ಸೆಲೆಬ್ರೆಟಿಗಳ ಫೇವರಿಟ್ ಈತ; ಸ್ಟಾರ್ ನಟ-ನಟಿಯರು ಈತನನ್ನು ಮುಟ್ಟಲು ಲಕ್ಷ ಲಕ್ಷ ಕೊಡ್ಬೇಕು!
ಇತ್ತೀಚೆಗೆ ಈಗ ಬಿಟೌನ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್. ಸ್ಟಾರ್ ನಟ-ನಟಿಯರು ಭಾಗವಹಿಸುವ ಪಾರ್ಟಿಗಳಲ್ಲಿ ಈತ ಹಾಜರ್ ಆಗುತ್ತಾನೆ. ನಟ- ನಟಿಯರು ಮೇಲೆ ಬಿದ್ದು ಈತನೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಹಾಗಂತ ಈಗ ನಟನೂ ಅಲ್ಲ, ನೆಪೊ ಕಿಡ್ ಕೂಡ ಅಲ್ಲ. ಆದರೂ ಈತನ ಬಗ್ಗೆ ಯಾಕಿಷ್ಟು ಕ್ರೇಜ್ ಎನ್ನುವುದು ಹಲವರ ಪ್ರಶ್ನೆ.
'ಒರ್ರಿ' ಅಲಿಯಾಸ್ ಒರ್ಹಾನ್ ಅವತ್ರಮಣಿ. ಸದ್ಯ ಬಾಲಿವುಡ್ ಅಂಗಳದಲ್ಲಿ ಈ ಹೆಸರು ಬ್ರ್ಯಾಂಡ್ ಆಗಿಬಿಟ್ಟಿದೆ. ಈ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೀತಿದೆ. ಕರೀನಾ ಕಪೂರ್, ಜಾನ್ವಿ ಕಪೂರ್, ದೀಪಿಕಾ ಪಡುಕೋಣೆ ಸೇರಿದಂತೆ ಸ್ಟಾರ್ ನಟಿಯರು ಈತನೊಟ್ಟಿಗೆ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಆತನ ಮೇಲೆ ಬಿದ್ದು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆತನಿಗೆ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಆತ ಶೇರ್ ಮಾಡುವ ಫೋಟೊಗಳು ಲಕ್ಷ ಲಕ್ಷ ಲೈಕ್ಸ್ ಗಿಟ್ಟಿಸುತ್ತಿವೆ. ಸಾಕಷ್ಟು ಜನ ಈತ ಯಾರು? ನಟಿಯರ ಜೊತೆಗೆ ಇಷ್ಟು ಸಲುಗೆಯಿಂದ ಫೋಟೊ ಯಾಕೆ ಕ್ಲಿಕ್ಕಿಸಿಕೊಳ್ಳುತ್ತಾನೆ, ನಟ, ಸ್ಟಾರ್ ಕಿಡ್ ಅಲ್ಲ ಅಂತಮೇಲೆ ಈತ ತಾರೆಯರ ಅಭಿಮಾನಿನಾ? ಅಂತೆಲ್ಲಾ ತಲೆ ಕೆಡಿಸಿಕೊಳ್ಳುತ್ತಾರೆ. ಸದ್ಯ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಒರಿ ಮಾತನಾಡಿದ್ದಾನೆ.
ಇತ್ತೀಚೆಗೆ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಈವೆಂಟ್‌ನಲ್ಲಿ ಕೂಡ ಒರ್ಹಾನ್ ಅವತ್ರಮಣಿ ಕಾಣಿಸಿಕೊಂಡಿದ್ದ. ತಾರೆಯರು ಆತನಿಗೆ ಹಣ ಕೊಟ್ಟು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಆತ ನಟ-ನಟಿಯರ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು ಅಂದ್ರೆ ಇಷ್ಟ ಅಲ್ಲ. ಅದಕ್ಕಾಗಿ ಲಕ್ಷ ಲಕ್ಷ ಚಾರ್ಜ್ ಮಾಡುತ್ತಾನೆ. ದಿನಕ್ಕೆ ಇಬ್ಬರು ಸೆಲೆಬ್ರೆಟಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು 50 ಲಕ್ಷದವರೆಗೆ ಸಂಪಾದಿಸುವುದಾಗಿ ಹೇಳಿದ್ದಾರೆ.
