ಶ್ರೇಯಸ್ ಅಯ್ಯರ್ ಜೊತೆ ನನ್ನ ಮದುವೆಯಾಗಿದೆ, ನಮಗೆ ಮಕ್ಕಳಿವೆ- ಶಾಕಿಂಗ್ ನ್ಯೂಸ್ ಹೇಳಿದ ನಟಿ..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಂತಹ ಉದ್ಯಮಗಳಲ್ಲಿ ಹಲವಾರು ಜನ ಹಲವರಿಗೆ ಅಭಿಮಾನಿಗಳಾಗಿದ್ದಾರೆ. ತಾರೆಯರು ಕ್ರಿಕೆಟ್ ಆಟಗಾರರ ಆಟಕ್ಕೆ ಮನ ಸೋತಿದ್ದರೆ, ಕ್ರಿಕೆಟ್ ಪ್ಲೇಯರ್ಸ್ ಸ್ಟಾರ್‌ಗಳ ಅಭಿನಯಕ್ಕೆ ಮನ ಸೋತಿದ್ದಾರೆ. ಅಭಿಮಾನಿಗಳಾಗಿದ್ದಾರೆ. ಒಟ್ನಲ್ಲಿ ಇಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಅಭಿಮಾನಿಗಳೇ.
ಆದರೆ ಇದನ್ನು ಅಭಿಮಾನ ಎನ್ನಬೇಕಾ ? ಅಂಧಾಭಿಮಾನ ಎನ್ನಬೇಕಾ ? ಗೊತ್ತಿಲ್ಲ. ಇಲ್ಲೊಬ್ಬ ಚೆಲುವೆ ನಾನು ಶ್ರೇಯಸ್ ಅಯ್ಯರ್ ಪತ್ನಿ ಎಂದು ಹೇಳಿದ್ದಾರೆ. ಅವರಿಂದ ನನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಕೂಡ ಹೇಳಿದ್ದಾರೆ.

ಅರೇ ಶ್ರೇಯಸ್ ಐಯ್ಯರ್‌ಗೆ ಇನ್ನೂ ಮದುವೆಯೇ ಆಗಿಲ್ಲ. ಈಕೆ ಯಾರು ..? ಎಂಬ ಪ್ರಶ್ನೆ ಈ ಸುದ್ದಿಯನ್ನು ಓದುವಾಗ ಮೂಡುವುದು ಸಹಜ. ಪ್ರಚಾರಕ್ಕೆ ಹೇಳುತ್ತಿರಬಹುದು ಎನ್ನುವ ಅನುಮಾನ ಮೂಡುವುದು ಕೂಡ ಸಹಜ. ಉದ್ದೇಶವೇನು ಎನ್ನುವುದು ಆಕೆಗೆ ಗೊತ್ತಾದರೂ ಸದ್ಯ ಈ ಹೇಳಿಕೆಯ ಕುರಿತು ಚಿತ್ರರಂಗದಲ್ಲಿ ಮತ್ತು ಕ್ರೀಡಾ ಜಗತ್ತಿನಲ್ಲಿ ಚರ್ಚೆಯಾಗುತ್ತಿದೆ. ಚೆಲುವೆಯ ಮಾತು ಅನೇಕರ ಹುಬ್ಬೇರಿಸಿದೆ.
ಅಂದ್ಹಾಗೇ ಶ್ರೇಯಸ್ ಅಯ್ಯರ್ ನನ್ನ ಗಂಡ ಎಂದು ಹೇಳಿರುವ ಚೆಲುವೆಯ ಹೆಸರು ಎಡಿನ್ ರೋಸ್. ಆಗಸ್ಟ್ 20-1998ರಲ್ಲಿ ಹುಟ್ಟಿದ ಎಡಿನ್ ಬಾಲ್ಯವೆಲ್ಲ ಕಳೆದಿದ್ದು ದುಬೈನಲ್ಲಿ. ಮಯನ್ಮಾರನ ಬರ್ಮಾ ಮತ್ತು ನಮ್ಮ ಕರ್ನಾಟಕದಲ್ಲಿ ಕೂಡ ಈ ಬೆಡಗಿಯ ಬೇರುಗಳಿವೆ.
