For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಆಗ್ತಿದೆ ಖ್ಯಾತ ನೃತ್ಯ ನಿರ್ದೇಶಕಿಯ ಜೀವನ: 'ಮಾಸ್ಟರ್ ಜೀ' ಪಾತ್ರದಲ್ಲಿ ಯಾರು ನಟಿಸುತ್ತಾರೆ?

  |

  ಹಿಂದಿ ಸಿನಿಮಾರಂಗದ ಪ್ರಸಿದ್ಧ ನೃತ್ಯ ನಿರ್ದೇಶಕಿ ಸರೋಜ್ ಖಾನ್ ನಿಧನಹೊಂದಿ ಒಂದು ವರ್ಷ ಕಳೆದಿದೆ. 2020 ಜುಲೈ 3ರಂದು ಪ್ರಸಿದ್ಧ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಆನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಬಾಲಿವುಡ್ ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ ಖ್ಯಾತಿ ಅವರಿಗಿದೆ.

  ಬಾಲಿವುಡ್ ನ ಮಾಸ್ಟರ್ ಜೀ ಎಂದೇ ಖ್ಯಾತಿಗಳಿಸಿದ್ದ ಸರೋಜ್ ಖಾನ್ ಅವರ ಜೀವನ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಇಂದು ಪುಣ್ಯಸ್ಮರಣೆಯ ದಿನ ಸರೋಜ್ ಖಾನ್ ಬಯೋಪಿಕ್ ಘೋಷಣೆ ಮಾಡಿದ್ದಾರೆ ನಿರ್ಮಾಪಕ ಭೂಷಣ್ ಕುಮಾರ್. ಟಿ ಸಿರೀಸ್ ನಿರ್ಮಾಣದಲ್ಲಿ ಬಯೋಪಿಕ್ ಮೂಡಿಬರುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಭೂಷಣ್ ಕುಮಾರ್ ರಿವೀಲ್ ಮಾಡಿಲ್ಲ.

  ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಬಯೋಪಿಕ್ ಘೋಷಣೆಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಬಯೋಪಿಕ್ ಘೋಷಣೆ

  ಸರೋಜ್ ಖಾನ್ ಬೋಪಿಕ್ ನಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಈಗ ಅಭಿಮಾನಿಗಳ ಕುತೂಹಲ. ಸರೋಜ್ ಖಾನ್ ಸುಮಾರು 4 ದಶಕಗಳಿಗೂ ಅಧಿಕ ಕಾಲ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪುರುಷ ಅಧಿಪತ್ಯ ಸ್ಥಾಪಿಸಿದ ನೃತ್ಯ ಸಂಯೋಜನೆಯಲ್ಲಿ ಸರೋಜ್ ಖಾನ್ ನೃತ್ಯ ನಿರ್ದೇಶಕಿಯಾಗಿ ಚಿತ್ರರಂಗದಲ್ಲಿ ಬೆಳೆದು ಬಂದ ಪಯಣ ರೋಚಕವಾಗಿದೆ.


  ಬಾಲಕಲಾವಿದೆಯಾಗಿ ಸಿನಿಮಾರಂಗ ಪ್ರವೇಶ ಮಾಡಿದ ಸರೋಜ್ ಖಾನ್ ಬಳಿಕ ನೃತ್ಯ ಕಲಿತು, ನೃತ್ಯ ಸಂಯೋಜನೆಯಲ್ಲಿ ತೊಡಗಿಕೊಂಡರು. 'ಗೀತಾ ಮೇರಾ ನಾಮ್' ಸಿನಿಮಾದಲ್ಲಿ ನೃತ್ಯ ಸಂಯೋಜನೆ ಮಾಡುವ ಮೂಲಕ ನೃತ್ಯ ಸಂಯೋಜಕಿಯಾದರು.

  ನಟಿ ಶ್ರೀದೇವಿ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ ನಂತರ ಪ್ರಸಿದ್ಧ ಪಡೆದ ಸಜೋರ್ ಖಾನ್, 'ಮಿಸ್ಟರ್ ಇಂಡಿಯಾ' ಸಿನಿಮಾದ 'ಹವಾ ಹವಾಯಿ..', 'ನಗೀನಾ', 'ಚಾಂದ್ನಿ' ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಮಾಧುರಿ ದೀಕ್ಷಿತ್ ನಟನೆಯ 'ತೇಜಬ್' ಚಿತ್ರದಲ್ಲಿನ 'ಏಕ್ ದೋ ತೀನ್..', 'ಬೇಟಾ' ಸಿನಿಮಾದ 'ಧಕ್ ಧಕ್ ಕರ್ ನೇ ಲಗಾ..' ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada

  ಸುಮಾರು 2000ಕ್ಕಿಂತಲೂ ಅಧಿಕ ಹಾಡುಗಳಿಗೆ ಸರೋಜ್ ಖಾನ್ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇದೀಗ ಬಾಲಿವುಡ್ ನ ಮೊದಲ ನೃತ್ಯ ಸಂಯೋಜಕಿಯ ಜೀವನ ತೆರೆಮೇಲೆ ಬರ್ತಿರುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸರೋಜ್ ಖಾನ್ ಆಗಿ ಯಾರು ಮಿಂಚಲಿದ್ದಾರೆ ಎಂದು ಕಾದುನೋಡಬೇಕು.

  English summary
  Bhushan Kumar to Produce legendary Choreographer Saroj Khan's biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X