ಸೋಲು ಕಂಡ ಬಾಲಿವುಡ್‌ಗೆ ರಿಲೀಫ್‌: 'ಭೂಲ್ ಭುಲಯ್ಯ 2' ವೀಕೆಂಡ್ ಕಲೆಕ್ಷನ್ ಎಷ್ಟು?

ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳ ಅಬ್ಬರದಿಂದಾಗಿ ಬಾಲಿವುಡ್ ಸಿನಿಮಾಗಳು ಮೂಲೆಗುಂಪಾಗಿದ್ದವು. 'ಕೆಜಿಎಫ್‌ 2', 'ಪುಷ್ಪ', 'RRR' ನಂತಹ ಸೌತ್ ಸ್ಟಾರ್‌ ಸಿನಿಮಾಗಳು ಬಾಲಿವುಡ್‌ ಅಂಗಳದಲ್ಲೂ ಆರ್ಭಟಿಸಿ ಬಾಲಿವುಡ್‌ನ ಸ್ಟಾರ್‌ ನಟರ ಸಿನಿಮಾಗಳನ್ನೇ ಹಿಂದಕ್ಕೆ ತಳ್ಳಿತ್ತು.

ಕಳೆದ ಎರಡು ಮೂರು ತಿಂಗಳಲ್ಲಿ ರಿಲೀಸ್‌ ಆದ ಯಾವುದೇ ಬಾಲಿವುಡ್ ಸಿನಿಮಾಗಳು ಹಿಟ್ ಕಾಣಲಿಲ್ಲ. ಅಲ್ಲದೆ ಸೌತ್ ಸಿನಿಮಾಗಳ ಆರ್ಭಟದಿಂದ ಈ ಸಿನಿಮಾಗಳ ಕಡೆ ಪ್ರೇಕ್ಷಕರು ಕೂಡ ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ ಸಿನಿಮಾ ಕೂಡ ದಾಖಲೆ ಮಟ್ಟದಲ್ಲಿ ಕಲೆಕ್ಷನ್‌ ಮಾಡದೆ ಹೀನಾಯವಾಗಿ ಸೋಲು ಕಂಡಿತ್ತು.

ಅದರಲ್ಲೂ 'ಕೆಜಿಎಫ್‌ 2' ಸಿನಿಮಾ ರಿಲೀಸ್‌ ಆದಾಗ ಆ ಸಮಯದಲ್ಲಿ ರಿಲೀಸ್‌ 'ಹೀರೊಪಂಥಿ', 'ರನ್‌ ವೇ' ಸಿನಿಮಾಗಳು 'ಕೆಜಿಎಫ್‌ 2' ನಿಂದ ಮಕಾಡೆ ಮಲಗಿದ್ದವು. ಕಲೆಕ್ಷನ್ ಇಲ್ಲದೆ ಕಂಗಾಲಾಗಿದ್ದವು. ಸದ್ಯ ಈಗ ಬಾಲಿವುಡ್‌ ಕೊಂಚ ಚೇತರಿಕೆ ಕಂಡಿದ್ದು, ಮೇ 20 ರಂದು ರಿಲೀಸ್‌ ಆದ 'ಭೂಲ್ ಭುಲಯ್ಯ 2' ಸಿನಿಮಾ ಮೊದಲನೇ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಬಾಲಿವುಡ್‌ನ ಮರ್ಯಾದೆ ಉಳಿಸಿದೆ.

 'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು ?

'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು ?

