For Quick Alerts
  ALLOW NOTIFICATIONS  
  For Daily Alerts

  ಸೆಲ್ಫಿ ಕೇಳಿ ಮುತ್ತು ಕೊಟ್ಟ ಅಭಿಮಾನಿ: ಆಮೇಲೆ ನೋಡಿದ್ರೆ ಆಕೆಗೆ ಕೊರೊನಾ ಪಾಸಿಟಿವ್

  |

  ಹಿಂದಿ ಕಿರುತೆರೆ ನಟಿ ಹಾಗು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅರ್ಶಿ ಖಾನ್ ಅವರಿಗೆ ಏರ್‌ಪೋರ್ಟ್‌ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಅರ್ಶಿ ಖಾನ್ ಅವರನ್ನು ನೋಡಿದ ಅಭಿಮಾನಿಯೊಬ್ಬ ಸೆಲ್ಫಿಗೆ ಫೋಸ್ ಕೊಡಿ ಎಂದು ವಿನಂತಿಸಿದ. ಸರಿ, ಅಭಿಮಾನಿ ಫೋಟೋ ಕೇಳ್ತಿದ್ದಾರೆ ಅಂತ ಅರ್ಶಿ ಖಾನ್ ಸಹ ಸಮ್ಮತಿ ಸೂಚಿಸಿದರು.

  ಆದರೆ, ಆ ಅಭಿಮಾನಿ ಸೆಲ್ಫಿ ಕ್ಲಿಕ್ಕಿಸಿಕೊಂಡ ತಕ್ಷಣ ಅರ್ಶಿ ಖಾನ್ ಕೈಹಿಡಿದು ಮುತ್ತು ಕೊಟ್ಟಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಛಾಯಾಗ್ರಾಹಕ ವೈರಲ್ ಭಯಾನಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದುರಾದೃಷ್ಟವಶಾತ್ ಅಂದ್ರೆ ಎರಡು ದಿನಗಳ ಬಳಿಕ ಅರ್ಶಿ ಖಾನ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಮುಂದೆ ಓದಿ...

  3 ದಿನಗಳ ಹಿಂದೆ ನಡೆದ ಘಟನೆ

  3 ದಿನಗಳ ಹಿಂದೆ ನಡೆದ ಘಟನೆ

  ಮೂರು ದಿನಗಳ ಹಿಂದೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ಅರ್ಶಿ ಖಾನ್‌ಗೆ ಅಭಿಮಾನಿಯೊಬ್ಬ ಸಮ್ಮತಿ ಇಲ್ಲದೇ ಮುತ್ತು ಕೊಟ್ಟಿದ್ದ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏಕಂದ್ರೆ, ನಟಿ ಅರ್ಶಿ ಖಾನ್‌ಗೆ ಕೊರೊನಾ ಪಾಸಿಟಿವ್ ಬಂದಿದೆ.

  ಕೊರೊನಾ ಭೀತಿ: ಮುಂಬೈ ತೊರೆದ ಶಾರುಖ್ ಖಾನ್ ಕುಟುಂಬಕೊರೊನಾ ಭೀತಿ: ಮುಂಬೈ ತೊರೆದ ಶಾರುಖ್ ಖಾನ್ ಕುಟುಂಬ

  ಸೋಂಕು ಖಚಿತ ಪಡಿಸಿದ ಅರ್ಶಿ ಖಾನ್

  ಸೋಂಕು ಖಚಿತ ಪಡಿಸಿದ ಅರ್ಶಿ ಖಾನ್

  ''ಏಪ್ರಿಲ್ 19 ರಂದು ಮುಂಬೈ ಏರ್‌ಪೋರ್ಟ್‌ನಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದೆ. ಅದರ ವರದಿ ಈಗ (ಏಪ್ರಿಲ್ 22) ಬಂದಿದೆ. ನನಗೆ ಕೊರೊನಾ ಪಾಸಿಟಿವ್ ಇದೆ. ಸೌಮ್ಯ ರೋಗ ಲಕ್ಷಣಗಳಿವೆ, ಕ್ವಾರಂಟೈನ್ ಆಗಿದ್ದೇನೆ. ಎಲ್ಲರೂ ಜಾಗೃತರಾಗಿರಿ'' ಎಂದು ಅರ್ಶಿ ಖಾನ್ ಇನ್ಸ್ಟಾದಲ್ಲಿ ಮಾಹಿತಿ ನೀಡಿದ್ದಾರೆ.

