»   » 'ಬಿಗ್ ಬಾಸ್' ಸ್ಪರ್ಧಿಗೆ ಒಲಿದು ಬಂತು ಅದೃಷ್ಟ.! ಯಾರಿಗೆ.? ಏನದು.?

'ಬಿಗ್ ಬಾಸ್' ಸ್ಪರ್ಧಿಗೆ ಒಲಿದು ಬಂತು ಅದೃಷ್ಟ.! ಯಾರಿಗೆ.? ಏನದು.?

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮ ವೀಕ್ಷಕರಿಗೆ ಎಷ್ಟು ಮನರಂಜನೆ ನೀಡುತ್ತೋ, ಅಷ್ಟೇ ಖ್ಯಾತಿ ಸ್ಪರ್ಧಿಗಳಿಗೆ ಸಿಗುತ್ತೆ. 'ಬಿಗ್ ಬಾಸ್' ಕಾರ್ಯಕ್ರಮದಿಂದ ಅನೇಕರಿಗೆ ಚಿತ್ರರಂಗದಲ್ಲಿ ಭಾಗ್ಯದ ಬಾಗಿಲು ತೆರೆದಿದೆ.

ಯಾರ್ ಯಾರೋ ಯಾಕೆ, ಕಳೆದ ಬಾರಿಯ 'ಬಿಗ್ ಬಾಸ್' ವಿಜೇತ ಪ್ರಥಮ್ ರನ್ನೇ ತೆಗೆದುಕೊಳ್ಳಿ... ಸಿನಿಮಾ ನಿರ್ದೇಶಕ ಆಗಿದ್ದ ಪ್ರಥಮ್ ಇದೀಗ ಮೂರ್ನಾಲ್ಕು ಸಿನಿಮಾಗಳಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.

'ಬಿಗ್ ಬಾಸ್' ಸ್ಪರ್ಧಿಗಳಿಗೆ ಅವಕಾಶಗಳ ಸುರಿಮಳೆ ಬಗ್ಗೆ ನಾವು ಇಷ್ಟೆಲ್ಲ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಹಿಂದಿಯ 'ಬಿಗ್ ಬಾಸ್-11' ಕಾರ್ಯಕ್ರಮ. ಇದರಲ್ಲಿ ಸ್ಪರ್ಧಿಸುತ್ತಿರುವ ಸಪ್ನಾ ಚೌಧರಿ ಇದೀಗ ಬಾಲಿವುಡ್ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಮುಂದೆ ಓದಿರಿ...

ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಸಪ್ನಾ ಚೌಧರಿ

ಸದ್ಯ ಪ್ರಸಾರ ಆಗುತ್ತಿರುವ 'ಬಿಗ್ ಬಾಸ್-11' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಸಪ್ನಾ ಚೌಧರಿ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ಬೊಂಬಾಟ್ ಐಟಂ ಸಾಂಗ್ ಒಂದರಲ್ಲಿ ಸಪ್ನಾ ಚೌಧರಿ ಕುಣಿದು ಕುಪ್ಪಳಿಸಿದ್ದಾರೆ.

ಐಟಂ ಗರ್ಲ್ ಆದ ಸಪ್ನಾ ಚೌಧರಿ

ಹರಿಯಾಣದ ಜನಪ್ರಿಯ ನೃತ್ಯಗಾರ್ತಿ ಆಗಿರುವ ಸಪ್ನಾ ಚೌಧರಿ ಇದೀಗ ಬಾಲಿವುಡ್ ಬೆಳ್ಳಿತೆರೆ ಮೇಲೂ ಹೆಜ್ಜೆ ಹಾಕಿದ್ದಾರೆ. 'ಲವ್ ಬೈಟ್' ಎಂಬ ಐಟಂ ಸಾಂಗ್ ನಲ್ಲಿ ಸಪ್ನಾ ಚೌಧರಿ ಸೊಂಟ ಬಳುಕಿಸಿದ್ದಾರೆ.

ಹಾಡಿನ ಟೀಸರ್ ಔಟ್ ಆಗಿದೆ.!

'ಜರ್ನಿ ಆಫ್ ಬ್ಯಾಂಗ್ ಓವರ್' ಎಂಬ ಸಿನಿಮಾದ 'ಲವ್ ಬೈಟ್' ಎಂಬ ಹಾಡಿನಲ್ಲಿ ಸಪ್ನಾ ಚೌಧರಿ ಹೆಜ್ಜೆ ಹಾಕಿರುವ ಟೀಸರ್ ಔಟ್ ಆಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಯಾರೀ ಸಪ್ನಾ ಚೌಧರಿ.?

ಹರಿಯಾಣದಲ್ಲಿ ಹುಟ್ಟಿ ಬೆಳೆದ ಸಪ್ನಾ ಚೌಧರಿ ವೃತ್ತಿಯಲ್ಲಿ ಗಾಯಕಿ ಹಾಗೂ ನೃತ್ಯಗಾರ್ತಿ. ಆರ್ಕೇಸ್ಟ್ರಾ ಶೋಗಳಲ್ಲಿ ನೃತ್ಯ ಮಾಡುವ ಸಪ್ನಾ ಚೌಧರಿಗೆ ಬರೀ ಹರಿಯಾಣದಲ್ಲಿ ಮಾತ್ರ ಅಲ್ಲ, ಉತ್ತರ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಸದ್ಯ 'ಬಿಗ್ ಬಾಸ್' ಮನೆ ಸೇರಿರುವ ಸಪ್ನಾ ಚೌಧರಿಯ ಬಾಲಿವುಡ್ ಜರ್ನಿ ಕೂಡ ಇದೀಗ ಪ್ರಾರಂಭ ಆಗಿದೆ.

English summary
Bigg Boss Contestant Sapna Chaudhary's first Bollywood Dance Number 'Love Bite' teaser is out.s

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada