twitter
    For Quick Alerts
    ALLOW NOTIFICATIONS  
    For Daily Alerts

    ಸೌತ್ ಸಿನಿಮಾ ಅಬ್ಬರಕ್ಕೆ ಬಾಲಿವುಡ್‌ ಸ್ಟಾರ್ಸ್ ತತ್ತರ: ಬಾಕ್ಸಾಫೀಸ್‌ನಲ್ಲಿ ಸಾಲು ಸಾಲು ಸೋಲು!

    |

    ಬಾಲಿವುಡ್‌ ಚಿತ್ರರಂಗವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಕಾಲ ಮಾಯವಾಯ್ತು. ಬಾಲಿವುಡ್ ಮಂದಿ ಸೌತ್ ಸಿನಿಮಾಗಳ ಬಗ್ಗೆ ಅಚ್ಚರಿ ಪಡಿದ ದಿನಗಳು ಬಂದಾಯ್ತು. ಸದ್ಯ ವಿಶ್ವದಾದ್ಯಂತ ಅಬ್ಬರಿಸುತ್ತಾ ಇರುವುದು ಸೌತ್ ಸಿನಿಮಾಗಳೇ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರ ಅಲ್ಲ ಎನ್ನುವುದನ್ನು ಬಾಹುಬಲಿ, ಪುಷ್ಪ, RRR, ಕೆಜಿಎಫ್ ಅಂತಹ ಸಿನಿಮಾಗಳು ತೋರಿಸಿಕೊಟ್ಟಿವೆ.

    ಬಾಲಿವುಡ್‌ನ ದಂತಕಥೆಯಲ್ಲಿ ಸ್ಟಾರ್‌ಗಳಾಗಿ ಮಿಂಚುತ್ತಿರುವ ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಅವರ ಸಿನಿಮಾಗಳು ನೆಲಕಚ್ಚಿವೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ ಬಿಡುಗಡೆ ಮಾಡಿದ ಈ ಸ್ಟಾರ್ ನಟರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರದರ್ಶನ ನೀಡಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿವೆ.

    'ಕೆಜಿಎಫ್ 2': 30 ದಿನ, 5ನೇ ವಾರ, ಕಲೆಕ್ಷನ್ ಬೀಳೋ ಮಾತೇ ಇಲ್ಲ ಗುರು!'ಕೆಜಿಎಫ್ 2': 30 ದಿನ, 5ನೇ ವಾರ, ಕಲೆಕ್ಷನ್ ಬೀಳೋ ಮಾತೇ ಇಲ್ಲ ಗುರು!

    ಬಾಲಿವುಡ್‌ನ ಸ್ಟಾರ್ ನಟರ ಸಿನಿಮಾಗಳ ಬದಲಾಗಿ ಹಿಂದಿಗೆ ಡಬ್ ಮಾಡಲಾಗಿರುವ ದಕ್ಷಿಣ ಭಾರತದ ಪ್ರಾದೇಶಿಕ ಸಿನಿಮಾಗಳೇ ಹಿಂದಿ ಗಲ್ಲಾಪೆಟ್ಟಿಗೆಯನ್ನು ಬಾಚಿಕೊಂಡಿವೆ. ಗಣನೀಯ ಮಟ್ಟದಲ್ಲಿ ಸೌತ್ ಸಿನಿಮಾಗಳು ಬಾಲಿವುಡ್ ಬಾಕ್ಸಾಫೀಸ್ ಅನ್ನು ನುಂಗಿವೆ.

    'RRR', 'ಕೆಜಿಎಫ್ 2' ದಾಖಲೆ ಬಾಕ್ಸಾಫೀಸ್ ರೆಕಾರ್ಡ್!

    'RRR', 'ಕೆಜಿಎಫ್ 2' ದಾಖಲೆ ಬಾಕ್ಸಾಫೀಸ್ ರೆಕಾರ್ಡ್!

