twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಪ್ರಕರಣ ಸಿಬಿಐಗೆ ಒಪ್ಪಿಸಲು ನಿತೀಶ್ ಕುಮಾರ್ ಶಿಫಾರಸು: 10 ಪ್ರಮುಖ ಅಂಶಗಳು

    |

    ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರ ಪ್ರತಿಪಾದಿಸುತ್ತಿದ್ದರೆ, ಸುಶಾಂತ್ ಕುಟುಂಬ ಹಾಗೂ ಅಭಿಮಾನಿಗಳು ಇದು ನಿಯೋಜಿತ ಕೊಲೆ ಎಂದು ಆರೋಪಿಸುತ್ತಿದ್ದಾರೆ. ಅದಕ್ಕೆ ಪೂರಕವಾದ ಕೆಲವು ಅಂಶಗಳನ್ನು ಕೂಡ ಬಹಿರಂಗಪಡಿಸುತ್ತಿದ್ದಾರೆ.

    Recommended Video

    Sushant ತಂದೆ ಪ್ರಕಾರ ಕೊಲೆ , Police report ಪ್ರಕಾರ ಆತ್ಮಹತ್ಯೆ | Filmibeat Kannada

    ಇತ್ತ ಸುಶಾಂತ್ ಸಿಂಗ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮುಂಬೈಗೆ ಬಂದಿಳಿದ ಕೆಲವೇ ಗಂಟೆಯಲ್ಲಿ ಬಲವಂತವಾಗಿ ಕ್ವಾರೆಂಟೈನ್‌ಗೆ ಒಳಪಡಿಸಿರುವುದು ಆಕ್ರೋಶವನ್ನು ಹೆಚ್ಚಿಸಿದೆ. ಇದಕ್ಕೂ ಮುಂಚೆ ಬಂದಿದ್ದ ಬಿಹಾರ ಪೊಲೀಸರ ತಂಡವನ್ನು ಕ್ವಾರೆಂಟೈನ್ ಮಾಡಿರಲಿಲ್ಲ. ಅಲ್ಲದೆ, ವಿವಿಧ ಪ್ರಕರಣಗಳ ತನಿಖೆಗೆ ಬೇರೆ ಬೇರೆ ರಾಜ್ಯಗಳ ಅಧಿಕಾರಿಗಳು ಮುಂಬೈಗೆ ಭೇಟಿ ನೀಡಿದ್ದಾರೆ. ಆದರೆ ಯಾರನ್ನೂ ಹೀಗೆ ಕ್ವಾರೆಂಟೈನ್ ಮಾಡಿಲ್ಲ. ಈ ಪ್ರಕರಣ ಮುಂಬೈ-ಬಿಹಾರ ಪೊಲೀಸರು, ಬಾಲಿವುಡ್- ಸುಶಾಂತ್ ಸಿಂಗ್ ಅಭಿಮಾನಿಗಳ ಜಗಳಕ್ಕೆ ಕಾರಣವಾಗಿದೆ. ಮುಂದೆ ಓದಿ...

    ನಿತೀಶ್ ಕುಮಾರ್ ಶಿಫಾರಸು

    ನಿತೀಶ್ ಕುಮಾರ್ ಶಿಫಾರಸು

    ಈ ಪ್ರಕರಣವನ್ನು ಯಾವ ಕಾರಣಕ್ಕೂ ಸಿಬಿಐಗೆ ಒಪ್ಪಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಸುಶಾಂತ್ ಕುಟುಂಬ ಸಿಬಿಐ ತನಿಖೆಗೆ ಆಗ್ರಹಿಸಿದ್ದು, ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಬಳಿಕ ನಿತೀಶ್ ಕುಮಾರ್ ಅವರೂ ಇದನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿದ್ದಾರೆ.

