'ಕೆಜಿಎಫ್‌ 2'ಗೆ ಟಕ್ಕರ್ ಕೊಡುತ್ತಾ 'ಭೂಲ್ ಭುಲಯ್ಯ 2' ಕಲೆಕ್ಷನ್?

ಇತ್ತೀಚಿಗೆ ಬಾಲಿವುಡ್‌ ಅಂಗಳದಲ್ಲಿ ದಕ್ಷಿಣ ಭಾರತದ ಸಿನಿಮಾ ಅಬ್ಬರಿಸಿದ್ದವು. ಬಾಲಿವುಡ್‌ನ ಸ್ಟಾರ್ ಸಿನಿಮಾಗಳನ್ನೇ ನೆಲಕ್ಕೆ ಉರುಳಿಸಿದ್ದವು. ಅಲ್ಲದೆ ಬಾಲಿವುಡ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದವು. ಇದರಿಂದ ಸೌತ್ ಸಿನಿಮಾಗಳ ಆರ್ಭಟಕ್ಕೆ ಬಾಲಿವುಡ್‌ ಮಂದಿಯೇ ಸುಮ್ಮನಾಗಿದ್ದರು. ಸದ್ಯ ಈಗ ಬಾಲಿವುಡ್‌ಗೆ ಕೊಂಚ ಚೇತರಿಕೆ ಬಂದಿದ್ದು, 'ಭೂಲ್ ಭುಲಯ್ಯ 2' ಸಿನಿಮಾ ಉತ್ತಮ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೇ 20 ರಂದು ರಿಲೀಸ್ ಆದ 'ಭೂಲ್ ಭುಲಯ್ಯ 2' ಚಿತ್ರ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಸಫಲವಾಗಿದೆ. 'ಕೆಜಿಎಫ್‌ 2' ಅಬ್ಬರದಿಂದಾಗಿ ಬಾಲಿವುಡ್‌ ಸಿನಿಮಾಗಳು ಕಂಗಾಲಾಗಿದ್ದವು. ಸದ್ಯ ಈಗ 'ಭೂಲ್ ಭುಲಯ್ಯ 2' ಚಿತ್ರ ಆ ನಷ್ಟವನ್ನು ತುಂಬಿಕೊಡುವ ಕೆಲಸ ಮಾಡುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಹೊಸ ಚೈತನ್ಯ ಸಿಕ್ಕಂತಾಗಿದೆ.

'ಕೆಜಿಎಫ್‌ 2' ಸಿನಿಮಾಗೆ ಟಕ್ಕರ್ ಕೊಡುವ ಮಟ್ಟದಲ್ಲಿ 'ಭೂಲ್‌ ಭುಲಯ್ಯ 2' ಚಿತ್ರ ಮುನ್ನುಗ್ಗುತ್ತಿದ್ದು ರಿಲೀಸ್ ಆದ ನಾಲ್ಕು ದಿನಗಳಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ 'ಕೆಜಿಎಫ್‌ 2' ಸಿನಿಮಾ ಕಲೆಕ್ಷನ್ ಬ್ರೇಕ್‌ ಮಾಡಲು ಸಜ್ಜಾಗುತ್ತಿದೆ.

