'ಬಿಗ್ ಬಾಸ್' ಸ್ಪರ್ಧಿಗೆ ಹೊಡೆಯಿತು ಜಾಕ್ ಪಾಟ್: ಯಾರಿಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್.?

By Harshitha

ಕಿರುತೆರೆಯಲ್ಲಿಯೇ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'. ಒಮ್ಮೆ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದರೆ ಸಾಕು, ಸ್ಪರ್ಧಿಗಳ ಅದೃಷ್ಟ ಖುಲಾಯಿಸಿತು ಅಂತ್ಲೇ ಲೆಕ್ಕ ಎಂಬುದು ಹಲವರ ವ್ಯಾಖ್ಯಾನ. ಇದು 'ಒಳ್ಳೆ ಹುಡುಗ' ಪ್ರಥಮ್, 'ಕಿರಿಕ್' ಕೀರ್ತಿ ಸೇರಿದಂತೆ ಹಲವರ ವಿಷಯದಲ್ಲಿ ನಿಜ ಆಗಿದೆ.

ಇನ್ನೂ, ಹಿಂದಿಯ 'ಬಿಗ್ ಬಾಸ್' ವಿಷಯಕ್ಕೆ ಬಂದರೂ ಅಷ್ಟೇ. 'ಬಿಗ್ ಬಾಸ್' ಮನೆ ಹಲವರ ಬಾಳಲ್ಲಿ ಲಕ್ಕಿ ಆಗಿದೆ. ಈ ವರ್ಷ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದವರಿಗೆ ಒಂದು ಸುವರ್ಣಾವಕಾಶ ಹುಡುಕಿಕೊಂಡು ಬಂದಿದೆ.

'ಬಾಹುಬಲಿ' ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳುವ ಅವಕಾಶ 'ಬಿಗ್ ಬಾಸ್' ಸ್ಪರ್ಧಿಗೆ ಸಿಕ್ಕಿದೆ. ಯಾರಪ್ಪಾ ಆ ಸ್ಪರ್ಧಿ ಅಂತ ಕಣ್ಣು ಬಾಯಿ ಬಿಡುವ ಮುನ್ನ ಸಂಪೂರ್ಣ ವರದಿ ಓದ್ಕೊಂಡ್ ಬನ್ನಿ....

ಇವರೇ ನೋಡಿ 'ಲಕ್ಕಿ' ಸ್ಪರ್ಧಿ.!

ಇವರೇ ನೋಡಿ 'ಲಕ್ಕಿ' ಸ್ಪರ್ಧಿ.!

ಹಿಂದಿಯ 'ಬಿಗ್ ಬಾಸ್ 11' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಅರ್ಶಿ ಖಾನ್ ಗೆ ಇದೀಗ ಜಾಕ್ ಪಾಟ್ ಹೊಡೆದಿದೆ. 'ಬಾಹುಬಲಿ' ಪ್ರಭಾಸ್ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಗೋಲ್ಡನ್ ಚಾನ್ಸ್ ಅರ್ಶಿ ಖಾನ್ ಗೆ ಸಿಕ್ಕಿದೆ.

ಟ್ವೀಟ್ ಮಾಡಿದ್ದಾರೆ ಅರ್ಶಿ ಖಾನ್

ಟ್ವೀಟ್ ಮಾಡಿದ್ದಾರೆ ಅರ್ಶಿ ಖಾನ್

''ಮೆಗಾ ಸ್ಟಾರ್ ಪ್ರಭಾಸ್ ಜೊತೆಗೆ ನಟಿಸಲು ಅರ್ಶಿ ಖಾನ್ ಒಪ್ಪಿಗೆ ನೀಡಿದ್ದಾರೆ'' ಎಂದು ಅರ್ಶಿ ಖಾನ್ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಆಗಿದೆ. ಇದೇ ಟ್ವೀಟ್ ನಲ್ಲಿ ಕಲರ್ಸ್ ವಾಹಿನಿ, ಸಲ್ಮಾನ್ ಖಾನ್ ಹಾಗೂ 'ಬಿಗ್ ಬಾಸ್'ಗೆ ಧನ್ಯವಾದ ತಿಳಿಸಲಾಗಿದೆ.