    ಸಾವಿಗೂ ಮುನ್ನ ಸುಶಾಂತ್ ಗೂಗಲ್ ಮಾಡಿದ್ದೇನು? ತನಿಖೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಮುಂಬೈ ಪೊಲೀಸರುಸಾವಿಗೂ ಮುನ್ನ ಸುಶಾಂತ್ ಗೂಗಲ್ ಮಾಡಿದ್ದೇನು? ತನಿಖೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಮುಂಬೈ ಪೊಲೀಸರು

    ಫೆಬ್ರವರಿಯಲ್ಲಿಯೇ ಪೊಲೀಸರಿಗೆ ತಿಳಿಸಿದ್ದ ಕುಟುಂಬ

    ಫೆಬ್ರವರಿಯಲ್ಲಿಯೇ ಪೊಲೀಸರಿಗೆ ತಿಳಿಸಿದ್ದ ಕುಟುಂಬ

    ಸುಶಾಂತ್ ಅವರು ಸರಿಯಾಗಿ ಸಂಪರ್ಕಕ್ಕೆ ಸಿಗದೆ ಇರುವುದು ಕುಟುಂಬದವರಲ್ಲಿ ಅನುಮಾನ ಮೂಡಿಸಿತ್ತು. ಸುಶಾಂತ್ ಜೀವಕ್ಕೆ ಅಪಾಯವಿದೆ ಎಂದು ಫೆಬ್ರವರಿ 25ರಂದೇ ಬಾಂದ್ರಾ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅದನ್ನು ಪರಿಗಣಿಸಿರಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಮುಂಬೈನ ಪೊಲೀಸ್ ಅಧಿಕಾರಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶವನ್ನು ಕುಟುಂಬ ಬಹಿರಂಗಪಡಿಸಿದೆ.

    ಮುಂಬೈ ಪೊಲೀಸರ ಹೇಳಿಕೆ

    ಮುಂಬೈ ಪೊಲೀಸರ ಹೇಳಿಕೆ

    ಸುಶಾಂತ್ ಸಿಂಗ್ ಬೈಪೊಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಾಯುವ ಮುನ್ನ ನೋವಿಲ್ಲದೆ ಸಾಯುವುದರ ಕುರಿತು ಗೂಗಲ್‌ನಲ್ಲಿ ಹುಡುಕಾಡಿದ್ದರು. ಇದು ಆತ್ಮಹತ್ಯೆ ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ ಇದರ ಸುತ್ತಲೂ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಸುಶಾಂತ್ ಅವರ ಆಪ್ತರು ಎಂದು ಹೇಳಿಕೊಂಡಿದ್ದ ಅನೇಕರನ್ನು ಅವರು ವಿಚಾರಣೆ ಮಾಡಿಲ್ಲ. ಹಾಗೆಯೇ ಸುಶಾಂತ್ ಅವರ ಒಡನಾಡಿಗಳು ಸುಶಾಂತ್‌ಗೆ ಇತ್ತು ಎನ್ನಲಾದ ಮಾನಸಿಕ ಸಮಸ್ಯೆಯ ಆರೋಪವನ್ನು ತಳ್ಳಿಹಾಕಿದ್ದಾರೆ.

    ಸುಶಾಂತ್ ಜೊತೆಗಿನ ರಕ್ಷಾಬಂಧನದ ನೆನಪನ್ನು ಹಂಚಿಕೊಂಡ ಸಹೋದರಿ ಶ್ವೇತಾ ಸಿಂಗ್ಸುಶಾಂತ್ ಜೊತೆಗಿನ ರಕ್ಷಾಬಂಧನದ ನೆನಪನ್ನು ಹಂಚಿಕೊಂಡ ಸಹೋದರಿ ಶ್ವೇತಾ ಸಿಂಗ್

