ಟಾಪ್ ಲೆಸ್ ಫೋಟೋಶೂಟ್ ನಲ್ಲಿ ಭೂಮಿ ಪಡ್ನೆಕರ್
ಬಾಲಿವುಡ್ ನಟಿ ಭೂಮಿ ಪಡ್ನೆಕರ್ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ಗಾಗಿ ಭೂಮಿ ಟಾಪ್ ಲೆಸ್ ಆಗಿದ್ದಾರೆ. ಈ ಫೋಟೋ ನೆಟ್ಟಿಗರ ಕಣ್ಣು ಕುಕ್ಕಿದೆ.
ಇದೊಂದು ಕ್ಯಾಲೆಂಡರ್ ಶೂಟ್ ಆಗಿದೆ. ಬಾತ್ ಟಬ್ ನಲ್ಲಿ ಈ ಫೋಟೋ ಶೂಟ್ ಮಾಡಲಾಗಿದೆ. ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಈ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. 2020ರ ಗ್ಲಾಮರ್ ಕ್ಯಾಲೆಂಡರ್ ಇದಾಗಿದೆ.
ಭೂಮಿ ತಮ್ಮ ಟಾಪ್ ಲೆಸ್ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 3 ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋಗೆ ಲೈಕ್ ನೀಡಿದ್ದಾರೆ. ಭೂಮಿ ಹಾಟ್ ಅವತಾರದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ನಡೆದ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಭೂಮಿ ಪಡ್ನೆಕರ್ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ. 'ಸಾಂಡ್ ಕಿ ಆಂಕ್' ಸಿನಿಮಾದ ನಟನೆಗಾಗಿ ಭೂಮಿಗೆ ಈ ಪ್ರಶಸ್ತಿ ಒಲಿದಿದೆ.
ಅಂದಹಾಗೆ, ಭೂಮಿ ಬಾಲಿವುಡ್ ನಲ್ಲಿ ತನ್ನ ವಿಭಿನ್ನ ಶೈಲಿಯ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈ ವರ್ಷ ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.


Click it and Unblock the Notifications