"ನಾನು ನಿಮ್ಮ ಕಣ್ಣಿಗೆ ಚೀಪ್ ತರ ಕಾಣ್ತೀನಾ ಹೇಳಿ? ನೀವೇ ಒಂದು ಫೋಟೋ ಕೇಳಿದರೆ 25 ಲಕ್ಷ ರೂ. ಚಾರ್ಜ್ ಮಾಡ್ತೀನಿ. ನಾನು ಇಷ್ಟಪಟ್ಟು ಫೋಟೋ ಕ್ಲಿಕ್ಕಿಸಿಕೊಂಡರೆ ಹಣ ಇಲ್ಲ. ಯಾರಾದರೂ ಬಂದು ಟಚ್ ಮಾಡುವಂತೆ ಕೇಳಿದರೆ 20 ಲಕ್ಷ ರೂ. ಕೇಳ್ತೀನಿ ಎಂದಿದ್ದಾರೆ.

"ಕೆಲವರು ನನ್ನನ್ನು ಫಾರ್ಮ್ ಹೌಸ್‌ಗೆ ಆಹ್ವಾನಿಸುತ್ತಾರೆ. ಅಲ್ಲಿ ನನ್ನನ್ನು ಟಚ್ ಮಾಡುತ್ತಾರೆ. ಅದಕ್ಕಾಗಿ ದಿನಕ್ಕೆ 25 ಲಕ್ಷ ರೂ. ಚಾರ್ಜ್ ಮಾಡುತ್ತೇನೆ. ನನಗೆ ಕೆಲಸ ಮಾಡುವ ಆಸಕ್ತಿ ಇಲ್ಲ. ಅದಕ್ಕೆ ಈ ರೀತಿ ಈವೆಂಟ್‌ಗಳಿಗೆ ಹಾಜರಾಗಿ ಫೋಟೊ ಕ್ಲಿಕ್ಕಿಸಿಕೊಂಡು ಹಣ ಸಂಪಾದಿಸುತ್ತೇನೆ. ಕೆಲವರು ಟ್ರೋಲ್ ಮಾಡುತ್ತಾರೆ. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲ್ಲ" ಎಂದು ಒರ್ರಿ ಹೇಳಿಕೊಂಡಿದ್ದಾರೆ.
ಒರ್ರಿ ದೊಡ್ಡ ಉದ್ಯಮಿಯ ಮಗ. ಪ್ರತಿಷ್ಠಿತ ಶಾಲೆ, ಕಾಲೇಜಿನಲ್ಲಿ ಓದಿ ಬೆಳೆದವನು. ಆತನೊಟ್ಟಿಗೆ ಬಾಲಿವುಡ್ ಕಲಾವಿದರ ಮಕ್ಕಳು ಓದಿ ಬೆಳೆದಿದ್ದಾರೆ. ಹಾಗಾಗಿ ಆತ ಬಾಲಿವುಡ್ ತಾರೆಯರು ಜೊತೆ ಕಾಣಿಸಿಕೊಳ್ಳುತ್ತಾನೆ. "ಒರ್ಹಾನ್ ನನಗೆ ಬಹಳ ಸಮಯದಿಂದ ಗೊತ್ತು. ಅವನು ನನ್ನ ಪಕ್ಕದಲ್ಲಿದ್ದರೆ ಧೈರ್ಯವಾಗಿರುತ್ತದೆ. ಅಂತಹ ಸ್ನೇಹಿತನನ್ನು ಪಡೆದ ನಾನು ಅದೃಷ್ಟಶಾಲಿ. ಒರ್ಹಾನ್ ಎಲ್ಲದರಲ್ಲೂ ನನ್ನನ್ನು ಬೆಂಬಲಿಸುತ್ತಾನೆ. ನಾನು ಅವನನ್ನು ತುಂಬಾ ನಂಬುತ್ತೇನೆ" ಎಂದು ಜಾನ್ವಿ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.
ಒರ್ಹಾನ್ ಲಕ್ಕಿಚಾರ್ಮ್ ಎನ್ನುವ ಮಾತು ಬಿಟೌನ್‌ನಲ್ಲಿ ಚಾಲ್ತಿಯಲ್ಲಿದೆ. ಆತನ ಜೊತೆ ಕಾಣಿಸಿಕೊಂಡರೆ ಅದೃಷ್ಟ ಅಂತೆಲ್ಲಾ ಕೆಲವರು ಹೇಳುತ್ತಾರೆ. ಅದೇ ಕಾರಣಕ್ಕೆ ಹಣ ಕೊಟ್ಟು ಟಚ್ ಮಾಡಲು ಕೇಳುತ್ತಾರೆ ಎನ್ನುವ ಗುಸುಗುಸು ಕೂಡ ಇದೆ. ಇದನ್ನು ಕೇಳಿ ಕೆಲವರು ಜನ ಮರುಳೋ ಜಾತ್ರೆ ಮರುಳೋ ಎನ್ನುತ್ತಿದ್ದಾರೆ.


Click it and Unblock the Notifications











