ಧರ್ಮದ ಕಾರಣಕ್ಕಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದ 'ಜೈ ಹೋ' ಖ್ಯಾತಿಯ ನಟಿ ಸನಾ

ಜೈ ಹೋ ಖ್ಯಾತಿಯ ನಟಿ ಸನಾ ಖಾನ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಮನರಂಜನಾ ಕ್ಷೇತ್ರಕ್ಕೆ ವಿದಾಯ ಹೇಳಿ ಧರ್ಮದ ಸೇವೆ ಮಾಡುವುದಾಗಿ ಹೇಳಿದ್ದಾರೆ. 33 ವರ್ಷದ ನಟಿ ಸನಾ ಖಾನ್ ಸಿನಿಮಾ ಮತ್ತು ಕಿರುತೆರೆ ಜೊತೆಗೆ ಬಿಗ್ ಬಾಸ್ ನಲ್ಲಿಯೂ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯಗಳಿಸಿದ್ದಾರೆ.

ಬಾಲಿವುಡ್ ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಆದರೆ ಇದೀಗ ಸಿನಿಮಾರಂಗ ಬಿಡುವ ನಿರ್ಧಾರ ಮಾಡಿರುವುದು ಅಚ್ಚರಿ ಮೂಡಿಸಿದೆ. ಮನರಂಜನಾ ಕ್ಷೇತ್ರ ಎಲ್ಲವನ್ನು ಕೊಟ್ಟಿದೆ. ಖ್ಯಾತಿ, ಗೌರವ, ಸಂಪತ್ತು ನೀಡಿದೆ. ಆದರೆ ಖ್ಯಾತಿ ಮತ್ತು ಸಂಪತ್ತು ಮಾತ್ರ ಏಕೈಕ ಗುರಿಯಲ್ಲ ಎಂದು ಅರಿತು ಸಿನಿಮಾರಂಗ ಬಿಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸನಾ ಸಾಮಾಜಿಕ ಜಾಲತಾಣದಲ್ಲಿ ವಿವಿರವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಮನರಂಜನಾ ಕ್ಷೇತ್ರಕ್ಕೆ ವಿದಾಯ ಹೇಳಿದ ಸನಾ ಖಾನ್

ಮನರಂಜನಾ ಕ್ಷೇತ್ರಕ್ಕೆ ವಿದಾಯ ಹೇಳಿದ ಸನಾ ಖಾನ್

"ಇಂದು ನಾನು ನನ್ನ ಜೀವನದ ಒಂದು ನಿರ್ಣಾಯಕ ಹಂತದಲ್ಲಿ ನಿಂತು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ವರ್ಷಗಳಿಂದ ನಾನು ಮನರಂಜನಾ ಕ್ಷೇತ್ರದಲ್ಲಿ ಜೀವನ ನಡೆಸುತ್ತಿದ್ದೇನೆ. ಇಲ್ಲಿಂದ ನಾನು ಎಲ್ಲಾ ರೀತಿಯ ಖ್ಯಾತಿ, ಗೌರವ ಮತ್ತು ಸಂಪತ್ತು ಗಳಿಸಿದ್ದೇನೆ. ಅದಕ್ಕಾಗಿ ನಾನು ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ. ಆದರೆ ಕೆಲವು ದಿನಗಳ ಹಿಂದೆ ನನಗೆ ಈ ಬಗ್ಗೆ ಅರಿವು ಮೂಡಿದೆ. ಮನುಷ್ಯ ಈ ಜಗತ್ತಿಗೆ ಬರುವ ಉದ್ದೇಶ ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಲು ಮಾತ್ರನಾ?" ಎಂದಿದ್ದಾರೆ.