ಬಣ್ಣದ ಲೋಕದ ಮೇಲೀನ ಮೋಹದಿಂದ 20ರ ಹರೆಯದಲ್ಲಿ ಅವಕಾಶಗಳನ್ನು ಅರಸಿಕೊಂಡು ಮುಂಬೈಗೆ ಬಂದ ಎಡಿನ್ ರೋಸ್ ಬಿ ಗ್ರೇಡ್ ವೆಬ್ ಸರಣಿಯೆಂದೇ ಜನಪ್ರಿಯಗೊಂಡಿರುವ ಗಂಧಿ ಬಾತ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
ಆ ನಂತರ ಸಿನೆಪ್ರೈಮ್‌ನ ಗುಡ್ ಗರ್ಲ್ಸ್ -ಬೈಡ್ಸ್ ನೈಟ್ ಎಂಬ ಮತ್ತೊಂದು ವೆಬ್ ಸರಣಿಯನ್ನು ಮಾಡಿದ ಎಡಿನ್ ರೋಸ್ ತೆಲುಗಿನ ಮಾಸ್ ಮಹಾರಾಜಾ ರವಿತೇಜಾ ಅಭಿನಯದ ರಾವಣಾಸುರ ಚಿತ್ರದಲ್ಲಿ ಹಾಡೊಂದಕ್ಕೆ ಸೊಂಟವನ್ನು ಕೂಡ ಬಳುಕಿಸಿದರು. ಇದರ ನಡುವೆ ಹಿಂದಿಯ ಬಿಗ್ ಬಾಸ್ ಸೀಸನ್ 18ರಲ್ಲಿ ಕೂಡ ಎಡಿನ್ ರೋಸ್ ಕಾಣಿಸಿಕೊಂಡರು.
ಇಂಥಾ ಎಡಿನ್ ರೋಸ್ ಫಿಲ್ಮಿಜ್ಞಾನ್‌ಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಶ್ರೇಯಸ್ ಅಯ್ಯರ್ ಬಗ್ಗೆ ಎಡಿನ್ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಎಡಿನ್ ನಾನು ಮಾನಸಿಕವಾಗಿ ಶ್ರೇಯಸ್ ಅಯ್ಯರ್ ಅವರನ್ನು ಮದುವೆಯಾಗಿದ್ದೇನೆ. ನಮಗೆ ಈಗಾಗಲೇ ಮಕ್ಕಳಿದ್ದು ನಾನು ಅವರ ಮಕ್ಕಳ ತಾಯಿಯೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಅವರ ನಮ್ರತೆ, ಅವರ ಸಮರ್ಪಣಾ ಭಾವ ಅವರ ವ್ಯಕ್ತಿತ್ವ ನನಗೆ ತುಂಬಾ ಪ್ರೇರಣೆ ನೀಡುತ್ತೆ ಎಂದಿರುವ ಎಡಿನ್ ರೋಸ್ ಅವರ ಗಡ್ಡದ ಲುಕ್ ನನಗೆ ತುಂಬಾ ಇಷ್ಟ ಅವರು ಕ್ರಿಕೆಟ್ ಮೈದಾನದಲ್ಲಿ ಭಾರತದ ಹೆಮ್ಮೆಯ ರಾಯಭಾರಿ ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಶನದಲ್ಲಿ ಯಾರ ಜೊತೆ ಮದುವೆಯಾಗಲು ಬಯಸುತ್ತೀರಾ, ಯಾರ ಜೊತೆ ಡೇಟ್ ಹೋಗ್ತೀರಾ, ಯಾರ್ ಜೊತೆ ಹುಕ್‌ಅಪ್ ಮಾಡಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡಿರುವ ಆಗಲೇ ಹೇಳಿದಂತೆ ಶ್ರೇಯಸ್ ಅಯ್ಯರ್ ಜೊತೆ ಮದುವೆಯಾಗುತ್ತೇನೆ, ಶುಭಮನ್ ಗಿಲ್ ಅವರ ಜೊತೆ ಹುಕ್‌ಅಪ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೊತೆ ಡೇಟಿಂಗ್ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಒಟ್ನಲ್ಲಿ ಸದ್ಯ ಶ್ರೇಯಸ್ ಅಯ್ಯರ್ ಅವರಂದರೆ ತಮಗೆ ಎಷ್ಟು ಇಷ್ಟ ಎನ್ನುವುದನ್ನು ಎಡಿನ್ ರೋಸ್ ಹೇಳಿದ್ದಾರೆ. ಈಗಾಗಲೇ ಹಲವರ ಜೊತೆ ಶ್ರೇಯಸ್ ಅಯ್ಯರ್ ಹೆಸರು ಕೇಳಿ ಬಂದಿದೆ. ಚಹಲ್ ಮಾಜಿ ಪತ್ನಿ ಧನಶ್ರೀ ಜೊತೆ ಕೂಡ ಶ್ರೇಯಸ್ ಹೆಸರು ಹಿಂದೆ ತಳುಕಿ ಹಾಕಿಕೊಂಡಿದ್ದಿದೆ. ಇದೀಗ ಶ್ರೇಯಸ್ ಅಯ್ಯರ್ ಹಿಂದೆ ಎಡಿನ್ ರೋಸ್ ಬಿದ್ದಿದ್ದಾರೆ. ಎಡಿನ್ ರೋಸ್ ಅವರ ಈ ಮಾತುಗಳಿಗೆ ಶ್ರೇಯಸ್ ಹೇಗೆ ರಿಯ್ಯಾಕ್ಟ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











