»   » ಟೀಕೆಗೆ ಗುರಿಯಾದ 'ಬಿಗ್ ಬಾಸ್' ಸ್ಪರ್ಧಿಯ ವಿಚಿತ್ರ ಉಡುಪು

ಟೀಕೆಗೆ ಗುರಿಯಾದ 'ಬಿಗ್ ಬಾಸ್' ಸ್ಪರ್ಧಿಯ ವಿಚಿತ್ರ ಉಡುಪು

Posted By:
Subscribe to Filmibeat Kannada

''ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಪ್ಪಗಿರುವ ನಟಿಯರೇ ಹೆಚ್ಚು'' ಎಂದು ಹಿಂದಿಯ 'ಬಿಗ್ ಬಾಸ್ 11' ಕಾರ್ಯಕ್ರಮದಲ್ಲಿ ಏನೇನೋ ಬಡಬಡಾಯಿಸಿ ವಿವಾದಾತ್ಮಕವಾಗಿ ಗುರುತಿಸಿಕೊಂಡಿದ್ದ ಕಿರುತೆರೆ ನಟಿ ಹೀನಾ ಖಾನ್ ನಿಮಗೆ ನೆನಪಿರಬಹುದು.

ಪ್ರತಿ ಸ್ಪರ್ಧಿ ಶಿಲ್ಪಾ ಶಿಂಧೆ 'ಡ್ರಮ್' ತರಹ ಕಾಣ್ತಾರೆ, ತಾನು ಮಾತ್ರ ಸಿಕ್ಕಾಪಟ್ಟೆ ಸ್ಟೈಲಿಶ್ ಅಂತೆಲ್ಲ ಹೇಳಿ 'ಬಿಗ್ ಬಾಸ್' ಮನೆಯಲ್ಲಿ ಪೋಸ್ ಕೊಟ್ಟಿದ್ದ ಹೀನಾ ಖಾನ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಅದು ಆಕೆ ತೊಟ್ಟಿದ್ದ ಉಡುಗೆಯಿಂದಲೇ.!

ಸದಾ ಡಿಸೈನರ್ ಉಡುಪುಗಳನ್ನೇ ಧರಿಸುವ ನಟಿ ಹೀನಾ ಖಾನ್, ''ದಿ ಮೋಸ್ಟ್ ಸ್ಟೈಲಿಶ್ ಟೆಲಿವಿಷನ್ ಪರ್ಸನಾಲಿಟಿ ಆಫ್ ದಿ ಇಯರ್'' ಎಂಬ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆದ್ರೀಗ, ದುರಂತ ಅಂದ್ರೆ ಅದೇ 'ಸ್ಟೈಲಿಶ್ ಪರ್ಸನಾಲಿಟಿ' ಹೀನಾ ಖಾನ್ ತಮ್ಮ ಸ್ಟೈಲಿಶ್ ಗೌನ್ ನಿಂದಲೇ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಹೀನಾ ತೊಟ್ಟಿದ್ದ ವಿಚಿತ್ರ ಗೌನ್ ನೋಡಿ ನೆಟ್ಟಿಗರು ಹೀನಾ ಕಾಲೆಳೆಯುತ್ತಿದ್ದಾರೆ. ಮುಂದೆ ಓದಿರಿ....

ಹೀನಾ ಖಾನ್ ಉಡುಪು ನೋಡಿರಣ್ಣೋ..

ದುಬೈನಲ್ಲಿ ಕಾರ್ಯಕ್ರಮವೊಂದಕ್ಕೆ ಕಿರುತೆರೆ ನಟಿ ಹೀನಾ ಖಾನ್ ತೊಟ್ಟಿದ್ದ ಗೌನ್ ಇದು. ಬಿಳಿ ಬಣ್ಣದ ಸೆಮಿ-ಟ್ರಾನ್ಸ್ ಪೆರೆಂಟ್ ಗೌನ್ ಧರಿಸಿದ್ದ ಹೀನಾ ಖಾನ್, ತಮ್ಮ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ದಕ್ಷಿಣ ನಟಿಯರ ಬಗ್ಗೆ ಹೀನಾಯವಾಗಿ ಮಾತಾಡಿದ ಹೀನಾ ಖಾನ್ ಯಾರು.?

ಟ್ರೋಲ್ ಆದ ಹೀನಾ ಗೌನ್

ಹೀನಾ ಖಾನ್ ತೊಟ್ಟಿದ್ದ ಉಡುಪು ಫ್ಯಾಶನ್ ಡಿಸಾಸ್ಟರ್. ಅದೊಂದು ಬಕ್ವಾಸ್ ಡ್ರೆಸ್ ಅಂತ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ.

ದಕ್ಷಿಣ ನಟಿಯರ ಬಗ್ಗೆ 'ಕೀಳಾಗಿ' ಮಾತನಾಡಿದ 'ಬಿಗ್ ಬಾಸ್' ಸ್ಪರ್ಧಿ.!

ಮಿನಿ ಡ್ರೆಸ್ ಓಕೆ

ಬಿಳಿ ಬಣ್ಣ ಮಿನಿ ಡ್ರೆಸ್ ಓಕೆ. ಆದ್ರೆ, ಕೆಳಗೆ ಇರುವ ಫ್ರಿಲ್ಸ್ ನೆಟ್ ಬಾಸ್ಕೆಟ್ ತರಹ ಕಾಣುತ್ತಿದೆ. ಈ ಡ್ರೆಸ್ ನೋಡ್ತಿದ್ರೆ, ಅರ್ಧ ಡ್ರೆಸ್ ಕಿತ್ಹೋಗಿ ಕೆಳಗೆ ಬಿದ್ದಿರುವ ಹಾಗಿದೆ ಅಂತೆಲ್ಲ ಲೇವಡಿ ಮಾಡುತ್ತಿದ್ದಾರೆ ನೆಟ್ಟಿಗರು.

ಸ್ವಚ್ಛ ಭಾರತ ಅಭಿಯಾನ

ಕೆಲ ನೆಟ್ಟಿಗರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಈ ಡ್ರೆಸ್ ಸ್ವಚ್ಛ ಭಾರತ ಅಭಿಯಾನಕ್ಕೆ ಹೇಳಿ ಮಾಡಿಸಿದ ಹಾಗಿದೆ ಅಂತ ಹೀನಾ ಕಾಲೆಳೆಯುತ್ತಿದ್ದಾರೆ.

English summary
Bigg Boss 11 Finalist, TV Actress Hina Khan gets trolled for her dress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada