Bigg Boss 17 Finale: ವೋಟಿಂಗ್ ರಿಸಲ್ಟ್‌ನಲ್ಲಿ ಎಲ್ಲರಿಗಿಂತ ಮುಂದೆ ಮುನಾವರ್ ಫಾರುಕಿ, ಅಂಕಿತಾ ಕೈ ತಪ್ಪುತ್ತಾ ಟ್ರೋಫಿ?
'ಬಿಗ್ ಬಾಸ್ ಹಿಂದಿ ಸೀಸನ್ 17' ಫಿನಾಲೆಗೆ ತಲುಪಿದೆ. ನಟಿ ಅಂಕಿತಾ ಲೋಖಂಡೆ, ಅರುಣ್ ಮಾಶೆಟ್ಟೆ, ಅಭಿಷೇಕ್ ಕುಮಾರ್, ಮುನಾವರ್ ಫಾರುಕಿ ಮತ್ತು ಮನ್ನಾರಾ ಚೋಪ್ರಾ ಫೈನಲಿಸ್ಟ್‌ಗಳಾಗಿದ್ದಾರೆ. ಈನ ಶೋ ಹಲವು ವಿವಾದಗಳಿಂದ ಚರ್ಚೆಗೆ ಒಳಗಾಗಿತ್ತು. ಗಂಡ- ಹೆಂಡತಿ ಜಗಳ, ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್‌ಗಳ ಗದ್ದಲದಿಂದ ಸಕತ್ ಸುದ್ದಿಯಾಗಿತ್ತು. ಈಗ ಫಿನಾಲೆ ಹಂತಕ್ಕೆ ಬಂದಿದೆ.
ಬಿಗ್ ಬಾಸ್ 17 ರ ಗ್ರ್ಯಾಂಡ್ ಫಿನಾಲೆ ಕಲರ್ಸ್ ಚಾನೆಲ್‌ನಲ್ಲಿ ಇಂದಿನಿಂದ ಆರಂಭವಾಗಲಿದೆ. ಬಿಗ್ ಬಾಸ್ ಸೀಸನ್ 17 ರ ಅಂತಿಮ ಸಂಚಿಕೆಯು ಜನವರಿ 28 ರಂದು ಸಂಜೆ 6 ರಿಂದ ಪ್ರಸಾರವಾಗಲಿದ್ದು, ಮಧ್ಯರಾತ್ರಿಯಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

ಬಿಗ್ ಬಾಸ್ 17 ರ ಫಲಿತಾಂಶ: ಮುನಾವರ್ ಫಾರುಕಿ ಮುನ್ನಡೆ?
ಈಗಾಗಲೇ ಕಾಮಿಡಿಯನ್, ಲಾಕಪ್ ಶೋನ ವಿಜೇತ ಮುನ್ನಾವರ್ ಫಾರೂಕಿ ಬಗ್ಗೆ ಒಳ್ಳೆ ಒಪಿನಿಯನ್ ಕ್ರಿಯೆಟ್ ಆಗಿದ್ದು, ವೋಟಿಂಗ್ ರಿಸಲ್ಟ್ ಕೂಡ ಅವರ ಪರವಾಗಿದೆ ಎನ್ನಲಾಗುತ್ತಿದೆ. ಬಾದ್‌ಶಾ, ರಫ್ತಾರ್, ಕಿಂಗ್, ಅವನೀತ್ ಕೌರ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮುನಾವರ್ ಫಾರುಕಿಯ ಬೆಂಬಲಕ್ಕೆ ಬಂದಿದ್ದಾರೆ. ಮುನ್ನಾವರ್‌ಗೆ ಮತ ನೀಡಿ ಅವರನ್ನು ಬಿಗ್ ಬಾಸ್ 17 ರ ವಿಜೇತರನ್ನಾಗಿ ಮಾಡುವಂತೆ ಅವರು ತಮ್ಮ ಅಭಿಮಾನಿಗಳಲ್ಲಿ ಮನವು ಮನವಿ ಮಾಡಿದ್ದಾರೆ.
ಇನ್ನು, ಗೂಗಲ್‌ನ ವೆಬ್‌ಸೈಟ್ ವೋಟಿಂಗ್, ಮೀಡಿಯಾ ಪೋಲ್ ಅಥವಾ ಎಕ್ಸ್ ಪೇಜ್ ಆಗಿರಲಿ ಎಲ್ಲೆಡೆ ಮುನಾವರ್ ಫಾರೂಕಿ ಮುಂಚೂಣಿಯಲ್ಲಿದ್ದಾರೆ. Studybizz ನಡೆಸಿದ ಸಮೀಕ್ಷೆ ಪ್ರಕಾರ ಇತರ ನಾಲ್ಕು ಫೈನಲಿಸ್ಟ್‌ಗಳಿಗಿಂತ ಮುನ್ನಾವರ್ ಫಾರೂಕಿ ಐದು ಪಟ್ಟು ಹೆಚ್ಚಿನ ಮತ ಪಡೆದಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ 17 ಅನ್ನು ಸುಲಭವಾಗಿ ಗೆಲ್ಲುತ್ತಾರೆ. ತಮ್ಮ ಗೆಲುವಿನ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸುತ್ತಾರೆ ಎನ್ನಲಾಗಿದೆ.