 'ಭೂಲ್‌ ಭುಲಯ್ಯ 2' ನಿಂದ ಬಾಲಿವುಡ್‌ಗೆ ಹೊಸ ಚೇತರಿಕೆ

'ಭೂಲ್‌ ಭುಲಯ್ಯ 2' ನಿಂದ ಬಾಲಿವುಡ್‌ಗೆ ಹೊಸ ಚೇತರಿಕೆ

ದಕ್ಷಿಣದ ಸಿನಿಮಾಗಳ ಅಬ್ಬರದಿಂದ ಕಂಗಾಲಾಗಿದ್ದ ಬಾಲಿವುಡ್‌ಗೆ ಈಗ ಸ್ವಲ್ಪ ಸಮಾಧಾನ ತರಿಸಿದ್ದು, ಕಾರ್ತಿಕ್ ಆರ್ಯನ್ ನಟನೆಯ 'ಭೂಲ್ ಭುಲಯ್ಯ 2' ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಾಲಿವುಡ್‌ಗೆ ಮತ್ತೆ ಹೊಸ ಚೈತನ್ಯ ಮೂಡಿದ್ದು, ರಿಲೀಸ್ ಆದ ದಿನದಿಂದ ಇಲ್ಲಿಯವರೆಗೂ ಉತ್ತಮ ಪ್ರದರ್ಶನ ನೀಡುತ್ತಾ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವಲ್ಲಿ 'ಭೂಲ್ ಭುಲಯ್ಯ 2' ಯಶಸ್ವಿಯಾಗಿದೆ. ಸೋಮವಾರ (ಮೇ 23) ಒಂದೇ ದಿನ ₹10.50 ಕೋಟಿ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಈ ಮೂಲಕ ಕೇವಲ ನಾಲ್ಕು ದಿನದಲ್ಲೇ ₹66 ಕೋಟಿ ಗಳಿಕೆ ಮಾಡಿದ್ದು, ಇದು ಕಾರ್ತಿಕ್ ಆರ್ಯನ್ ಅವರ ವೃತ್ತಿ ಜೀವನದಲ್ಲಿ ಮೊದಲ ದಾಖಲೆ ಪ್ರಮಾಣದ ಕಲೆಕ್ಷನ್ ಆಗಿದೆ.

 'ಕೆಜಿಎಫ್‌ 2' Vs 'ಭೂಲ್ ಭುಲಯ್ಯ 2'

'ಕೆಜಿಎಫ್‌ 2' Vs 'ಭೂಲ್ ಭುಲಯ್ಯ 2'

'ಕೆಜಿಎಫ್‌ 2' ಏಪ್ರಿಲ್ 14 ರಂದು ರಿಲೀಸ್ ಆಗಿ ಇಡೀ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಇಂದಿಗೂ ಕೂಡ ಹಲವು ಕಡೆ ವೀಕೆಂಡ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಹಾಗೇ ಬಾಲಿವುಡ್‌ನಲ್ಲೂ ಸಿನಿಮಾ ಈಗಲೂ ಹಲವು ಕಡೆ ಪ್ರದರ್ಶನವಾಗುತ್ತಿದೆ. ಸದ್ಯ ಈಗ 'ಭೂಲ್‌ ಭುಲಯ್ಯ 2' ಚಿತ್ರ ಬಿಡುಗಡೆಯಾಗಿರುವುದರಿಂದ ಈ ಚಿತ್ರದ ಮೂಲಕ ಬಾಲಿವುಡ್‌ 'ಕೆಜಿಎಫ್‌ 2'ಗೆ ಟಕ್ಕರ್ ಕೊಡಲು ಸಿದ್ದವಾಗಿದೆ. ಈಗಾಗಲೇ 'ಕೆಜಿಎಫ್‌ 2' ಚಿತ್ರ ಬಾಲಿವುಡ್‌ನಲ್ಲಿ ₹400 ಕೋಟಿ ಬಾಚಿಕೊಂಡಿದೆ. ಸದ್ಯ ದಾಖಲೆಯನ್ನು 'ಭೂಲ್ ಭುಲಯ್ಯ 2' ಚಿತ್ರದಿಂದ ಮುರಿಯಲು ಸಾಧ್ಯವಾಗುತ್ತಾ ಕಾದು ನೋಡಬೇಕಿದೆ.

