದಿ ನಿದ್ದೆ ಕೆಡಿಸಿದೆ.

ಒಂದ್ಕಾಲದಲ್ಲಿ ಬಾಲಿವುಡ್ ಹಿಟ್ ಸಿನಿಮಾಗಳನ್ನು ಸೌತ್‌ನಲ್ಲಿ ರೀಮೆಕ್ ಮಾಡ್ತಿದ್ದರು. ಆದರೆ ಈಗ ಅದು ಉಲ್ಟಾ ಆಗಿದೆ. ಸಾಲು ಸಾಲಾಗಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳನ್ನು ಬಾಲಿವುಡ್ ಮಂದಿ ಸಿನಿಮಾ ಮಾಡ್ತಿದ್ದಾರೆ. ಕಳೆದೊಂದು ವರ್ಷದಿಂದ 'ವಿಕ್ರಂ ವೇದ', 'ಹಿಟ್', 'ಜೆರ್ಸಿ', 'ಷೆಹಜಾದಾ'(ಅಲಾ ವೈಕುಂಠಪುರಂಲೊ), 'ಡ್ರೈವಿಂಗ್ ಲೈಸೆನ್ಸ್'(ಸೆಲ್ಫಿ) ಹೀಗೆ ಸಾಲು ಸಾಲು ರೀಮೆಕ್ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ.

Bholaa To Love Today: Trend of south Indian Remakes in Bollywood Still continues

ಹೃತಿಕ್ ರೋಷನ್, ಅಕ್ಷಯ್‌ಕುಮಾರ್‌ರಂತಹ ಸೂಪರ್ ಸ್ಟಾರ್‌ಗಳು ರೀಮೆಕ್ ಮಾಡಿದ್ರು ಪ್ರಯೋಜನ ಆಗುತ್ತಿಲ್ಲ. ಅಕ್ಷಯ್‌ ಕುಮಾರ್ ನಟನೆಯ 'ಸೆಲ್ಫಿ' ಸಿನಿಮಾ 10 ಕೋಟಿ ರೂ. ಗಳಿಸಲಿಲ್ಲ. ಸ್ವತಃ ಬಾಲಿವುಡ್ ಖಿಲಾಡಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ಮಂದಿಯ ರೀಮೆಕ್ ಸಿನಿಮಾಗಳ ಪ್ರಯತ್ನ ಇಲ್ಲಿದೆ ನಿಲ್ಲಲ್ಲ. ಮುಂದೆ 'ಲವ್ ಟುಡೇ', 'ಸೂರರೈ ಪೋಟ್ರು', 'ಎಫ್‌- 2', 'ಬ್ರೋಚೆವಾರೆವರುರಾ', 'ಖೈದಿ', 'ಕತ್ತಿ', 'ಅಯ್ಯಪ್ಪನುಂ ಕೋಶಿಯುಂ', 'ವೀರಂ' ಹೀಗೆ ಮತ್ತಷ್ಟು ಸಿನಿಮಾಗಳನ್ನು ರೀಮೆಕ್ ಮಾಡುತ್ತಿದ್ದಾರೆ.

ತಮಿಳಿನ 'ಖೈದಿ' ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿ ಅಜಯ್ ದೇವಗನ್ 'ಭೋಲಾ' ಸಿನಿಮಾ ಮಾಡ್ತಿದ್ದಾರೆ. ಸೂರ್ಯ ನಟನೆಯ ತಮಿಳಿನ 'ಸುರರೈ ಪೋಟ್ರು' ಹಿಂದಿ ವರ್ಷನ್‌ನಲ್ಲಿ ಅಕ್ಷಯ್‌ಕುಮಾರ್ ನಟಿಸ್ತಿದ್ದಾರೆ. ಸೂರ್ಯ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ದಳಪತಿ ವಿಜಯ್ ನಟನೆಯ 'ಕತ್ತಿ' ಚಿತ್ರವನ್ನು ಕೂಡ ಅಕ್ಷಯ್‌ ಕುಮಾರ್ ರೀಮೆಕ್ ಮಾಡ್ತಿದ್ದಾರೆ. ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳ ಸರದಾರ ಆಗಿದ್ದ ಅಕ್ಷಯ್, ಈಗ ರೀಮೆಕ್ ಸಿನಿಮಾಗಳ ಸರದಾರ ಎನಿಸಿಕೊಳ್ಳುತ್ತಿದ್ದಾರೆ.

ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ತೆಲುಗಿನಲ್ಲಿ 'ಭೀಮ್ಲಾ ನಾಯಕ್' ಆಗಿ ಬಂದಿತ್ತು. ಇದನ್ನು ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಹಿಂದಿಗೆ ರೀಮೆಕ್ ಮಾಡುವ ಪ್ರಯತ್ನದಲ್ಲಿದ್ದಾರೆ. ಇನ್ನು ತಮಿಳಿನ 'ವೀರಂ' ರೀಮೆಕ್‌ನಲ್ಲಿ ಸಲ್ಮಾನ್ ಖಾನ್ ನಟಿಸ್ತಿದ್ದಾರೆ. ಇದೇ ಸಿನಿಮಾ ಕನ್ನಡದಲ್ಲಿ 'ಒಡೆಯ' ಆಗಿ ಬಂದಿತ್ತು.