ನಟ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಹಾರರ್ ಅಂಡ್ ಕಾಮಿಡಿ ಸಿನಿಮಾವಾದ 'ಭೂಲ್ ಭುಲಯ್ಯ 2' ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸೌತ್ ಸಿನಿಮಾಗಳ ಅಬ್ಬರದಿಂದ ಕಳೆದ ಎರಡು ತಿಂಗಳಿನಿಂದ ಬಾಲಿವುಡ್‌ನ ಸಿನಿಮಾಗಳು ಕಲೆಕ್ಷನ್‌ ಇಲ್ಲದೆ ಒದ್ದಾಡುತ್ತಿದ್ದವು. ಸದ್ಯ ಈಗ 'ಭೂಲ್ ಭುಲಯ್ಯ 2' ಸಿನಿಮಾ ಮೂಲಕ ಕೊಂಚ ಚೇತರಿಕೆ ಕಂಡಿದೆ. ರಿಲೀಸ್ ಆದ ಮೊದಲ ದಿನವೇ 14.11 ಕೋಟಿ ಬಾಚಿಕೊಂಡ ಸಿನಿಮಾ ನಂತರ ವೀಕೆಂಡ್‌ನಲ್ಲಿ 18.34 ಕೋಟಿ ಕಲೆಕ್ಷನ್ ಮಾಡಿಕೊಂಡಿದೆ. ಭಾನುವಾರ 23.5 ಕೋಟಿ ರೂ ಯಿಂದ 25 ಕೋಟಿ ರೂವರೆಗೂ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದ್ದು, ಈ ಬಾರಿಯ ವಿಕೇಂಡ್‌ನಲ್ಲಿ ಬರೋಬ್ಬರಿ 50 ರಿಂದ 57 ಕೋಟಿ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ ನಟ ಕಾರ್ತಿಕ್ ಆರ್ಯನ್

ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ ನಟ ಕಾರ್ತಿಕ್ ಆರ್ಯನ್

'ಭೂಲ್‌ ಭುಲಯ್ಯ 2' ಸಿನಿಮಾ ನಿರೀಕ್ಷೆಗೂ ಮೀರಿ ಜನರನ್ನು ಮನರಂಜಿಸಿದೆ. ಹೀಗಾಗಿ ವೀಕೆಂಡ್‌ನಲ್ಲಿ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಸದ್ಯ (ಮೇ 22) ರಂದು ನಟ ಕಾರ್ತಿಕ್ ಆರ್ಯನ್ ಮುಂಬೈನ ಗೈಟಿ ಥಿಯೇಟರ್‌ ಆಗಮಿಸಿದ್ದಾರೆ. ಈ ವೇಳೆ ನೂರಾರು ಜನರು ಥಿಯೇಟರ್‌ಗೆ ಜಮಾಯಿಸಿದ್ದು, ಹೌಸ್‌ ಫುಲ್ ಪ್ರದರ್ಶನವಾಗಿದೆ. ಸದ್ಯ ಈ ಅನುಭವದ ಬಗ್ಗೆ ಟ್ವೀಟ್ ಮಾಡಿರುವ ಕಾರ್ತಿಕ್ ಆರ್ಯನ್ ಅಭಿಮಾನಿಗಳ ಪ್ರೀತಿಗೆ ಸದಾ ಚಿರಋಣಿ. ನನಗೆ ಒಂದು ಸಿನಿಮಾ ಟಿಕೆಟ್ ಸಿಗಲಿಲ್ಲ. ಆ ಮಟ್ಟಿಗೆ ಥಿಯೇಟರ್ ಹೌಸ್ ಫುಲ್ ಆಗಿತ್ತು. ಎಲ್ಲಾ ಪ್ರೇಕ್ಷಕರಿಗೆ ಹೃದಯ ತುಂಬಿ ಧನ್ಯವಾದ ಎಂದು ತಮ್ಮ ಸಂತಸವನ್ನು ಬರೆದುಕೊಂಡಿದ್ದಾರೆ.

