ಹಣ್ಣು ಹಣ್ಣು ಮುದುಕನಾದರೂ ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟಿದ, ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಫರ್ಧಿ..!
ಚಿತ್ರರಂಗದಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಇಲ್ಲಿ ಪ್ರಚಾರದ ಹುಚ್ಚಿಗೆ ಬಂದರೆ, ಇನ್ನೂ ಹಲವರು ಹೆಣ್ಣಿನ ಚಪಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಾರೆ. ಈ ಕಾರಣಕ್ಕೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದಿದ್ದಾರೆ.
ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಬಿಗ್ ಬಾಸ್ 18ರಲ್ಲಿ ಕಾಣಿಸಿಕೊಂಡಿದ್ದ ಎಡಿನ್ ರೋಸ್ ಮತ್ತೊಂದು ಉದಾಹರಣೆ.

ಹೌದು, ಎಡಿನ್ ರೋಸ್ ದುಬೈನ ಚೆಲುವೆ. ಕನಸೆಂಬ ಕುದುರೆಯ ಬೆನ್ನೇರಿ ಮುಂಬೈಗೆ ಬಂದ ಎಡಿನ್ ರೋಸ್ ಗಂಧಿ ಬಾತ್ ಸರಣಿಯ ಮೂಲಕ ಅನೇಕರ ಹೃದಯಕ್ಕೆ ಕನ್ನ ಹಾಕಿದರು. ಆ ನಂತರ ತೆಲುಗಿನ ರಾವಣಾಸುರ ಚಿತ್ರದಲ್ಲಿ ಕಾಣಿಸಿಕೊಂಡ ಎಡಿನ್ ರೋಸ್ ಬಿಗ್ ಬಾಸ್ ಸೀಸನ್ 18ರಲ್ಲಿ ಕೂಡ ಭಾಗಿಯಾದರು.
ಇಂಥಾ ಎಡಿನ್ ರೋಸ್ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಸಾಯುವ ಹಂತದಲ್ಲಿ ವ್ಯಕ್ತಿ ಇದ್ದರೂ ಕೂಡ ಅವನ ಚಪಲ ಕಡಿಮೆ ಇರಲಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ರೆಡ್ ಎಫ್ ಎಂಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಎಡಿನ್ ರೋಸ್ ನಾನು ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. ಆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಆ ವ್ಯಕ್ತಿ ಸೀದಾ ಬಂದು ನನ್ನ ತೊಡೆಯ ಮೇಲೆ ಕೈಯಾಡಿಸಿದ ಎಂದಿದ್ದಾರೆ. ಇನ್ನು, ನನಗೆ ಕಥೆ ಇಷ್ಟವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಆ ಚಿತ್ರದಲ್ಲಿ ದೊಡ್ಡ ದೊಡ್ಡ ತಾರೆಯರು ಇದ್ದರು ಎಂದಿರುವ ಎಡಿನ್ ರೋಸ್ ಮರುದಿನ ಬಂದು ಮತ್ತೆ ಭೇಟಿ ಮಾಡುವಂತೆ ನನಗೆ ಆ ವ್ಯಕ್ತಿ ಹೇಳಿದ ಎಂದಿದ್ದಾರೆ. ಮೊದಲ ಭೇಟಿ ನಡೆದಿದ್ದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆದರೆ ಎರಡನೇ ಭೇಟಿಗೆ ಆತ ಸಂಜೆ 07ಗಂಟೆಗೆ ನನಗೆ ಬರುವಂತೆ ಹೇಳಿದ ಎಂದು ಹೇಳಿದ್ದಾರೆ.
ಆ ನಂತರ ಆ ವ್ಯಕ್ತಿ ಹೇಳಿದಂತೆಯೇ ನಾನು 7 ಗಂಟೆಗೆ ಅವನ ಮನೆಗೆ ಹೋದೆ, ಮನೆಯಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಅಲ್ಲಿ ಕ್ಯಾಮರಾಗಳೇ ಇದ್ದವು ಎಂದಿರುವ ಎಡಿನ್ ಆದರೂ ಕೂಡ ಆ ವ್ಯಕ್ತಿ ನನ್ನ ಹತ್ತಿರ ಬಂದ ನನ್ನ ತೊಡೆಯ ಮೇಲೆ ಕೈಯಾಡಿಸಿದ, ಆ ವ್ಯಕ್ತಿ ಹಣ್ಣು ಹಣ್ಣು ಮುದುಕನಾಗಿದ್ದ ಯಾವ ಕ್ಷಣದಲ್ಲಾದರೂ ಆತ ಸಾಯುವಂತೆ ಇದ್ದ ಆದರೂ ಕೂಡ ಅವನ ಚಪಲ ಕಡಿಮೆ ಇರಲಿಲ್ಲ ಎಂದು ಹೇಳಿದ್ದಾರೆ. ಆ ವ್ಯಕ್ತಿಯ ವರ್ತನೆ ಕಂಡು ಐದು ನಿಮಿಷಗಳ ಕಾಲ ನಾನು ನಲುಗಿ ಹೋಗಿದ್ದೇ, ನನ್ನ ಕುತ್ತಿಗೆಯ ಬಳಿ ಬಂದಾಗ ನನಗೆ ಧೈರ್ಯ ಬಂದು ನಾನು ಪ್ರತಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಮುಂದುವರೆದು ಆ ನಂತರ ಆ ಒಪ್ಪಂದವನ್ನು ಅವನ ಕಣ್ಣೇದುರೇ ಹರಿದು ಅವನ ಮುಖಕ್ಕೆ ಬಿಸಾಕಿ ನಾನು ಅಲ್ಲಿಂದ ಹೊರ ಬಂದೆ ಎಂದಿರುವ ಎಡಿನ್ ರೋಸ್ ನಂತರ ನಾನು ಆ ವ್ಯಕ್ತಿಯನ್ನು ಬ್ಲಾಕ್ ಮಾಡಿದೆ ಎಂದು ಹೇಳಿದ್ದಾರೆ. ಇನ್ನು ಈ ಕುರಿತು ಹೆಚ್ಚು ಮಾತನಾಡಿದರೆ ಜನ ನಮ್ಮ ಬಗ್ಗೆಯೇ ಕೀಳಾಗಿ ಮಾತನಾಡುತ್ತಾರೆ ಎಂದಿರುವ ಎಡಿನ್ ರೋಸ್ ಚಿತ್ರರಂಗ ಕೂಡ ಅವಕಾಶಗಳನ್ನು ನೀಡುವುದಿಲ್ಲ ಹೀಗಾಗಿ ಮಾತನಾಡುವುದಕ್ಕಿಂತ ಸುಮ್ಮನೆ ಇರುವುದು ಲೇಸು ಎಂದು ಹೇಳಿದ್ದಾರೆ ಎಡಿನ್ ರೋಸ್.


Click it and Unblock the Notifications











