ಬಿಗ್ ಬಾಸ್ 17: ದೀಪಿಕಾ ಪಡುಕೋಣೆ ಅಭಿನಯದ ಪ್ರಸಿದ್ಧ ಹಾಡಿಗೆ ನಟಿ ಕಂಗನಾ ರನೌತ್, ಸಲ್ಮಾನ್ ಖಾನ್ ನೃತ್ಯ

ಎಲ್ಲಾ ಭಾಷೆಯ ಟೆಲಿವಿಷನ್‌ಗಳಲ್ಲಿಯೂ ಬಿಗ್ ಬಾಸ್ ಪ್ರಸಾರವಾಗುತ್ತಿದ್ದು, ಈಗಾಗಲೇ ಎಲ್ಲಾ ಕಡೆ ಅದರ ಹವ ಮುಂದುವರೆಯುತ್ತಿದೆ. ಹಿಂದಿ ಬಿಗ್ ಬಾಸ್ ಸೀಸನ್ 17 ಆರಂಭವಾಗಿದ್ದು, ಈ ಬಾರಿಯ ಸಂಚಿಕೆಯಲ್ಲಿ ನಟಿ ಕಂಗನಾ ರನೌತ್ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ವೇದಿಕೆಯಲ್ಲಿ ಸಕತ್ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಕಲರ್ಸ್ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಸಲ್ಮಾನ್ ಖಾನ್‌ಗೂ ಮುಂಚಿತವಾಗಿ ವೇದಿಕೆಗೆ ಬರುವ ನಟಿ ಕಂಗನಾ, ಸಲ್ಮಾನ್ ಖಾನ್ ಪರವಾಗಿ ತನ್ನನ್ನು ತಾನೇ ಪರಿಚಯಿಸಿಕೊಳ್ಳುವುದನ್ನು ತೋರಿಸುತ್ತದೆ. ನಂತರ ತ ಫ್ಲರ್ಟಿಂಗ್ ಬಗ್ಗೆ ಇಬ್ಬರ ನಡುವೆ ಮಾತುಕತೆ ನಡೆಯುತ್ತದೆ. ಇಬ್ಬರು ದೀಪಿಕಾ ಪಡುಕೋಣೆ ಅವರ ಗೋಲಿಯೋನ್ ಕಿ ರಾಸ್ಲೀಲಾ ರಾಮ್ ಲೀಲಾ ಚಿತ್ರದ ಗಾರ್ಬಾ ಹಾಡಾದ ನಾಗಡಾ ಹಾಡಿಗೆ ನೃತ್ಯ ಮಾಡುವುದು ಫ್ರೋಮೋದಲ್ಲಿದೆ.

Bigg Boss 17: Kangana Ranaut and Salman Khan danced to Deepika Padukones song

ಬಿಗ್ ಬಾಸ್ 17 ರಲ್ಲಿ ತನ್ನನ್ನು ತಾನೇ ಹೊಗಳಿಕೊಳ್ಳುವ ನಟಿ ಕಂಗನಾ!

ಕಲರ್ಸ್ ವಾಹಿನಿ ಪ್ರೋಮೋವನ್ನು ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ, "ವೀಕೆಂಡ್‌ ಕ ವಾರ್‌ನಲ್ಲಿ ಈ ಬಾರಿ ಮನರಂಜನೆ ಉತ್ತುಂಗದಲ್ಲಿರಲಿದೆ. ಏಕೆಂದರೆ ಮನರಂಜನೆಯ ರಾಣಿ ವೇದಿಕೆಯ ಮೇಲೆ ಬರುತ್ತಿದ್ದಾರೆ" ಎಂದಿದೆ.

ಸಲ್ಮಾನ್ ವೇದಿಕೆಗೆ ಬರುವ ಮೊದಲು ಕಂಗನಾ ಸಲ್ಮಾನ್ ಖಾನ್ ಅವರ ಶೈಲಿಯಲ್ಲಿ ತನ್ನನ್ನು ಪರಿಚಯಿಸಿಕೊಳ್ಳುವುದರೊಂದಿಗೆ ಪ್ರೋಮೋ ಆರಂಭವಾಗುತ್ತದೆ. ಸಲ್ಮಾನ್ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೊದಲು ಕಂಗನಾ, " ಭಾರತದ ಪ್ರಸಿದ್ಧ ಮತ್ತು ಅತ್ಯುತ್ತಮ ನಟಿ ಕಂಗನಾ ರನೌತ್ ಅವರಿಗೆ ವೇದಿಕೆಗೆ ಸ್ವಾಗತ" ಎಂದು ಕರೆದುಕೊಳ್ಳುತ್ತಾರೆ.

ನಟಿ ಕಂಗನಾ ತಮ್ಮ ಮುಂಬರುವ ಸಿನಿಮಾ ತೇಜಸ್ ಪ್ರಚಾರಕ್ಕೆ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೇಜಸ್ ಸಿನಿಮಾ ಅಕ್ಟೋಬರ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಸಲ್ಮಾನ್ ಮತ್ತು ಕಂಗನಾ ತೇಜಸ್ ಬಗ್ಗೆ ಮಾತನಾಡಿದ್ದು, ಚಿತ್ರದ ಘೋಷ ವಾಕ್ಯವಾದ "ನೀವು ನಮ್ಮನ್ನು ಪ್ರಚೋದಿಸಿದರೆ, ನಾವು ನಿಮ್ಮನ್ನು ಬಿಡುವುದಿಲ್ಲ" ಎಂಬುದನ್ನು ರಿಪೀಟ್ ಮಾಡಿದ್ದಾರೆ.

Bigg Boss 17: Kangana Ranaut and Salman Khan danced to Deepika Padukones song

ಫ್ಲರ್ಟಿಂಗ್ ಕೌಶಲ್ಯದ ಬಗ್ಗೆ ಸಲ್ಮಾನ್ ಖಾನ್, ಕಂಗನಾ ಮಾತು

ಸಿನಿಮಾ ಬಗ್ಗೆ ಮಾತನಾಡಿದ ಬಳಿಕ ಸಹನಟರು ತಮ್ಮ ಜೊತೆಗೆ ಫ್ಲರ್ಟಿಂಗ್ ಮಾಡಿದರೇ ಏನು ಮಾಡುತ್ತೀರಿ ಎಂದು ಸಲ್ಮಾನ್ ಖಾನ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕಂಗನಾ ರನೌತ್, "ಸಹನಟ ನಿಮ್ಮಂತೆ ಸುಂದರವಾಗಿದ್ದರೆ, ನಾನು ನನ್ನ ಹೃದಯದಿಂದ ಪ್ರತಿಕ್ರಿಯಿಸುತ್ತೇನೆ" ಎಂದು ಕೀಟಲೆ ಮಾಡಿದ್ದಾರೆ. ಇದಲ್ಲದೇ ನೀವು ಕೂಡ ನಿಮ್ಮ ಫ್ಲರ್ಟಿಂಗ್ ಕೌಶಲ್ಯ ಒಮ್ಮೆ ತೋರಿಸಿ ಎಂದು ಕೇಳಿದ್ದಾರೆ.

ಕಂಗನಾ ರನೌತ್ ಸೌಂರ್ಯ ಹೊಗಳಿದ ಸಲ್ಮಾನ್ ಖಾನ್, ಮುಂದಿನ "10 ವರ್ಷಗಳ ನಂತರ ನೀವು ಏನು ಮಾಡುತ್ತಿರಿ" ಎಂದು ಅಚ್ಚರಿಯ ಸವಾಲು ಹಾಕಿದ್ದಾರೆ. ಇದಾದ ಬಳಿಕ ಇಬ್ಬರೂ ಗೋಲಿಯೋನ್ ಕಿ ರಾಸ್ಲೀಲಾ ರಾಮ್ ಲೀಲಾ ಸಿನಿಮಾದ ಪ್ರಸಿದ್ಧ ನಾಗಡಾ ಹಾಡಿಗೆ ಗಾರ್ಬಾ ನೃತ್ಯ ಮಾಡಿದ್ದಾರೆ. ರಾಮ್ ಲೀಲಾ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಇನ್ನು, ಪ್ರೋಮೋಗೆ ಹಲವು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕಂಗನಾ ರನೌತ್ ಅವರು ಮುನಾವರ್ ಫಾರುಕಿಯೊಂದಿಗೆ ಮಾತನಾಡುವುದನ್ನು ನೋಡಲು ಉತ್ಸುಕರಾಗಿದ್ದೇವೆ ಎಂದು ಕಾಮೆಂಟ್ ವಿಭಾಗದಲ್ಲಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಪ್ರೋಮೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ಕಂಗನಾ ಮತ್ತು ಮುನಾವರ್ ಅವರ ಸಂವಹನ ನೋಡಲು ನಾನು ಕಾಯುತ್ತಿದ್ದೇನೆ" ಎಂದು ಬರೆದಿದ್ದಾರೆ.

ಮುನಾವರ್ ಫಾರುಕಿ ಅವರು ಕಂಗನಾ ರನೌತ್ ಹೋಸ್ಟ್ ಮಾಡಿದ ರಿಯಾಲಿಟಿ ಶೋ ಲಾಕ್ ಅಪ್‌ನ ವಿಜೇತರಾಗಿದ್ದಾರೆ. ಒಮ್ಮೆ ಅವರ ಸಹೋದರಿ ರಂಗೋಲಿ ರನೌತ್ ಅವರನ್ನು ತಮ್ಮ ಮ್ಯಾನೇಜರ್ ಆಗಿ ನೇಮಿಸಿದ್ದಕ್ಕಾಗಿ ಕಂಗನಾ ಅವರ ಮೇಲೆ ಮುನಾವರ್ ಕೋಪ ಮಾಡಿಕೊಂಡಿದ್ದರು.

More from Filmibeat

English summary
Actress Kangana Ranaut at Bigg Boss 17 stage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X