    ಈ ವರ್ಷ ಕೇವಲ ಎರಡು ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ಡಬ್ ಆಗಿವೆ. ಈ ಚಿತ್ರಗಳು ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾಗಿ 683 ಕೋಟಿ ಗಳಿಸಿವೆ. ಆ ಚಿತ್ರಗಳು ಬೇರೆ ಯಾವುದು ಅಲ್ಲ. ಒಂದು ತೆಲುಗಿನ 'RRR'. ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಜೊತೆಗೆ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯ ಇದೆ. ಇನ್ನೊಂದು ಕನ್ನಡದ ಟಾಪ್ ನಟ ಯಶ್ ಅಭಿನಯದ 'ಕೆಜಿಎಫ್ 2'.

    ಯಶ್ ಮುಂದಿನಕ್ಕೆ ಸಿನಿಮಾ ಮಾಡೋದು ನರ್ತನ್: ಅಧಿಕೃತ ಮಾಹಿತಿ ಯಾವಾಗ?ಯಶ್ ಮುಂದಿನಕ್ಕೆ ಸಿನಿಮಾ ಮಾಡೋದು ನರ್ತನ್: ಅಧಿಕೃತ ಮಾಹಿತಿ ಯಾವಾಗ?

    ವರ್ಷದಲ್ಲಿ 4 ಬಾಲಿವುಡ್ ಚಿತ್ರಗಳು ಡಮಾರ್!

    ವರ್ಷದಲ್ಲಿ 4 ಬಾಲಿವುಡ್ ಚಿತ್ರಗಳು ಡಮಾರ್!

    ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ', ಅಜಯ್ ದೇವಗನ್ ಮತ್ತು ಅಮಿತಾಬ್ ಬಚ್ಚನ್ ಅಭಿನಯದ 'ರನ್‌ವೇ 34', ಆಲಿಯಾ ಭಟ್ ಮತ್ತು ಅಜಯ್ ದೇವಗನ್ ನಟನೆಯ 'ಗಂಗೂಬಾಯಿ ಕಾಠಿಯಾವಾಡಿ', ಟೈಗರ್ ಶ್ರಾಫ್ ಅವರ 'ಹೀರೋಪಂತಿ 2'. ಈ ನಾಲ್ಕು ಬಾಲಿವುಡ್ ಚಲನಚಿತ್ರಗಳ ಬಾಲಿವುಡ್ ಬಾಕ್ಸಾಫೀಸ್ ಗಳಿಕೆ 230 ಕೋಟಿ ರೂ. ಎನ್ನಲಾಗಿದೆ. ಅದರೊಂದಿಗೆ ಸೌತ್ ಸಿನಿಮಾಗಳು ಮಾಡಿದ 683 ಕೋಟಿ ರೂ. ಜೊತೆಗೆ ಹೋಲಿಕೆ ಮಾಡಿದರೆ ಬಹಳ ಅಂತರ ಕಂಡು ಬರುತ್ತದೆ.

    ರಣ್ವೀರ್ ಸಿಂಗ್ ಸಿನಿಮಾ ಕೂಡ ಸದ್ದು ಮಾಡಲಿಲ್ಲ!

    ರಣ್ವೀರ್ ಸಿಂಗ್ ಸಿನಿಮಾ ಕೂಡ ಸದ್ದು ಮಾಡಲಿಲ್ಲ!

    ಇನ್ನು ರಣ್ವೀರ್ ಸಿಂಗ್ ಅಭಿಯದ 'ಜಯೇಶ್ಭಾಯ್ ಜೋರ್ದಾರ್' 90 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದು. ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ರಿಲೀಸ್ ಆದ ಮೊದಲ ದಿನ 3.5 ರಿಂದ 4 ಕೋಟಿ ವರೆಗೆ ಕಲೆಕ್ಷನ್ ಮಾಡಿದೆ. ಈ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಕುಸಿತ ಕಂಡಿದೆ. ಇದು ಬಾಲಿವುಡ್‌ಗೆ ದೊಡ್ಡ ಆಘಾತವೇ ಸರಿ. ಎರಡನೆ ದಿನಕ್ಕೆ 7-8 ಕೋಟಿ ರೂ. ಗಳಿಸಿದೆ.

