ದುಬೈ ವಿಮಾನ ನಿಲ್ದಾಣದಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ಬಂಧನ

ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ಅವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗಾಯಕ ಅಬ್ದು ರೋಜಿಕ್ ಹಿಂದಿನ ಬಿಗ್‌ಬಾಸ್ ಸೀಸನ್ 16ರಲ್ಲಿ ದೊಡ್ಮನೆ ಒಳಗೆ ಹೋಗಿದ್ದರು. ವೀಕ್ಷಕರನ್ನು ರಂಜಿಸಿದ್ದರು. ಇದೀಗ ಅವರ ಬಂಧನ ವಿಚಾರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ತಜಕಿಸ್ತಾನದ ಮೂಲದ ಗಾಯಕ, ಬಾಕ್ಸರ್, ಉದ್ಯಮಿ ರೋಜಿಕ್ 'ಖತ್ರೋನ್ ಕೆ ಖಿಲಾಡಿ- 13' ಶೋನಲ್ಲಿ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಇವರು ನೋಡಲು ಬಹಳ ಕುಳ್ಳಗಿದ್ದಾರೆ. ವಯಸ್ಸು 20 ದಾಟಿದೆ. ಸದ್ಯ ಕಳ್ಳತನದ ಆರೋಪದಲ್ಲಿ ದುಬೈನಲ್ಲಿ ಬಂಧಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಏನಿದು ಪ್ರಕರಣ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಬಂಧನದ ವಿಚಾರವನ್ನು ಆತನ ಆಪ್ತರು ಖಚಿತಪಡಿಸಿದ್ದಾರೆ.

Bigg Boss fame Abdu Rozik Detained at Dubai Airport Over Theft Allegations

ಇನ್‌ಸ್ಟಾಗ್ರಾಮ್‌ನಲ್ಲಿ 80 ಲಕ್ಷ ಫಾಲೋವರ್ಸ್ ಹೊಂದಿರುವ ರೋಜಿಕ್ ಕಳೆದ ವರ್ಷ ತಮ್ಮ ಮದುವೆಯ ವಿಚಾರವನ್ನು ಹಂಚಿಕೊಂಡಿದ್ದರು. ಅಬ್ದು ರೋಜಿಕ್ ದುಬೈನಲ್ಲೇ ಬೀಡು ಬಿಟ್ಟಿದ್ದಾರೆ. ಅಲ್ಲಿ ದೊಡ್ಡ ಮನೆ ಕೂಡ ಇದೆ. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಬ್ದು ರೋಜಿಕ್‌ಗೆ ಇಡಿಯಿಂದ ಸಮನ್ಸ್ ನೀಡಿದ್ದು ಸುದ್ದಿಯಾಗಿತ್ತು. ಎರಡು ವರ್ಷಗಳ ಹಿಂದೆ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ಡೆಯಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಂದೂಕು ಹಿಡಿದು ಆಟವಾಡುತ್ತಾ ಪೋಸ್ ನೀಡಿದ್ದೇ ಆಗ ಸಂಕಷ್ಟ ತಂದೊಡ್ಡಿತ್ತು.

ಅಬ್ದು ರೋಜಿಕ್ ಅವರನ್ನು ಇದೀಗ ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಯಾಕೆ ವಶಕ್ಕೆ ಪಡೆದಿದ್ದಾರೆ? ಅವರ ಮೇಲಿನ ಆರೋಪ ನಿಜಾನಾ? ಅಷ್ಟು ಅವರು ಕದ್ದಿದ್ದೇನು? ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಗಬೇಕಿದೆ. ವಿಶ್ವದ ಅತ್ಯಂತ ಪುಟ್ಟ ಗಾಯಕ ಎಂದೇ ರೋಜಿಕ್ ಖ್ಯಾತರಾಗಿದ್ದಾರೆ. ಚಿಕ್ಕಂದಿನಲ್ಲೇ ಹಾರ್ಮೋನಲ್ ಸಮಸ್ಯೆಯಿಂದ ರೋಜಿಕ್ ದೈಹಿಕವಾಗಿ ಬೆಳವಣಿಗೆ ಆಗಲಿಲ್ಲ. ಕುಬ್ಜರಾಗಿಯೇ ಉಳಿದುಬಿಟ್ಟರು. ಸರಿಯಾದ ಚಿಕಿತ್ಸೆ ನೀಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಆರ್ಥಿಕವಾಗಿ ಪೋಷಕರು ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ 20 ವರ್ಷ ವಯಸ್ಸಾಗಿದ್ದರೂ 3.1 ಅಡಿ ಎತ್ತರ ಮಾತ್ರ ಇದ್ದಾರೆ.

Bigg Boss fame Abdu Rozik Detained at Dubai Airport Over Theft Allegations

ಬಡತನದ ಕಾರಣ ರೋಜಿಕ್ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಇವತ್ತಿಗೂ ಸರಿಯಾಗಿ ಓದು ಬರಹ ಬರಲ್ಲ. ಆದರೂ ತಮ್ಮ ಅದ್ಭುತ ಪ್ರತಿಭೆಯಿಂದ ಸಾಹಿತ್ಯ ರಚಿಸಿ ಹಾಡುತ್ತಾರೆ. ಚಿಕ್ಕಂದಿನಲ್ಲೇ ಕುಟುಂಬ ಪೋಷಣೆಗಾಗಿ ಬೀದಿ ಬೀದಿಗಳಲ್ಲಿ ಹಾಡು ಹಾಡಿ ಹಣ ಸಂಪಾದಿಸುತ್ತಿದ್ದರು. ಬರ್ಗರ್ ಎಂದು ಹೇಳುವುದನ್ನು ಬುರ್ಗಿರ್ ಎಂದು ಆತ ಹೇಳಿದ್ದ ವೀಡಿಯೋ ವೈರಲ್ ಆಗಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಲು ಆರಂಭಿಸಿದ್ದರು.

ಸೋಶಿಯಲ್ ಮೀಡಿಯಾ ಜನಪ್ರಿಯತೆ ಮುಂದೆ ಹಿಂದಿ ಬಿಗ್‌ಬಾಸ್ ಶೋವರೆಗೆ ಕರೆತಂದಿತ್ತು. ತಮ್ಮ ಎತ್ತರ ಹಾಗೂ ಪ್ರತಿಭೆಯ ಕಾರಣಕ್ಕೆ ದೊಡ್ಮನೆ ಒಳಗೂ ಗಮನ ಸೆಳೆದಿದ್ದರು. ಸಲ್ಮಾನ್ ಖಾನ್ ಮೆಚ್ಚುಗೆಗೂ ಪಾತ್ರರಾಗಿದ್ದರು. ಸ್ಪಷ್ಟವಾಗಿ ಹಿಂದಿ, ಇಂಗ್ಲೀಷ್ ಮಾತನಾಡಲು ಬಾರದಿದ್ದರೂ ಕಮಾಲ್ ಮಾಡಿದ್ದರು.

ಸದ್ಯ 'ಲಾಫ್ಟರ್ ಶೆಫ್ಸ್' ಎಂಬ ಹಿಂದಿ ರಿಯಾಲಿಟಿ ಶೋನಲ್ಲಿ ಅಬ್ದು ರೋಜಿಕ್ ಭಾಗವಹಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುವ 'ಕ್ವಾಟ್ಲೆ ಕಿಚನ್' ರೀತಿಯ ಕಾಮಿಡಿ ಶೋ ಇದಾಗಿದೆ.

More from Filmibeat

English summary
Abdu Rozik was arrested at Dubai International Airport
Read more about: bigg boss salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X