For Quick Alerts
  ALLOW NOTIFICATIONS  
  For Daily Alerts

  ತನ್ನ ಕಪ್ಪು ಮುಖದ ಬಗ್ಗೆ ಆಗುತ್ತಿದ್ದ ಚರ್ಚೆಗೆ ನಟಿ ಭೂಮಿ ಪೆಡ್ನೆಕರ್ ಪ್ರತಿಕ್ರಿಯೆ

  |

  ಹಿಂದಿ ಸಿನಿಮಾ 'ಬಾಲಾ' ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಸಿನಿಮಾದ ವಿಷಯ, ನಟ, ನಟಿಯರ ಅಭಿನಯ ಎಲ್ಲವೂ ಇಷ್ಟ ಆಗಿದೆ. ಆದರೆ, ಇದೇ ಟ್ರೇಲರ್ ಚರ್ಚೆಗೂ ಕಾರಣವಾಗಿದೆ.

  ಸಿನಿಮಾದ ನಾಯಕಿ ಭೂಮಿ ಪೆಡ್ನೆಕರ್ ಇಲ್ಲಿ ಕಪ್ಪು ಹುಡುಗಿಯ ಪಾತ್ರ ಮಾಡಿದ್ದಾರೆ. ಹೀಗಾಗಿ, ಬೆಳ್ಳಗೆ ಇರುವ ಭೂಮಿ ಪೆಡ್ನೆಕರ್ ಮುಖಕ್ಕೆ ಕಪ್ಪು ಬಣ್ಣ ಬಳಿಯುವ ಬದಲು, ಕಪ್ಪು ಬಣ್ಣನ ನಟಿಯನ್ನೇ ಸಿನಿಮಾ ಆಯ್ಕೆ ಮಾಡಬಹುದಿತ್ತು ಎಂದು ಕೆಲವರು ಕೊಂಕು ತೆಗೆದಿದ್ದಾರೆ. ಈ ಬಗ್ಗೆ ಇದೀಗ ಭೂಮಿ ಪೆಡ್ನೆಕರ್ ಪ್ರತಿಕ್ರಿಯೆ ನೀಡಿದ್ದಾರೆ.

  ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್

  ''ನಾನು ನಿರ್ವಹಿಸಿದರುವುದು ಒಂದು ಪಾತ್ರ. ಸಿನಿಮಾ ನೋಡಿದಾಗ ಆ ಪಾತ್ರ ಜನರಿಗೆ ಅರ್ಥ ಆಗುತ್ತದೆ. ಬಣ್ಣ ತಮಾಷೆ ಮಾಡುವ ವಿಷಯ ಅಲ್ಲ. ಚರ್ಮದ ಬಣ್ಣದ ಬಗ್ಗೆ ಹೊಂದಿರುವ ಗೀಳು, ಪಕ್ಷಪಾತದ ಬಗ್ಗೆ ಈ ಸಿನಿಮಾ ಇದೆ. ಇದನ್ನು ಹೋಗಲಾಡಿಸುವ ಬಗ್ಗೆ ಸಿನಿಮಾ ಮಾಡಲಾಗಿದೆ.'' ಎಂದು ಹೇಳಿದ್ದಾರೆ.

  ತಮ್ಮ ಪಾತ್ರದ ಬಗ್ಗೆ ಬರುತ್ತಿರುವ ಪ್ರತಿಕ್ರಿಯೆಗಳನ್ನು, ಲೇಖನಗಳನ್ನು, ಚರ್ಚೆಗಳನ್ನು ಭೂಮಿ ಪೆಡ್ನೆಕರ್ ಗಮನಿಸುತ್ತಿದ್ದಾರಂತೆ. ''ನಾನು ಒಬ್ಬ ನಟಿಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನಾನು ಕಲಾವಿದೆಯಾಗಿ ಬೇರೆ ಬೇರೆ ರೀತಿಯಾದ ಪಾತ್ರಗಳನ್ನು ಮಾಡಬೇಕು'' ಎಂದಿದ್ದಾರೆ.

  ಸಿಂಪಲ್ ಸಲ್ವಾರ್ ಧರಿಸಿದ್ದರೂ ಟ್ರೋಲ್ ಆದ ಜಾಹ್ನವಿ ಕಪೂರ್.! ಕಾರಣ ಏನು.?ಸಿಂಪಲ್ ಸಲ್ವಾರ್ ಧರಿಸಿದ್ದರೂ ಟ್ರೋಲ್ ಆದ ಜಾಹ್ನವಿ ಕಪೂರ್.! ಕಾರಣ ಏನು.?

  ಭೂಮಿ ಪೆಡ್ನೆಕರ್ ಪ್ರತಿ ಸಿನಿಮಾದಲ್ಲಿಯೂ ಬೇರೆ ಬೇರೆ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಕೂಡ ಅದೇ ಕಾರಣಕ್ಕೆ ಒಪ್ಪಿಕೊಂಡಿದ್ದಾರೆ. ಸವಾಲಿನ ಪಾತ್ರಗಳನ್ನು ಭೂಮಿ ಪೆಡ್ನೆಕರ್ ಮಾಡಿಕೊಂಡು ಬರುತ್ತಿದ್ದು, ಈ ಪಾತ್ರ ಕೂಡ ವಿಭಿನ್ನವಾಗಿ ಇರಲಿದೆಯಂತೆ.

  'ಬಾಲಾ' ಸಿನಿಮಾ ಆಯುಷ್ಮಾನ್ ಕುರಾನ್ ಹಾಗೂ ಭೂಮಿ ಪೆಡ್ನೆಕರ್ ನಟನೆಯ ಸಿನಿಮಾ. ಬೊಳು ತಲೆಯ ವ್ಯಕ್ತಿಯ ಪರದಾಟವನ್ನು ಸಿನಿಮಾದಲ್ಲಿ ಹಾಸ್ಯವಾಗಿ ಹೇಳಲಾಗಿದೆ.

  English summary
  Bollywood actress Bhumi Pednekar reaction about debate on her dark skin in 'Bala' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X