    ಚೆನ್ನೈ ಬಾಕ್ಸಾಫಿಸ್ ಧೂಳಿಪಟ ಮಾಡಿದ 'ಕೆಜಿಎಫ್ 2', ರಜನಿ, ವಿಜಯ್, ಅಜಿತ್ ಹಿಂದಿಕ್ಕಿದ ಯಶ್!ಚೆನ್ನೈ ಬಾಕ್ಸಾಫಿಸ್ ಧೂಳಿಪಟ ಮಾಡಿದ 'ಕೆಜಿಎಫ್ 2', ರಜನಿ, ವಿಜಯ್, ಅಜಿತ್ ಹಿಂದಿಕ್ಕಿದ ಯಶ್!

    ಬಾಲಿವುಡ್ ಸ್ಟಾರ್ ಪವರ್ ಕಡಿಮೆ ಆಯ್ತಾ?

    ಬಾಲಿವುಡ್ ಸ್ಟಾರ್ ಪವರ್ ಕಡಿಮೆ ಆಯ್ತಾ?

    ಇನ್ನು ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಿಇಒ ಶಿಬಾಶಿಶ್ ಸರ್ಕಾರ್ "2010 ರಿಂದ ಹಾಲಿವುಡ್‌ನಲ್ಲಿ ಪ್ರಾರಂಭವಾದ ಟ್ರೆಂಡನ್ನು ಭಾರತ ಅನುಸರಿಸುತ್ತಿದೆ. ಮಾರ್ವೆಲ್, ಸ್ಪೈಡರ್‌ಮ್ಯಾನ್ ಮತ್ತು ಇತರ ಸರಣಿ ಚಿತ್ರಗಳು ದೊಡ್ಡ ಪರದೆಯ ಮೇಲೆ ಉತ್ತಮ ಪ್ರದರ್ಶನ ನೀಡಿವೆ. ಆದರೆ ಸಾಮಾಜಿಕ ಕಥೆ ಮತ್ತು ಹಾಸ್ಯ ಪ್ರಧಾನ ಚಿತ್ರಗಳು ಆಸ್ಕರ್ ಪ್ರಶಸ್ತಿನ್ನು ಗೆದ್ದರೂ, ಅವುಗಳಿಗೆ ಸೀಮಿತ ಪ್ರೇಕ್ಷಕರು ಇದ್ದಾರೆ. ಭಾರತದಲ್ಲಿಯೂ ಸಹ, 'RRR' ಅಥವಾ 'KGF 2'ಅಂತಹ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಇಂತಹ ಸಿನಿಮಾ ಬಿಟ್ಟು ಉಳಿದ ಚಿತ್ರಗಳು ಒಟಿಟಿಯಲ್ಲಿ ಬರುವ ತನಕ ಕಾಯಲು ಜನ ಸಿದ್ಧರಿದ್ದಾರೆ." ಎಂದು ಸರ್ಕಾರ್ ಹೇಳಿದ್ದಾರೆ. ಇನ್ನು ಸಿನಿಮಾ ವ್ಯಾಪಾರ ವಿಶ್ಲೇಷಕ ಕೋಮಲ್ ನಹ್ತಾ ಹೀಗೆ ಹೇಳಿದ್ದರೆ. "ಚಿತ್ರಕತೆ ಮತ್ತು ಕಥೆಯೇ ರಾಜ ಎಂಬುದು ಮತ್ತೆ ಸಾಬೀತಾಗಿದೆ. ಸ್ಟಾರ್ ಪವರ್ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಸ್ಟಾರ್ ಡಮ್, ಕಥೆಗಿಂತ ದೊಡ್ಡದಲ್ಲ ಹಾಗಾಗಿಯೇ ಬಾಲಿವುಡ್ ನಟರು ವಿಫಲರಾಗುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಗಳು ಧೃಡವಾದ ಕಥೆಯನ್ನು ಹೊಂದಿವೆ. ಆದ ಕಾರಣ ಹಿಂದಿ ಪ್ರೇಕ್ಷಕರಿಂದ ಆದ್ಯತೆ ಪಡೆದುಕೊಂಡಿವೆ. ಇದು ಖಡಿಂತವಾಗಿಯೂ ಬಾಲಿವುಡ್‌ನ ಹಲವು ಫ್ಲಾಪ್‌ಗಳೀಕೆ ಕಾರಣ ಆಗಲಿದೆ." ಎಂದಿದ್ದಾರೆ.

    English summary
    Bollywood Big Star Heroes Falter For South Indian Movies Cracking the Box Office, Know More,
    Monday, May 16, 2022, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X