ಒಂದು ಫ್ರಿಡ್ಜ್ ಗೋಸ್ಕರ ನಟಿ ಹೀನಾ ಖಾನ್ ಹೀಗಾ ಮಾಡೋದು.?

By Harshitha

ಹಿಂದಿ ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅಂತಲೇ ಗುರುತಿಸಿಕೊಂಡಿರುವವರು ಹೀನಾ ಖಾನ್. ಹಾಗ್ನೋಡಿದ್ರೆ, ಹೀನಾ ಖಾನ್ ಅಭಿನಯಿಸಿರುವುದು ಒಂದೇ (ಯೇ ರಿಶ್ತಾ ಕ್ಯಾ ಕೆಹಲಾತಾ ಹೇ) ಧಾರಾವಾಹಿಯಲ್ಲಿ.

ಏಳು ವರ್ಷಗಳ ಕಾಲ ಒಂದೇ ಪಾತ್ರದಲ್ಲಿ ಕಾಣಿಸಿಕೊಂಡರೂ, ಸಂಭಾವನೆ ವಿಷಯದಲ್ಲಿ ಮಾತ್ರ ಹೀನಾ ಖಾನ್ ಟಾಪ್ ನಲ್ಲಿದ್ದಾರೆ. 'ಖತರೋಂಕೆ ಖಿಲಾಡಿ-8' ಹಾಗೂ 'ಬಿಗ್ ಬಾಸ್ 11' ರಿಯಾಲಿಟಿ ಶೋಗಳಲ್ಲಿ ರನ್ನರ್ ಅಪ್ ಆದ ಹೀನಾ ಖಾನ್ ಗೆ ಅಭಿಮಾನಿಗಳಿಗಿಂತ ವಿರೋಧಿಗಳೇ ಹೆಚ್ಚಾಗಿದ್ದಾರೆ.

ದಕ್ಷಿಣ ಭಾರತದ ನಟಿಯರ ಬಗ್ಗೆ ಹೀನಾ, ಹೀನಾಯವಾಗಿ ಕಾಮೆಂಟ್ ಮಾಡಿ, ಟ್ರೋಲ್ ಆಗಿದ್ದು ನಿಮಗೆ ನೆನಪಿರಬಹುದು. ಈಗ ಅದೇ ಹೀನಾ ಖಾನ್ ರನ್ನ ಟ್ವೀಟಿಗರು ಲೇವಡಿ ಮಾಡುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ಹೀನಾ ಖಾನ್, 'ತಾಯಂದಿರ ದಿನ'ದಂದು ಫ್ರಿಡ್ಜ್ ಗಾಗಿ ಮಾಡಿದ ಒಂದು ಟ್ವೀಟ್ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಹೀನಾ ಖಾನ್ ಮಾಡಿದ ಟ್ವೀಟ್ ಏನು.?

ಹೀನಾ ಖಾನ್ ಮಾಡಿದ ಟ್ವೀಟ್ ಏನು.?

''ಪ್ರತಿ ಹೆಜ್ಜೆಯಲ್ಲೂ ನನಗೆ ಬೆನ್ನೆಲುಬಾಗಿ ನಿಂತಿರುವ ನಿನಗೆ ಧನ್ಯವಾದ'' ಎಂದು ತಾಯಂದಿರ ದಿನದಂದು ತಮ್ಮ ತಾಯಿಗೆ ನಟಿ ಹೀನಾ ಖಾನ್ ಶುಭಾಶಯಗಳನ್ನು ತಿಳಿಸಿದರು. ಇಷ್ಟೇ ಆಗಿದ್ದರೆ ವಿವಾದ ಆಗುತ್ತಿರಲಿಲ್ಲ. ಟ್ವೀಟ್ ಜೊತೆಗೆ ಹೀನಾ ಖಾನ್ ಹಾಕಿದ ಎರಡು ಹ್ಯಾಶ್ ಟ್ಯಾಗ್ ಗಳು ಟ್ರೋಲ್ ಆಗಲು ಕಾರಣವಾಗಿದೆ.

ಯಾವುದು ಆ ಹ್ಯಾಶ್ ಟ್ಯಾಗ್.?

ಯಾವುದು ಆ ಹ್ಯಾಶ್ ಟ್ಯಾಗ್.?

#SamsungRefrigerator (ಸ್ಯಾಮ್ ಸಂಗ್ ರೆಫ್ರಿಜಿರೇಟರ್) #MomsLoveNonStop (ಮಾಮ್ ಲವ್ ನಾನ್ ಸ್ಟಾಪ್) ಎಂಬ ಎರಡು ಹ್ಯಾಶ್ ಟ್ಯಾಗ್ ಗಳನ್ನು ತಮ್ಮ ಟ್ವೀಟ್ ನಲ್ಲಿ ಹೀನಾ ಖಾನ್ ಬಳಸಿದ್ದರು. ಸಾಲದಕ್ಕೆ, ಸ್ಯಾಮ್ ಸಂಗ್ ಇಂಡಿಯಾ ಹ್ಯಾಂಡಲ್ ನೂ ತಮ್ಮ ಟ್ವೀಟ್ ನಲ್ಲಿ ಹಾಕಿದ್ದರು.

ಏನಿದಕ್ಕೆ ಕಾರಣ.?