 ಕಲೆಕ್ಷನ್ ಇಲ್ಲದೆ ಮಕಾಡೆ ಮಲಗಿದ 'ಧಾಕಡ್'

ಕಲೆಕ್ಷನ್ ಇಲ್ಲದೆ ಮಕಾಡೆ ಮಲಗಿದ 'ಧಾಕಡ್'

ಮೇ 20 ರಂದು 'ಭೂಲ್ ಭುಲಯ್ಯ 2' ಸಿನಮಾ ಜೊತೆ ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ 'ಧಾಕಡ್' ಚಿತ್ರ ಕೂಡ ಬಿಡುಗಡೆಯಾಗಿತ್ತು. ಈ ಸಿನಿಮಾ ಮೇಲೆ ಕಂಗನಾ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟಿದ್ದರು. ಆದರೆ, 'ಧಾಕಡ್' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಪರಿಣಾಮ 'ಭೂಲ್‌ ಭುಲಯ್ಯ 2' ಸಿನಿಮಾ ಅದ್ದೂರಿಯಾಗಿ ಸಕ್ಸಸ್ ಕಾಣಲು ಇದು ಒಂದು ಪ್ರಮುಖ ಕಾರಣವಾಗಿದೆ. 'ಭೂಲ್‌ ಭುಲಯ್ಯ 2' ಅಬ್ಬರದಿಂದಾಗಿ ಕಂಗನಾ ಚಿತ್ರ ಕಲೆಕ್ಷನ್ ಇಲ್ಲದೆ ಪರದಾಟ ನಡೆಸಿದೆ. ಸಿನಿಮಾ ರಿಲೀಸ್ ದಿನ ಹಾಗೂ ವೀಕೆಂಡ್‌ನಲ್ಲಿ 'ಧಾಕಡ್' ಸಿನಿಮಾ ಕೇವಲ 1.50 ಕೋಟಿ ಗಳಿಕೆ ಮಾಡಿಕೊಂಡಿದೆ. ಅಲ್ಲದೆ ಹಲವು ಕಡೆ ಸಿನಿಮಾವನ್ನು ಥಿಯೇಟರ್‌ನಿಂದ ಎತ್ತಂಗಡಿ ಮಾಡಲಾಗಿದೆ.

 'ಭೂಲ್ ಭುಲಯ್ಯ 2' ಕೈ ಹಿಡಿದ ಸಿನಿ ಪ್ರೇಕ್ಷಕರು'

'ಭೂಲ್ ಭುಲಯ್ಯ 2' ಕೈ ಹಿಡಿದ ಸಿನಿ ಪ್ರೇಕ್ಷಕರು'

'ಭೂಲ್‌ ಭುಲಯ್ಯ 2' ಸಿನಿಮಾ ಹಾರರ್ ಅಂಡ್ ಕಾಮಿಡಿ ಸಿನಿಮಾವಾಗಿದೆ. ಹೀಗಾಗಿ ಪ್ರೇಕ್ಷಕರಿಗೆ ಹೆಚ್ಚು ತಲುಪುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಸಿನಿಮಾದಲ್ಲಿ ತಾರ ಬಳಗವೇ ಇದ್ದು, ಕಾರ್ತಿಕ್ ಆರ್ಯನ್, ಟಬು ಮತ್ತು ಕಿಯಾರಾ ಅಡ್ವಾಣಿ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್‌ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಆದ ಮೊದಲ ದಿನ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಸಿನಿಮಾ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಎಡವಿಲ್ಲ. ಒಂದು ವರ್ಗ ಸಿನಿಮಾ ಚೆನ್ನಾಗಿಲ್ಲ ಎಂದರೆ, ಇನ್ನೊಂದು ವರ್ಗ ಸಿನಿಮಾವನ್ನು ಇಷ್ಟ ಪಟ್ಟು ನೋಡಿದೆ. ಹೀಗಾಗಿ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಸಹ ಸಿನಿಮಾ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಿಂದ ಸತತ ಸೋಲು ಕಂಡಿದ್ದ ಬಾಲಿವುಡ್‌ಗೆ ಈ ಸಿನಿಮಾ ಕೊಂಚ ರಿಲೀಫ್ ತಂದಿದೆ.

More from Filmibeat

English summary
Bhool Bhulaiyaa 2 Box Office Collection Day 3,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X