 ಥಿಯೇಟರ್‌ನಿಂದ ಎತ್ತಂಗಡಿ ಆದ 'ಧಾಕಡ್' ಚಿತ್ರ

ಥಿಯೇಟರ್‌ನಿಂದ ಎತ್ತಂಗಡಿ ಆದ 'ಧಾಕಡ್' ಚಿತ್ರ

ಮೇ 20 ರಂದು 'ಭೂಲ್ ಭುಲಯ್ಯ 2' ಸಿನಮಾ ಜೊತೆ ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ 'ಧಾಕಡ್' ಚಿತ್ರ ಕೂಡ ಬಿಡುಗಡೆಯಾಗಿತ್ತು. ಈ ಸಿನಿಮಾ ಮೇಲೆ ಕಂಗನಾ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ, 'ಧಾಕಡ್' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಪರಿಣಾಮ 'ಭೂಲ್‌ ಭುಲಯ್ಯ 2' ಸಿನಿಮಾ ಅದ್ದೂರಿಯಾಗಿ ಸಕ್ಸಸ್ ಕಾಣಲು ಇದು ಒಂದು ಪ್ರಮುಖ ಕಾರಣವಾಗಿದೆ. 'ಭೂಲ್‌ ಭುಲಯ್ಯ 2' ಅಬ್ಬರದಿಂದಾಗಿ ಕಂಗನಾ ಚಿತ್ರ ಕಲೆಕ್ಷನ್ ಇಲ್ಲದೆ ಪರದಾಟ ನಡೆಸಿದೆ. ಸಿನಿಮಾ ರಿಲೀಸ್ ದಿನ ಹಾಗೂ ವೀಕೆಂಡ್‌ನಲ್ಲಿ 'ಧಾಕಡ್' ಸಿನಿಮಾ ಕೇವಲ ₹1.50 ಕೋಟಿ ಗಳಿಕೆ ಮಾಡಿಕೊಂಡಿದೆ. ಅಲ್ಲದೆ ಹಲವು ಕಡೆ ಸಿನಿಮಾವನ್ನು ಥಿಯೇಟರ್‌ನಿಂದ ಎತ್ತಂಗಡಿ ಮಾಡಲಾಗಿದೆ.

 'ಭೂಲ್ ಭುಲಯ್ಯ 2' ಕೈ ಹಿಡಿದ ಸಿನಿ ಪ್ರೇಕ್ಷಕರು

'ಭೂಲ್ ಭುಲಯ್ಯ 2' ಕೈ ಹಿಡಿದ ಸಿನಿ ಪ್ರೇಕ್ಷಕರು

'ಭೂಲ್‌ ಭುಲಯ್ಯ 2' ಸಿನಿಮಾ ಹಾರರ್ ಅಂಡ್ ಕಾಮಿಡಿ ಸಿನಿಮಾವಾಗಿದೆ. ಹೀಗಾಗಿ ಪ್ರೇಕ್ಷಕರಿಗೆ ಹೆಚ್ಚು ತಲುಪುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಸಿನಿಮಾದಲ್ಲಿ ತಾರಾ ಬಳಗವೇ ಇದ್ದು, ಕಾರ್ತಿಕ್ ಆರ್ಯನ್, ಟಬು ಮತ್ತು ಕಿಯಾರಾ ಅಡ್ವಾಣಿ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್‌ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಆದ ಮೊದಲ ದಿನ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಸಿನಿಮಾ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಎಡವಿಲ್ಲ. ಒಂದು ವರ್ಗ ಸಿನಿಮಾ ಚೆನ್ನಾಗಿಲ್ಲ ಎಂದರೆ, ಇನ್ನೊಂದು ವರ್ಗ ಸಿನಿಮಾವನ್ನು ಇಷ್ಟ ಪಟ್ಟು ನೋಡಿದೆ. ಹೀಗಾಗಿ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಸಹ ಸಿನಿಮಾ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಿಂದ ಸತತ ಸೋಲು ಕಂಡಿದ್ದ ಬಾಲಿವುಡ್‌ಗೆ ಈ ಸಿನಿಮಾ ಕೊಂಚ ರಿಲೀಫ್ ತಂದಿದೆ.

More from Filmibeat

English summary
Bhool Bhuliyaa 2 Collection Day 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X