ನಿರ್ಗತಿಕ ಮತ್ತು ಅಸಹಾಯಕರ ಸೇವೆ ಜೀವನದ ಒಂದು ಭಾಗ

ನಿರ್ಗತಿಕ ಮತ್ತು ಅಸಹಾಯಕರ ಸೇವೆ ಜೀವನದ ಒಂದು ಭಾಗ

"ನಿರ್ಗತಿಕ ಮತ್ತು ಅಸಹಾಯಕರ ಸೇವೆಯಲ್ಲಿ ಜೀವನವನ್ನು ಕಳೆಯುವುದು ಕರ್ತವ್ಯದ ಒಂದು ಭಾಗವಲ್ಲವೇ? ಒಬ್ಬ ವ್ಯಕ್ತಿ ಯಾವುದೆ ಕ್ಷಣದಲ್ಲಿ ಸಾಯಬಹುದು. ಸತ್ತಮೇಲೆ ಏನಾಗುತ್ತೆ? ನಾನು ದೀರ್ಘಕಾಲದ ವರೆಗೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ. ಅದರಲ್ಲೂ ವಿಶೇಷವಾಗಿ ಮರಣಾನಂತರ ನನಗೆ ಏನಾಗಬಹುದು ಎನ್ನುವ ಪ್ರಶ್ನೆ ಕಾಡುತ್ತಿದೆ."

ಸೃಷ್ಟಿಕರ್ತನ ಆಜ್ಞೆಯಂತೆ ಜೀವಿಸುತ್ತೇನೆ

ಸೃಷ್ಟಿಕರ್ತನ ಆಜ್ಞೆಯಂತೆ ಜೀವಿಸುತ್ತೇನೆ

"ಈ ಪ್ರಶ್ನೆಗಳಿಗೆ ನನ್ನ ಧರ್ಮದಲ್ಲಿ ನಾನು ಉತ್ತರ ಹುಡುಕಿದಾಗ, ಜಗತ್ತಿನಲ್ಲಿ ಜೀವನವು ಮರಣಾನಂತರ ಉತ್ತಮವಾಗಿರುವುದು ಎಂದು ಅರಿತುಕೊಂಡೆ. ಗುಲಾಮರು ಮತ್ತು ಸೃಷ್ಟಿಕರ್ತನ ಆಜ್ಞೆಯಂತೆ ಜೀವಿಸುತ್ತ, ಖ್ಯಾತಿ ಮತ್ತು ಸಂಪತ್ತನ್ನು ಏಕೈಕ ಗುರಿಯನ್ನಾಗಿ ಮಾಡಿಕೊಳ್ಳದಿದ್ದರೆ ಉತ್ತಮವಾಗಿರುತ್ತೆ."

Recommended Video

ಮೇಕಪ್ ಇಲ್ಲದೆ ಬಂದು ಒಂದೊಳ್ಳೆ ಸಂದೇಶ ಕೊಟ್ಟ Madhubala | Filmibeat Kannada
ಸಿನಿಮಾ ಸಂಬಂಧ ಕೆಲಸಕ್ಕೆ ನನ್ನನ್ನು ಸಂಪರ್ಕಿಸಬೇಡಿ

ಸಿನಿಮಾ ಸಂಬಂಧ ಕೆಲಸಕ್ಕೆ ನನ್ನನ್ನು ಸಂಪರ್ಕಿಸಬೇಡಿ

"ಆದ್ದರಿಂದ ಇಂದಿನಿಂದ ನಾನು ಮನರಂಜನಾ ಕ್ಷೇತ್ರಕ್ಕೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ಮಾನವೀಯತೆಗೆ ಸೇವೆ ಸಲ್ಲಿಸಲು ಮತ್ತು ನನ್ನ ಸೃಷ್ಟಿಕರ್ತನ ಆದೇಶಗಳನ್ನು ಅನುಸರಿಸಲು ನಾನು ನಿರ್ಧರಿಸಿದ್ದೇನೆ. ನನ್ನ ಈ ನಿರ್ಧಾರಕ್ಕೆ ನನ್ನ ಎಲ್ಲಾ ಸಹೋದರಿಯರು ಮತ್ತು ಸಹೋದರಿಯರು ನನಗಾಗಿ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಬೇಕೆಂದು ವಿನಂತಿಸುತ್ತೇನೆ. ಇನ್ನುಮುಂದೆ ಯಾವುದೆ ಸಿನಿಮಾ ಸಂಬಂಧ ಕೆಲಸಕ್ಕೆ ನನ್ನನ್ನು ಸಂಪರ್ಕಿಸದಂತೆ ಎಲ್ಲಾ ಸಹೋದರ, ಸಹೋದರಿಯರಿಗೆ ವಿನಂತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Bigg Boss Ex Contestant Sana Khan Quits Showbiz. She says wants to serve Humanity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X