  ಮುತ್ತು ಕೊಟ್ಟ ಅಭಿಮಾನಿ ಕಥೆ ಏನು?

  ಮುತ್ತು ಕೊಟ್ಟ ಅಭಿಮಾನಿ ಕಥೆ ಏನು?

  ಅರ್ಶಿ ಖಾನ್‌ಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ಮುತ್ತು ಕೊಟ್ಟ ಅಭಿಮಾನಿ ಟ್ರೋಲ್‌ಗೆ ಗುರಿಯಾಗಿದ್ದಾನೆ. ಅರ್ಶಿ ಖಾನ್‌ಗೆ ಕೊರೊನಾ ತಗುಲಿದ್ದು ಎಲ್ಲಿಂದ, ಈಗ ಅರ್ಶಿ ಖಾನ್‌ಗೆ ಸೋಂಕು ಇದೆ ಎಂದು ತಿಳಿದಿದೆ. ಹಾಗಾದ್ರೆ ಆ ಅಭಿಮಾನಿ ಕಥೆ ಏನು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

  ಮುಂಬೈನಲ್ಲಿ ಕೊರೊನಾ ಕಾಟ, ಊರು ಬಿಟ್ಟು ಸೆಲೆಬ್ರಿಟಿಗಳು: ಕಾಲೆಳೆದ ನೆಟ್ಟಿಗರುಮುಂಬೈನಲ್ಲಿ ಕೊರೊನಾ ಕಾಟ, ಊರು ಬಿಟ್ಟು ಸೆಲೆಬ್ರಿಟಿಗಳು: ಕಾಲೆಳೆದ ನೆಟ್ಟಿಗರು

  ಕಿಚ್ಚ ಸುದೀಪ್ ಗೆ ಇನ್ನೂ ವಿಶ್ರಾಂತಿ ಬೇಕಂತೆ !!! | Filmibeat Kannada
  ಮಾಡೆಲ್, ಸಿನಿಮಾ, ರಿಯಾಲಿಟಿ ಶೋ, ರಾಜಕೀಯ

  ಮಾಡೆಲ್, ಸಿನಿಮಾ, ರಿಯಾಲಿಟಿ ಶೋ, ರಾಜಕೀಯ

  ಅಫ್ಘಾನಿಸ್ತಾನದಲ್ಲಿ ಹುಟ್ಟಿದ್ದ ಅರ್ಶಿ ಖಾನ್ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಭಾರತಕ್ಕೆ ಬಂದು ನೆಲೆ ಕಂಡುಕೊಂಡರು. ಮಾಡೆಲ್ ಆಗಿ ಇಂಡಸ್ಟ್ರಿ ಪ್ರವೇಶಿಸಿದ ಅರ್ಶಿ ಖಾನ್ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು. 2017ರಲ್ಲಿ ಬಿಗ್ ಬಾಸ್ ಪ್ರವೇಶಿಸಿದ್ದರು. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಸೇರಿದ್ದ ನಟಿ 2019ರ ಚುನಾವಣೆಯಲ್ಲಿ ಮಹಾರಾಷ್ಟ್ರದಿಂದ ಸ್ಪರ್ಧೆ ಮಾಡಿ ಸೋಲು ಕಂಡರು.

  English summary
  Bigg Boss fame Arshi Khan tests positive for COVID19. she receives report from airport authority.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X