Bigg Boss Hindi 17: ಈ ಬಾರಿಯ ಬಿಗ್ ಬಾಸ್ ಹಿಂದಿ 17 ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾಗಿ ಒಂದು ವಾರವಾಗಿದೆ. ತೆಲುಗಿನಲ್ಲಿಯೂ ಬಿಗ್ ಬಾಸ್ ಶುರುವಾಗಿದೆ. ಇದರ ಬೆನ್ನಲ್ಲೆ ಹಿಂದಿಯಲ್ಲಿಯೂ ಖಾನ್ ಬಿಗ್ ಬಾಸ್ 17 ಸೀಸನ್ ಆರಂಭವಾಗಲಿದ್ದು, ಈ ರಿಯಾಲಿಟಿ ಶೋನಲ್ಲಿ 17 ಸೆಲೆಬ್ರಿಟಿಗಳು 105 ದಿನಗಳವರೆಗೆ ದೊಡ್ಮನೆಯಲ್ಲಿ ಇರಲಿದ್ದಾರೆ.

ಈ ಬಾರಿ ಅವರನ್ನು 'ದಿಲ್, ದಿಮಾಗ್ ಮತ್ತು ಧಮ್' ಎಂದು ವಿಭಾಗಗಳನ್ನು ಮಾಡಲಾಗಿದ್ದು, ಪ್ರತಿಯೊಂದಕ್ಕೂ ಕೆಲವು ವಿಶೇಷ ಅಧಿಕಾರಗಳನ್ನು ನೀಡಲಾಗಿದೆ. ಇನ್ನು ಕೆಲವು ಸ್ಪರ್ಧಿಗಳಿಗೆ ಒಂದಷ್ಟು ವಿಶೇಷ ಅಧಿಕಾರ ನೀಡಲಾಗಿರುವುದರಿಂದ ಆಟ ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ ಎಂದು ನಟ, ನಿರೂಪಕ ಸಲ್ಮಾನ್ ಖಾನ್ ಕೂಡ ಘೋಷಿಸಿದ್ದಾರೆ.

ಬಿಗ್ ಬಾಸ್ 17 ರ ಅಂತಿಮ ಸ್ಪರ್ಧಿಗಳ ಅಧಿಕೃತವಾಗಿ ಹಂಚಿಕೊಂಡಿಲ್ಲವಾದರೂ, ಕಾರ್ಯಕ್ರಮದ ಕೆಲವು ಪ್ರೋಮೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಫ್ಯಾನ್ಸ್ ಪೇಜ್‌ಗಳು 17 ಸ್ಪರ್ಧಿಗಳ ದೃಢೀಕೃತ ಹೆಸರುಗಳನ್ನು ಸಹ ಹಂಚಿಕೊಂಡಿವೆ.

Bigg Boss Hindi 17: Full Confirmed List Of Contestants

ಬಿಗ್ ಬಾಸ್ ಮನೆಯೊಳಗೆ ಹೋಗುವವರ ಪಟ್ಟಿ ಇಲ್ಲಿದೆ.

ಅಂಕಿತಾ ಲೋಖಂಡೆ-ವಿಕ್ಕಿ ಜೈನ್

ಈ ಸೀಸನ್‌ನಲ್ಲಿ ಹೆಚ್ಚು ಕೇಳಿಬರುತ್ತಿರುವ ಸ್ಪರ್ಧಿಗಳಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಮೊದಲ ಸ್ಥಾನದಲ್ಲಿದ್ದಾರೆ. ದಂಪತಿ ತಮ್ಮ ಸಂಬಂಧದ ಬಗ್ಗೆ ಯಾವಾಗಲೂ ಖುಷಿಯಾಗಿ ಮಾತನಾಡುತ್ತಾರೆ. ಇದೇ ಮೊದಲ ಬಾರಿಗೆ ಒಟ್ಟಿಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಇಶಾ ಮಾಳವಿಯಾ- ಅಭಿಷೇಕ್ ಕುಮಾರ್

ಮಾಜಿ ಜೋಡಿಯಾಗಿದ್ದ ಇಶಾ ಮಾಳವಿಯಾ ಮತ್ತು ಅಭಿಷೇಕ್ ಕುಮಾರ್ ಬಿಗ್ ಬಾಸ್ 17 ರ ಮನೆಯೊಳಗೆ ಕಾಲಿಡಲಿದ್ದಾರೆ. ಇಬ್ಬರೂ ಕಲರ್ಸ್ ಟಿವಿಯ ಉದಯನ್ ಸೆಟ್‌ನಲ್ಲಿ ಪರಸ್ಪರ ಭೇಟಿಯಾಗಿದ್ದರು. ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಮನೆಯೊಳಗೆ ಹೋಗುವ ಮುನ್ನವೆ ವೇದಿಕೆಯಲ್ಲಿ ಸಲ್ಮಾನ್ ಖಾನ್ ಎದುರು ಅವರು ಪರಸ್ಪರ ಜಗಳವಾಡುವುದನ್ನು ಪ್ರೋಮೋದಲ್ಲಿ ಕಾಣಿಸಿದೆ.

ಮುನಾವರ್ ಫಾರುಕಿ

ಬಿಗ್ ಬಾಸ್ 17 ರಲ್ಲಿ ಸ್ಟಾಂಡ್‌ಅಪ್ ಕಾಮಿಡಿಯನ್ ಮತ್ತು ಗಾಯಕ ಮುನಾವರ್ ಫಾರುಕಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್ ಅಪ್ ಸೀಸನ್ 1 ಅನ್ನು ಗೆದ್ದ ಮುನಾವರ್ ಫಾರುಕಿ ಈಗಾಗಲೇ ರಿಯಾಲಿಟಿ ಶೋನ ಅನುಭವ ಪಡೆದಿದ್ದಾರೆ. ಈ ಬಾರಿಯ ಬಿಗ್ ಬಾಸ್‌ನ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು.