Bholaa To Love Today: Trend of south Indian Remakes in Bollywood Still continues

ಹಿಂದಿ ಪ್ರೇಕ್ಷಕರು ಸೌತ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ರೀಮೆಕ್ ಮಾಡಿದರೆ ಯಾಕೆ ನೋಡುತ್ತಿಲ್ಲ ಎಂದು ಬಾಲಿವುಡ್ ಮಂದಿ ತಲೆ ಕೆಡಿಸಿಕೊಂಡಿದ್ದಾರೆ.

ತೆಲುಗಿನ 'ಅಲಾ ವೈಕುಂಠಪುರಂಲೋ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಇದೇ ಚಿತ್ರವನ್ನು 'ಷಹಜಾದಾ' ಹೆಸರಿನಲ್ಲಿ ಕಾರ್ತಿಕ್ ಆರ್ಯನ್ ರೀಮೆಕ್ ಮಾಡಿದ್ದರು. ಆದರೆ ಸಿನಿಮಾ ಒಂದು ವಾರ ಕೂಡ ಓಡಲಿಲ್ಲ. ಅದಕ್ಕು ಮುನ್ನ ಶಾಹಿದ್ ಕಪೂರ್ ತೆಲುಗಿನ 'ಜೆರ್ಸಿ' ಚಿತ್ರವನ್ನು ಅದೇ ಹೆಸರಿನಲ್ಲಿ ರೀಮೆಕ್ ಮಾಡಿ ಸೋತಿದ್ದರು.

ಪ್ಯಾನ್ ಇಂಡಿಯಾ ಜಮಾನದಲ್ಲಿ ಸೌತ್ ಸಿನಿಮಾಗಳನ್ನು ಬಾಲಿವುಡ್ ಮಂದಿ ನೇರವಾಗಿ ನೋಡುತ್ತಿದ್ದಾರೆ. ಮತ್ತೆ ಅದೇ ಕಥೆಯನ್ನು ರೀಮೆಕ್ ಮಾಡಿದರೇ ನೋಡೋದು ಕಷ್ಟ. ಆದರೂ ಒಳ್ಳೆ ಕಥೆಗಳ ಬರ ಎದುರಿಸುತ್ತಿರುವ ಬಾಲಿವುಡ್ ಫಿಲ್ಮ್ ಮೇಕರ್ಸ್‌ ಕಥೆಗಳಿಗಾಗಿ ಸೌತ್‌ನತ್ತ ನೋಡುತ್ತಿದ್ದಾರೆ. ಹಿಟ್ ಸಿನಿಮಾ ಕಥೆಯಾದರೆ ಸೇಫ್ ಝೋನ್ ಎನ್ನುವ ಲೆಕ್ಕಾಚಾರ ನಡೀತಿದೆ. ಆದರೆ ಸಕ್ಸಸ್ ಮಾತ್ರ ಸಿಗುತ್ತಿಲ್ಲ.

Bholaa To Love Today: Trend of south Indian Remakes in Bollywood Still continues

ತಮಿಳಿನ 'ಗಜಿನಿ', ತೆಲುಗಿನ 'ಪೋಕಿರಿ', ಮಲಯಾಳಂನ 'ದೃಶ್ಯಂ' ಸಿನಿಮಾಗಳು ಹಿಂದಿಗೆ ರೀಮೆಕ್ ಆಗಿ ದಶಕದ ಹಿಂದೆ ಹಿಟ್ ಆಗಿತ್ತು. ಅಲ್ಲಿಂದ ಸೌತ್ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ರೀಮೆಕ್ ಮಾಡುವ ಟ್ರೆಂಡ್ ಶುರುವಾಗಿತ್ತು. ಆದರೆ ಸಕ್ಸಸ್ ಮಾತ್ರ ಮರೀಚಿಕೆಯಾಗಿದೆ. ಸೌತ್ ಸಿನಿಮಾಗಳು ಓಟಿಟಿಯಲ್ಲಿ ಸಿಗೋದ್ರಿಂದ ಕೂಡ ರೀಮೆಕ್ ಮಾಡಿದ್ರೆ, ಜನ ನೋಡಲ್ಲ ಎನ್ನಲಾಗ್ತಿದೆ. ಸದ್ಯ ರೀಮೆಕ್ ಆಗುತ್ತಿರುವ ಸಿನಿಮಾಗಳ ಭವಿಷ್ಯ ಏನಾಗುತ್ತದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Bholaa To Love Today: Trend of south Indian Remakes in Bollywood Still continues. Bollywood Remake Movies struggling at Box office. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X