ನಟಿ ಅಂಕಿತಾ ಲೋಕಾಂಡೆ ಮೊದಲ ರನ್ನರ್ ಅಪ್..?
ಇನ್ನು, ಸಮೀಕ್ಷೆಗಳ ಪ್ರಕಾರ ಬಿಗ್ ಬಾಸ್ 17 ರ ವಿಜೇತ ಮತ್ತು ಮೊದಲ ರನ್ನರ್ ಅಪ್ ಯಾರು? ಎಂದು ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ ಉತ್ತರ ಸಿಕ್ಕಿದೆ. ಮಾಧ್ಯಮ ಸಮೀಕ್ಷೆಗಳನ್ನು ನಂಬುವುದಾದರೆ, ಮೊದಲ ರನ್ನರ್ ಅಪ್ ಸ್ಥಾನಕ್ಕಾಗಿ ಅಭಿಷೇಕ್ ಕುಮಾರ್ ಮತ್ತು ಅಂಕಿತಾ ಲೋಖಂಡೆ ನಡುವೆ ತೀವ್ರ ಗುದ್ದಾಟವೇ ನಡೆಯುತ್ತಿದೆ.
StudyBizz.com ನಡೆಸಿದ ಸಮೀಕ್ಷೆಯ ಪ್ರಕಾರ ಅಭಿಷೇಕ್ ಕುಮಾರ್ ಅವರು ಅಂಕಿತಾ ಲೋಖಂಡೆ ಅವರನ್ನು ಸೋಲಿಸಿ BB 17 ರ ಮೊದಲ ರನ್ನರ್ ಅಪ್ ಆಗುವ ಸಾಧ್ಯತೆಯಿದೆ. ಶಾಲಿನ್ ಭಾನೋಟ್, ಅಂಕಿತ್ ಗುಪ್ತಾ, ಪ್ರಿಯಾಂಕಾ ಚಾಹರ್ ಚೌಧರಿ, ಈಶಾ ಸಿಂಗ್ ಮುಂತಾದವರು ಬಿಗ್ ಬಾಸ್ 17 ರ ಫೈನಲ್‌ನಲ್ಲಿ ಅಭಿಷೇಕ್ ಕುಮಾರ್ ಅವರನ್ನು ಬೆಂಬಲಿಸುತ್ತಿದ್ದಾರೆ.
ಇನ್ನು, ಈ ಬಾರಿಯ ಬಿಗ್ ಬಾಸ್ 17 ರಲ್ಲಿ ಭಾಗಿಯಾಗಿದ್ದ ಐಶ್ವರ್ಯಾ ಶರ್ಮಾ, ನೀಲ್ ಭಟ್, ಇಶಾ ಮಾಲ್ವಿಯಾ, ಸಮರ್ಥ್ ಜುರೆಲ್ ಮತ್ತು ಇತರ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಫೈನಲ್ ಸ್ಟೇಜ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಸಕತ್ ಗ್ರ್ಯಾಂಡ್ ಆಗಿರುವುದು ಸತ್ಯ.


Click it and Unblock the Notifications