    ಸುಶಾಂತ್ ಕುಟುಂಬದ ಆರೋಪ

    ಸುಶಾಂತ್ ಕುಟುಂಬದ ಆರೋಪ

    ಈ ಪ್ರಕರಣವನ್ನು ಹೂತು ಹಾಕಲು ಮುಂಬೈ ಪೊಲೀಸರು ಬಯಸಿದ್ದಾರೆ ಎಂದು ಸುಶಾಂತ್ ಕುಟುಂಬ ಆರೋಪಿಸಿದೆ. ಬಿಹಾರ ಪೊಲೀಸರು ತನಿಖೆ ನಡೆಸಲು ಹೇಗೆ ಮುಂಬೈ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರೂ ನೋಡುತ್ತಿದ್ದಾರೆ. ನಮ್ಮ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅವರು ಹೇಗೆಲ್ಲ ಅವಮಾನಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಯಬಾರದು ಎಂಬ ಅವರ ಉದ್ದೇಶ ಸ್ಪಷ್ಟವಾಗುತ್ತದೆ. ಸಿಬಿಐ ತನಿಖೆಗೆ ಒಪ್ಪಿಸಲು ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ಸಿಬಿಐ ಶುದ್ಧ ತನಿಖೆ ನಡೆಸಲಿದೆ ಎಂದು ಸುಶಾಂತ್ ಸಂಬಂಧಿ ಹೇಳಿದ್ದಾರೆ.

    ಸುಶಾಂತ್ ನನ್ನನ್ನು ರಕ್ಷಿಸಿದ್ದರು

    ಸುಶಾಂತ್ ನನ್ನನ್ನು ರಕ್ಷಿಸಿದ್ದರು

    ಸುಶಾಂತ್ ಸಿಂಗ್ ತಮ್ಮನ್ನು ಆತ್ಮಹತ್ಯೆಯ ಯೋಚನೆಯಿಂದ ಉಳಿಸಿದ್ದರು ಎಂದಿರುವ ಅವರ ಸ್ನೇಹಿತ ಗಣೇಶ್ ಹಿವಾರ್ಕರ್, ಸುಶಾಂತ್ ಆತ್ಮಹತ್ಯೆಯ ಆರೋಪವನ್ನು ನಿರಾಕರಿಸಿದ್ದಾರೆ. ಸುಶಾಂತ್ ಖಿನ್ನತೆಗೆ ಒಳಗಾಗಲು ಸಾಧ್ಯವೇ ಇಲ್ಲ. ಆತ್ಮಹತ್ಯೆ ಮತ್ತು ಸುಶಾಂತ್ ಎರಡೂ ವಿರುದ್ಧ ಪದಗಳು. ಪ್ರೇಮ ವೈಫಲ್ಯದಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಆತ್ಮಹತ್ಯೆಗೂ ಯೋಚಿಸಿದ್ದೆ. ಇದರ ಬಗ್ಗೆ ಸುಶಾಂತ್‌ಗೆ ಹೇಳಿದಾಗ 15 ನಿಮಿಷದಲ್ಲಿ ನನ್ನ ಮನೆಯಲ್ಲಿದ್ದ. ಮಧ್ಯರಾತ್ರಿಯವರೆಗೂ ಕುಳಿತು ನನ್ನನ್ನು ವಾಸ್ತವಕ್ಕೆ ಬರುವಂತೆ ತರಲು ಪ್ರಯತ್ನಿಸಿದ್ದ. ಆತ್ಮಹತ್ಯೆ ಮಾಡಿಕೊಳ್ಳುವವರ ಮಾನಸಿಕ ಸ್ಥಿತಿ ಏನೆಂದು ಆತನಿಗೆ ಚೆನ್ನಾಗಿ ತಿಳಿದಿತ್ತು ಎಂದು ಗಣೇಶ್ ವಿವರಿಸಿದ್ದಾರೆ.

    ಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿ

    ಅಂತ್ಯಸಂಸ್ಕಾರದಲ್ಲಿ ಅವಕಾಶ ನೀಡಿರಲಿಲ್ಲ

    ಅಂತ್ಯಸಂಸ್ಕಾರದಲ್ಲಿ ಅವಕಾಶ ನೀಡಿರಲಿಲ್ಲ

    ಸುಶಾಂತ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿಯಾ ಚಕ್ರವರ್ತಿಗೆ ಅವಕಾಶ ನೀಡಿರಲಿಲ್ಲ ಎಂದು ಅವರ ಪರ ವಕೀಲರು ಆರೋಪಿಸಿದ್ದಾರೆ. ರಿಯಾ ಅಂದು ಮುಂಬೈನಲ್ಲಿಯೇ ಇದ್ದರು. ಆದರೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ 20 ಮಂದಿ ಪಟ್ಟಿಯ ಹೆಸರಿನಿಂದ ಅವರನ್ನು ತೆಗೆದುಹಾಕಲಾಗಿತ್ತು ಎಂದು ವಕೀಲರು ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣವು ಬಿಹಾರ ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ. ಅವರು ಇದರ ತನಿಖೆ ನಡೆಸುವಂತಿಲ್ಲ ಎಂದಿದ್ದಾರೆ.

    ವರದಿ ಕೇಳಿದ ಸಚಿವಾಲಯ

    ವರದಿ ಕೇಳಿದ ಸಚಿವಾಲಯ

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯ ಕುರಿತು ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಮಹಾರಾಷ್ಟ್ರ ಸರ್ಕಾರವನ್ನು ಕೇಳಿದೆ ಎನ್ನಲಾಗಿದೆ. ಈ ಪ್ರಕರಣದ ಕುರಿತು ಗಮನ ಹರಿಸುವಂತೆ ಗೃಹ ಇಲಾಖೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮನವಿ ಮಾಡಿದ ಹಿನ್ನೆಲೆಯಲ್ಲಿ ವರದಿಯನ್ನು ಕೇಳಿದೆ ಎಂದು ವರದಿಯಾಗಿದೆ.

    ವಾಟ್ಸಾಪ್ ಸಂದೇಶ ಹಂಚಿಕೊಂಡ ಸಿದ್ಧಾರ್ಥ್

    ವಾಟ್ಸಾಪ್ ಸಂದೇಶ ಹಂಚಿಕೊಂಡ ಸಿದ್ಧಾರ್ಥ್

    ಸುಶಾಂತ್ ಭಾವ, ಪೊಲೀಸ್ ಅಧಿಕಾರಿ ಒ.ಪಿ. ಸಿಂಗ್ ಫೆಬ್ರವರಿಯಲ್ಲಿ ತಮಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶಗಳನ್ನು ಸುಶಾಂತ್ ಸ್ನೇಹಿತ ಸಿದ್ಧಾರ್ಥ್ ಪಿಟಾನಿ ಹಂಚಿಕೊಂಡಿದ್ದಾರೆ. ಸುಶಾಂತ್ ಕುಟುಂಬದ ಜತೆ ಸಂಪರ್ಕ ಇಲ್ಲದೆ ಇದ್ದಿದ್ದರಿಂದ ಅವರು ಸಿದ್ಧಾರ್ಥ್ ಪಿಟಾನಿ ಮೂಲಕ ಸುಶಾಂತ್ ಕುರಿತು ವಿಚಾರಿಸುತ್ತಿದ್ದರು. ಅದರಲ್ಲಿ ನಿಮ್ಮ ಸಮಸ್ಯೆಗಳಿಂದ ನನ್ನ ಪತ್ನಿಯನ್ನು ದೂರ ಇರಿಸು. ನಿನ್ನ ಕಷ್ಟದಲ್ಲಿ ಸಹಾಯ ಮಾಡಲು ನಾನೊಬ್ಬನೇ ಇರುವುದು. ಈ ವಿಷಯದ ಕುರಿತು ನನ್ನ ಯೋಚನೆಗಳನ್ನು ಹೇಳಿದ್ದೇನೆ. ಅನಗತ್ಯ ಎನಿಸಿದರೆ ಅದನ್ನು ಬಿಟ್ಟುಬಿಡು. ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಸುಮ್ಮನೆ ಸಮಯ ಮತ್ತು ಶಕ್ತಿ ವ್ಯರ್ಥ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಅವರು ಸುಶಾಂತ್‌ಗೆ ಹೇಳಿದ್ದರು ಎನ್ನಲಾಗಿದೆ.

