For Quick Alerts
  ALLOW NOTIFICATIONS  
  For Daily Alerts

  ರೇವ್ ಪಾರ್ಟಿ ಮೇಲೆ ದಾಳಿ; 'ಬಿಗ್ ಬಾಸ್' ಸ್ಪರ್ಧಿ ಸೇರಿ 22 ಮಂದಿ ಅರೆಸ್ಟ್

  |

  ಬೆಳ್ಳಂಬೆಳಗ್ಗೆ ರೇವ್ ಪಾರ್ಟಿ ವೇಲೆ ದಾಳಿ ನಡೆಸಿದ ಪೊಲೀಸರು ಮರಾಠಿ ಬಿಗ್ ಬಾಸ್ ನ ಮಾಜಿ ಸ್ಪರ್ಧಿ, ನಟಿ ಹೀನಾ ಪಾಂಚಲ್ ಸೇರಿದಂತೆ ಒಟ್ಟು 22 ಜನರನ್ನು ಬಂಧಿಸಲಾಗಿದೆ. ಈ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್ ಮತ್ತು ಹುಕ್ಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

  ಬಂಧಿತ 22ಜನರಲ್ಲಿ ಟಿವಿ ನಟರು, ನೃತ್ಯ ನಿರ್ದೇಶಕರು ಸೇರಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮರಾಠಿ ಬಿಗ್ ಬಿಗ್ ನ ಮಾಜಿ ಸ್ಪರ್ಧಿ, ನಟಿ ಹೀನಾ ಪಾಂಚಲ್ ಹೆಸರು ಬಹಿರಂಗವಾಗಿದ್ದು ಸದ್ಯ ಪೊಲೀಸರ ವಶದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೀನಾ ಸಹೋದರಿ, "ಕಲಾವಿದೆ ಎನ್ನುವ ಕಾರಣಕ್ಕೆ ಸಹೋದರಿಯ ಹೆಸರು ಈ ವಿವಾದದಲ್ಲಿ ಸಿಲುಕಿಹಾಕಿಕೊಂಡಿದೆ" ಎಂದು ಹೇಳಿದ್ದಾರೆ.

  ಪತ್ನಿ ಖಾತೆಯಿಂದ ಕೋಟಿ ರುಪಾಯಿ ಹಣ ಎಗರಿಸಿದ ಟಿವಿ ನಟಪತ್ನಿ ಖಾತೆಯಿಂದ ಕೋಟಿ ರುಪಾಯಿ ಹಣ ಎಗರಿಸಿದ ಟಿವಿ ನಟ

  ಇನ್ನು "ಹೀನಾ ಜೊತೆ ಮಾತನಾಡುವ ವರೆಗೂ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ" ಎಂದು ಹೇಳಿದ್ದಾರೆ. ಎ ಎನ್ ಐ ವರದಿ ಪ್ರಕಾರ, "ಪಾರ್ಟಿ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ ಬಳಿಕ ಬಂಗಲೆ ಮೇಲೆ ದಾಳಿ ನಡೆಸಿದರು. ಅಲ್ಲಿ ಅಕ್ರಮವಾಗಿ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ಸೇವಿಸುತ್ತಿರುವುದು ಕಂಡು ಬಂದಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿದುಬಂದಿದೆ.

  ಪತಿಯ ಮೇಲಿನ ತನ್ನ ಪ್ರೀತಿ ಏನು ಅನ್ನೋದನ್ನ ತೋರಿಸಿದ ಮಂದಿರಾ ಬೇಡಿ | Filmibeat Kannada

  ಬಂಧಿತರಲ್ಲಿ 12 ವಹಿಳೆಯರು ಇದ್ದು, ಅವರೆಲ್ಲರೂ ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಹೀನಾ ಹೆಸರು ಮಾತ್ರ ಲೀಕ್ ಆಗಿದೆ. ಸದ್ಯ ಬಂಧಿತರನ್ನು ವದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  English summary
  Bigg Boss Fame Marathi Actress Heena Panchal arrested after police raid rave party in Nashik.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X