Bigg Boss Hindi 17: Full Confirmed List Of Contestants

ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ

ಅತ್ಯಂತ ಜನಪ್ರಿಯವಾದ ಸ್ಟಾರ್ ಪ್ಲಸ್ ಶೋ ಘುಮ್ ಹೈ ಕಿಸಿಕೇ ಪ್ಯಾರ್ ಮೆಯಿನ್ ಧಾರಾವಾಹಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ನಿಜ ಜೀವನದ ಜೋಡಿ ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ ಈ ಬಾರಿ ಬಿಗ್ ಬಾಸ್ ಮನೆಗೆ ಜೋಡಿಯಾಗಿ ಪ್ರವೇಶಿಸಲಿದ್ದಾರೆ.

ರಿಂಕು ಧವನ್

ಜನಪ್ರಿಯ ಟಿವಿ ನಟಿ ರಿಂಕು ಧವನ್, ಕಹಾನಿ ಘರ್ ಘರ್ ಕಿ ಮತ್ತು ಯೇ ವಾದ ರಹಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಗೆಟಿವ್ ಪಾತ್ರಗಳಲ್ಲಿ ನಟಿಸಿ ಜನರ ಪ್ರೀತಿ ಗಳಿಸಿದ್ದಾರೆ.

ಮನ್ನಾರಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಅವರ ಕಸಿನ್ ಮತ್ತು ಚಲನಚಿತ್ರ ನಟಿ ಮನ್ನಾರಾ ಚೋಪ್ರಾ ಬಿಗ್ ಬಾಸ್ 17 ರೊಂದಿಗೆ ಟಿವಿಗೆ ಪಾದಾರ್ಪಣೆ ಮಾಡಲಿದ್ದಾರೆ.

ಅನುರಾಗ್ ದೋಭಾಲ್

ಯುಕೆ07 ರೈಡರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಅನುರಾಗ್ ದೋಭಾಲ್ ಅವರು ಬಿಗ್ ಬಾಸ್ 17 ರ ಪ್ರಮುಖ ಸ್ಪರ್ಧಿ.

ಜಿಗ್ನಾ ವೋರಾ

ಮಾಜಿ ಪತ್ರಕರ್ತೆ ಜಿಗ್ನಾ ವೋರಾ ಅವರು ಬಿಗ್ ಬಾಸ್ 17 ರಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಹನ್ಸಲ್ ಮೆಹ್ತಾ ಅವರ ಸ್ಕೂಪ್ ವೆಬ್ ಸೀರಿಸ್ ಇವರದ್ದೇ ಕಥೆಯಾಗಿದೆ.

ಸನ್ನಿ ಆರ್ಯ

ಮತ್ತೊಬ್ಬ ಯೂಟ್ಯೂಬರ್ ಸನ್ನಿ ಆರ್ಯ ಬಿಗ್ ಬಾಸ್ ಹದಿನೇಳನೇ ಸೀಸನ್ ಗೆ ಕನ್ಫರ್ಮ್ ಆಗಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾ ಸ್ಟಾರ್ ತೆಹೆಲ್ಕಾ ಪ್ರಾಂಕ್ಸ್ ಹೆಸರಿನ ತನ್ನ ಯೂಟ್ಯೂಬರ್ ಚಾನೆಲ್‌ನಲ್ಲಿ ತಮಾಷೆಯ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ.

ಸನಾ ರಯೀಸ್ ಖಾನ್

ಅಜಯ್ ದೇವಗನ್ ಅವರ ಆಕ್ಷನ್ ಜಾಕ್ಸನ್ ಸಿನಿಮಾದಲ್ಲಿ ನಟಿಸಿದ್ದ ಮನಸ್ವಿ ಮಾಮ್ಗೈ ಬಿಗ್ ಬಾಸ್ 17 ರ ಭಾಗವಾಗಲು ಸಿದ್ಧರಾಗಿದ್ದರು. ಆದರೆ, ಅವರು ಕೊನೆಯ ಕ್ಷಣದಲ್ಲಿ ಹೊರಗುಳಿದಿದ್ದು, ಈಗ ಆರ್ಯನ್ ಖಾನ್ ಡ್ರಗ್ ಪ್ರಕರಣದ ವಕೀಲೆ ಸನಾ ರಯೀಸ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ.

ನಾವಿದ್ ಸೋಲ್

ನಾವಿದ್ ಸೋಲ್ ಫಾರ್ಮಸಿ ಪದವಿಯನ್ನು ಹೊಂದಿದ್ದಾರೆ ಮತ್ತು ರಿಚ್ ಕಿಡ್ಸ್ ಗೋ ಸ್ಕಿಂಟ್, ಬಿಬಿಸಿಯ ಈಟಿಂಗ್ ವಿತ್ ಮೈ ಎಕ್ಸ್ ಸೀಸನ್ 2 ಮತ್ತು ಐಟಿವಿಯ ಜಡ್ಜ್ ರಿಂಡರ್ ಸೀಸನ್ 7 ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೋನಿಯಾ ಬನ್ಸಾಲ್

ನಟಿ, ಮಾಡೆಲ್ ಸೋನಿಯಾ ಬನ್ಸಾಲ್ ಕೂಡ ಬಿಗ್ ಬಾಸ್ 17 ಮನೆಯೊಳಗೆ ಕಾಣಿಸಿಕೊಳ್ಳಲಿದ್ದಾರೆ. ಇವರು ಕೆಲವು ಬಾಲಿವುಡ್ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Bigg Boss Hindi 17: Full confirmed list of contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X