    ಸುಶಾಂತ್ ಆರೋಗ್ಯವಾಗಿದ್ದರು

    ಸುಶಾಂತ್ ಆರೋಗ್ಯವಾಗಿದ್ದರು

    ಸುಶಾಂತ್ ಜತೆ ಸುಮಾರು 8-10 ತಿಂಗಳು ಒಂದೇ ಮನೆಯಲ್ಲಿ ನೆಲೆಸಿದ್ದ ಸಾಮ್ಯುಯೆಲ್ ಹಾವೊಕಿಪ್ ಮಾಧ್ಯಮದ ಮುಂದೆ ಹೇಳಿರುವ ಸಂಗತಿಗಳು ರಿಯಾ ಮತ್ತು ಸಿದ್ಧಾರ್ಥ್ ಪಿಟಾನಿ ಕುರಿತಾದ ಅನುಮಾನಗಳನ್ನು ತೀವ್ರಗೊಳಿಸಿದೆ. 2019ರ ಜುಲೈವರೆಗೂ ಸುಶಾಂತ್ ಜತೆಗೆ ಇದ್ದ ಸಾಮ್ಯುಯೆಲ್, ಖಿನ್ನತೆ ಮತ್ತು ಬೈಪೊಲಾರ್ ಡಿಸಾರ್ಡರ್ ಮುಂತಾದ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.

    ಸಂದೀಪ್ ಸಿಂಗ್ ಗೊತ್ತೇ ಇಲ್ಲ

    ಸಂದೀಪ್ ಸಿಂಗ್ ಗೊತ್ತೇ ಇಲ್ಲ

    ಸುಶಾಂತ್ ಸಾವಿನ ಸಂಗತಿ ತಿಳಿದ ಬಳಿಕ ಸ್ನೇಹಿತರ ವಲಯದಲ್ಲಿನ ಪ್ರತಿಯೊಬ್ಬರಿಗೂ ಫೋನ್ ಮಾಡಲು ಪ್ರಯತ್ನಿಸಿದ್ದೆ. ಆದರೆ ಎಷ್ಟು ಕರೆ ಮಾಡಿದ್ದರೂ ಸಿದ್ಧಾರ್ಥ್ ಪಿಟಾನಿ ಕರೆ ಸ್ವೀಕರಿಸಲಿಲ್ಲ. ಬಳಿಕ ಟೆಕ್ಸ್ಟ್ ಮೆಸೇಜ್ ಮೂಲಕ ಸಿದ್ಧಾರ್ಥ್ ಏನಾಯ್ತು ಎಂದು ವಿವರಿಸಿದ್ದರು. ಆದರೆ ಸುಶಾಂತ್ ಸ್ನೇಹಿತ ಎಂದು ಹೇಳಿಕೊಂಡಿರುವ ಸಂದೀಪ್ ಸಿಂಗ್ ಯಾರೆಂದು ತಮಗೆ ತಿಳಿದೇ ಇಲ್ಲ. ಸುಶಾಂತ್‌ಗೆ 150 ವಿವಿಧ ಬಗೆಯ ಕನಸುಗಳಿದ್ದವು. ಅವುಗಳನ್ನು ಈಡೇರಿಸಿಕೊಳ್ಳಲು ವಿವಿಧ ವಲಯದಲ್ಲಿ ಕೆಲಸ ಮಾಡುವ ನಮ್ಮಂಥವರನ್ನು ಜತೆಗಿರಿಸಿಕೊಂಡಿದ್ದರು ಎಂದು ಎಲ್‌ಎಲ್‌ಬಿ ಓದುವಾಗ ಸುಶಾಂತ್ ಜತೆಗಿದ್ದ ಅವರು ತಿಳಿಸಿದ್ದಾರೆ.

    English summary
    Bihar Chief Minister Nitish Kumar has recommended for CBI probe in Sushant Singh Rajput's case. Here is the 10 important facts in this case.
    Tuesday, August 4, 2020, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X