ಏನಿದಕ್ಕೆ ಕಾರಣ.?

ತಾಯಂದಿರ ದಿನಾಚರಣೆಯಂದು ಸ್ಯಾಮ್ ಸಂಗ್ ಇಂಡಿಯಾ ಒಂದು ಕಾನ್ಟೆಸ್ಟ್ ಆಯೋಜಿಸಿತ್ತು. #MomsLoveNonStop ಎಂಬ ಹ್ಯಾಶ್ ಟ್ಯಾಗ್ ಬಳಸಿ, ತಮ್ಮ ತಾಯಿಯ ಮೇಲೆ ತಾವಿಟ್ಟಿರುವ ಪ್ರೀತಿಯನ್ನು ಫೋಟೋ ಅಥವಾ ವಿಡಿಯೋ ಮೂಲಕ ಟ್ವೀಟ್ ಮಾಡುವ ಅದೃಷ್ಟಶಾಲಿಗಳಿಗೆ ಸ್ಯಾಮ್ ಸಂಗ್ ರೆಫ್ರಿಜಿರೇಟರ್ ಉಡುಗೊರೆಯಾಗಿ ದೊರೆಯಲಿದೆ. ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು ಎಂದು ಸ್ಯಾಮ್ ಸಂಗ್ ಇಂಡಿಯಾ ಘೋಷಿಸಿತ್ತು. ಹಾಗಾದ್ರೆ, ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೀನಾ ಖಾನ್ ತಾಯಂದಿರ ದಿನ ಟ್ವೀಟ್ ಮಾಡಿದ್ರಾ ಅನ್ನೋದು ಟ್ವೀಟಿಗರ ಪ್ರಶ್ನೆ.

ಹೀನಾ ಖಾನ್ ಬಗ್ಗೆ ಲೇವಡಿ

ಹೀನಾ ಖಾನ್ ಬಗ್ಗೆ ಲೇವಡಿ

''ಸ್ಯಾಮ್ ಸಂಗ್ ಕಂಪನಿ ಫ್ರೀಯಾಗಿ ಫ್ರಿಡ್ಜ್ ಕೊಡ್ತಾರೆ ಅಂತ ಹೀನಾ ಖಾನ್ ಟ್ವೀಟ್ ಮಾಡಿದ್ರಾ.? ಹಾಗಾದ್ರೆ, ಆಕೆಯ ಬಳಿ ಇದ್ದ ಹಣ ಏನಾಯ್ತು.? ಪಿ.ಆರ್. ಗಳಿಗೆ ಹೀನಾ ಖಾನ್ ದುಡ್ಡು ಕೊಟ್ಟಿರಬೇಕು'' ಎಂದು ಟ್ವೀಟಿಗರು ಲೇವಡಿ ಮಾಡುತ್ತಿದ್ದಾರೆ.

ಇದೆಲ್ಲ ಬೇಕಿತ್ತಾ.?

ಇದೆಲ್ಲ ಬೇಕಿತ್ತಾ.?

''ತಮ್ಮ ತಾಯಿಗೆ ಹೀನಾ ಖಾನ್ ಸಿಂಪಲ್ ಆಗಿ ವಿಶ್ ಮಾಡಬಹುದಿತ್ತು. #SamsungRefrigerator ಹ್ಯಾಶ್ ಟ್ಯಾಗ್ ಯಾಕೆ ಬೇಕಾಗಿತ್ತು.? ಬಹುಶಃ ಲಾಭದ ದೃಷ್ಟಿಯಿಲ್ಲದೇ ಹೀನಾ ಖಾನ್ ಏನನ್ನೂ ಮಾಡುವುದಿಲ್ಲ ಅನಿಸುತ್ತದೆ. ತಾಯಿಯ ಪ್ರೀತಿಯನ್ನೂ ಜಾಹೀರಾತು ಮಾಡಿ ಫ್ರಿಡ್ಜ್ ತೆಗೆದುಕೊಳ್ಳಲು ಮುಂದಾಗಿರುವ ಹೀನಾ ರನ್ನ ನೋಡಿದರೆ ನಿಜಕ್ಕೂ ಅವರ ವ್ಯಕ್ತಿತ್ವ ನಕಲಿ ಎನಿಸುತ್ತದೆ'' ಎನ್ನುತ್ತಿದ್ದಾರೆ ಟ್ವೀಟಿಗರು.

ಎಡವಟ್ಟಿನ ಬಗ್ಗೆ ಮಾತಿಲ್ಲ, ಕಥೆಯಿಲ್ಲ.!

ಎಡವಟ್ಟಿನ ಬಗ್ಗೆ ಮಾತಿಲ್ಲ, ಕಥೆಯಿಲ್ಲ.!

ಟ್ವಿಟ್ಟರ್ ನಲ್ಲಿ ಇಷ್ಟೆಲ್ಲ ಟೀಕೆ ವ್ಯಕ್ತವಾಗುತ್ತಿದ್ದರೂ, ತಾವು ಮಾಡಿರುವ ಎಡವಟ್ಟಿನ ಬಗ್ಗೆ ಹೀನಾ ಖಾನ್ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.

More from Filmibeat

English summary
Bigg Boss 11 Finalist, TV Actress Hina Khan gets trolled for her tweet on Mother's day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X