ಪ್ರಭಾಸ್ ಜೊತೆಗೆ ಯಾವ ಸಿನಿಮಾ.?

ಪ್ರಭಾಸ್ ಜೊತೆಗೆ ಯಾವ ಸಿನಿಮಾ.?

ಅಷ್ಟಕ್ಕೂ, ಪ್ರಭಾಸ್ ಜೊತೆಗೆ ಅರ್ಶಿ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇನ್ನೂ ಚಿತ್ರತಂಡ ಕೂಡ ಅಫೀಶಿಯಲ್ ಆಗಿ ಅನೌನ್ಸ್ ಮಾಡಿಲ್ಲ.

ಖತರೋಂಕೆ ಖಿಲಾಡಿ ಆಗ್ತಾರಾ ಅರ್ಶಿ.?

ಖತರೋಂಕೆ ಖಿಲಾಡಿ ಆಗ್ತಾರಾ ಅರ್ಶಿ.?

'ಬಿಗ್ ಬಾಸ್' ಮುಗಿಯುತ್ತಿದ್ದ ಹಾಗೆ ಅರ್ಶಿ ಖಾನ್ ಗೆ 'ಖತರೋಂಕೆ ಖಿಲಾಡಿ' ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗುವಂತೆ ಆಫರ್ ನೀಡಲಾಗಿದ್ಯಂತೆ. ಇದಕ್ಕೆ ಅರ್ಶಿ ಒಪ್ಪಿಕೊಂಡಿದ್ದಾರಾ.? ಗೊತ್ತಿಲ್ಲ.

ಸ್ವಿಮ್ಮಿಂಗ್ ಕ್ಲಾಸ್ ಗೆ ಹೋಗುತ್ತಿರುವ ಅರ್ಶಿ ಖಾನ್

ಸ್ವಿಮ್ಮಿಂಗ್ ಕ್ಲಾಸ್ ಗೆ ಹೋಗುತ್ತಿರುವ ಅರ್ಶಿ ಖಾನ್

ಬ್ಯಾಕ್ ಟು ಬ್ಯಾಕ್ ಒಳ್ಳೊಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಅರ್ಶಿ ಖಾನ್ ಸದ್ಯ ಫಿಟ್ನೆಸ್ ಗಾಗಿ ಸ್ವಿಮ್ಮಿಂಗ್ ಕ್ಲಾಸ್ ಹಾಗೂ ಜಿಮ್ ಗೆ ಸೇರಿಕೊಂಡಿದ್ದಾರಂತೆ.

ಟಾಪ್ 5 ಹಂತಕ್ಕೂ ಬಂದಿರಲಿಲ್ಲ.!

ಟಾಪ್ 5 ಹಂತಕ್ಕೂ ಬಂದಿರಲಿಲ್ಲ.!

ಹಾಗ್ನೋಡಿದ್ರೆ, 'ಬಿಗ್ ಬಾಸ್ 11'ರಲ್ಲಿ ಅರ್ಶಿ ಖಾನ್ ಟಾಪ್ 5 ಹಂತಕ್ಕೂ ಬರಲಿಲ್ಲ. ಆದರೂ, ಕೆಲವು ವಾರಗಳ ಕಾಲ ಅರ್ಶಿ ಖಾನ್ ನೀಡಿದ ಮನರಂಜನೆ ಇಷ್ಟೆಲ್ಲ ಅವಕಾಶ ಬರಲು ಕಾರಣವಾಗಿದೆ

More from Filmibeat

English summary
Bigg Boss 11 Contestant Arshi Khan has taken her twitter account to announce that she has signed a movie with Prabhas as main lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X